ಬೀದರ್ : ಅ.೭:ತಾಲೂಕಿನ ಯಾಕತಪುರ್ ಗ್ರಾಮದ ಲಿಟಲ್ ಫ್ಲವರ್ ಪಿಯು ಕಾಲೇಜಿನಲ್ಲಿ ದ್ವೀತಿಯ ಪಿಯು ವಿದ್ಯಾರ್ಥಿಯೋರ್ವ ತನ್ನ ಹುಟ್ಟು ಹಬ್ಬವನ್ನು ಪರಿಸರ ಕಾಳಜಿಯೊಂದಿಗೆ ಆಚರಿಸಿಕೊಂಡಿದ್ದು, ಗಮನ ಸೆಳೆದಿದೆ.ಪಿಯು ವಿದ್ಯಾರ್ಥಿ ಸೈಯ್ಯದ ಶರೀಫ್ ಮುದ್ದೆ ತನ್ನ ಜನ್ಮದಿನದ ಅಂಗವಾಗಿ ಪರಿಸರದ ರಕ್ಷಣೆಗೆ ಪ್ರೇರಣೆಯಾಗುವ ನಿಟ್ಟಿನಲ್ಲಿ ಆಚರಿಸಿದ್ದು, ಇತರರಿಗೂ ಮಾದರಿಯಾಗಿದೆ.
ಹುಟ್ಟು ಹಬ್ಬದಂದು ಕೇಕ್ ಕತ್ತರಿಸುವುದು ಇಲ್ಲ, ಚಾಕ್ಲೆಟ್ ಹಂಚುವುದು ಇಲ್ಲ ಬದಲಿಗೆಕಾಲೇಜು ಆವರಣದಲ್ಲಿ ಸೈಯ್ಯದ್‌ಶರೀಫ್ ಅವರಿಂದ ಸಸಿ ನೆಟ್ಟು ಆಚರಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿ ಸೈಯ್ಯದ್ ಶರೀಫ್ ಮುದ್ದೆ, ಪ್ರತಿ ವರ್ಷ ಹುಟ್ಟು ಹಬ್ಬದಂದು ಸಸಿ ನೆಡುವುದಾಗಿ ವಾಗ್ದಾನ ಮಾಡಿದ್ದಾರೆ.ಈ ಸಂದರ್ಭದಲ್ಲಿ ಸಂಸ್ಥೆ ಅಧ್ಯಕ್ಷರು, ಪ್ರಾಂಶುಪಾಲರು, ಸಿಬ್ಬಂದಿ ವರ್ಗದವರು ಹಾಗೂ ದ್ವೀತಿಯ ಪಿಯು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.























