ವಿದ್ಯಾರ್ಥಿಗಳ ಸಾಧನೆ ಹರ್ಷವನ್ನುಂಟು ಮಾಡಿದೆ:ಪಂಡಿತರಾವ್

ಸೈದಾಪುರ:ಜ.31: ಪಟ್ಟಣದ ಎಸ್‍ಜಿಎಸ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ರಾಯಚೂರು ನಗರದಲ್ಲಿ ಇ.ಬಾಲಾಜಿ, ಬಿ.ಲಕ್ಷ್ಮೀ ದೇವಿ ಎಮ್ಮೀನಶೇಟ್ಟಿ ವೀರಾ ಪ್ರತಾಪ ಪೌಂಡರ್ಸ ಆಯೋಜಿಸಿದ ಮಾಹಾ ವಾಸವಿ ವಿಶೇಷ ಕೌಶಲ್ಯ ಮತ್ತು ಪ್ರತಿಭಾ ಮಕ್ಕಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ಲೋಕಾ ಪಠಣೆಯಲ್ಲಿ ವಿಶ್ವಿತ, ಅನ್ವಿತಾ ಹಾಗೂ ಹಾಡುಗಾರಿಕೆಯಲ್ಲಿ ಋತ್ವಿ ಪೂರಿ, ವಿನಿತಾ ಪೂರಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಆಡಳಿತಧಿಕಾರಿ ಪಂಡಿತÀರಾವ್ ಮಕ್ಕಳಿಗೆ ಶಾಲಾ ವತಿಯಿಂದ ಅಭಿನಂದಿಸಿ ಮಾತನಾಡಿ, ವಿದ್ಯಾರ್ಥಿಗಳ ಸಾಧನೆ ಸಂತಸವನ್ನುಂಟು ಮಾಡಿದೆ. ಇದರಲ್ಲಿ ಪೋಷಕರ ಸಹಕಾರ ಅತಿ ಮುಖ್ಯವಾಗಿದ್ದೂ ಇನ್ನೂ ಹೆಚ್ಚಿನ ಸಾಧನೆ ಇವರದಾಗಲಿ ಎಂದು ಹಾರೈಸಿದರು. ಮುಖ್ಯಗುರು ಅನಮಲ್.ಜೆ, ಶಿಕ್ಷಕರು ಸೇರಿದಂತೆ ಇತರರಿದ್ದರು.