Home ಜಿಲ್ಲೆ ಬೆಂಗಳೂರು ವಿದ್ಯಾರ್ಥಿಗಳ ಸಾಧನೆ ಮುಂದಿನ ಹಂತಕ್ಕೆ ಬುನಾದಿ

ವಿದ್ಯಾರ್ಥಿಗಳ ಸಾಧನೆ ಮುಂದಿನ ಹಂತಕ್ಕೆ ಬುನಾದಿ

ಚಿಕ್ಕಬಳ್ಳಾಪುರ,ಮೇ೫:ವ್ಯಾಸಂಗದ ಅವಧಿಯಲ್ಲಿ ವಿದ್ಯಾರ್ಥಿಗಳು ಸಾಧನೆ ಎಂಬುದನ್ನು ಮಾತ್ರ ಶ್ರೇಷ್ಠ ಎಂದುಕೊಳ್ಳುವುದಲ್ಲ ಬದಲಿಗೆ ಅದು ಮುಂದಿನ ಹಂತಕ್ಕೆ ಭದ್ರ ಬುನಾದಿ ಆಗಬೇಕು ಅಂತಹ ಸಂಸ್ಕೃತಿ ಸಂಬಂಧವನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದು ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಸಂದೀಪ ಬಿ ರೆಡ್ಡಿ ಹೇಳಿದರು.


ಅವರು ನಗರದ ಕೃಷ್ಣ ಟಾಕೀಸ್ ರಸ್ತೆಯಲ್ಲಿರುವ ಬ್ರಹ್ಮಾಕುಮಾರೀಸ್ ಸಂಸ್ಥೆಯ ಶಿವ ಪ್ರೇರಣಾ ಭವನದಲ್ಲಿ ಪ್ರಜಾಪಿತಾ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯ ಹಾಗೂ ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಚಿಕ್ಕಬಳ್ಳಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಟಾಪರ್ ಆಗಿ ಹೊರಹೊಮ್ಮಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗೌರವ ಸಮರ್ಪಣೆ ನೆರವೇರಿಸಿ ಮಾತನಾಡಿ, ಪ್ರಪಂಚದ ಯಾವುದೇ ದೇಶದಲ್ಲಿ ಇಲ್ಲದ ಸಂಸ್ಕೃತಿ, ಭಾಷೆ, ಧರ್ಮ ಇವೆಲ್ಲವುಗಳನ್ನ ಒಗ್ಗೂಡಿಸಿಕೊಂಡು ಸಮರಸ್ಯ ಹೊಂದಿರುವ ದೇಶ ನಮ್ಮ ಭಾರತ ದೇಶ ಈ ದೇಶದ ಬಗ್ಗೆ ಎಲ್ಲರಿಗೂ ಹೆಮ್ಮೆ ಇರಬೇಕು ದೇಶ ಕಟ್ಟುವ ಕೆಲಸ ಮಾಡಬೇಕು ನಮ್ಮ ಸಂಸ್ಕೃತಿಯನ್ನ ಪ್ರಪಂಚದಾದ್ಯಂತ ಹರಡಿಸುತ್ತಾ ತನ್ನ ಶ್ರೇಷ್ಠತೆಯನ್ನು ಪಡೆಯುವಂತೆ ನನ್ನ ಎಲ್ಲಾ ವಿದ್ಯಾರ್ಥಿಗಳು ಅಂಕ ಗಳಿಸಿರುವುದನ್ನೇ ಮಾನದಂಡವನ್ನಗಿಸಿಕೊಳ್ಳಬೇಡಿ ವಿದ್ಯೆಯಿಂದ ವಿನಯತೆ ಪಡೆದು ಜೀವನದಲ್ಲೂ ಶ್ರೇಷ್ಠತೆ ಪಡೆಯುವಂತಾಗಬೇಕು ಅದು ನಿಜವಾದ ಸಾಧನೆ ನಮ್ಮ ಜೊತೆಗಿರುವ ಯಾರ ಬಗ್ಗೆಯೂ ಅಸೂಯೆ ಬೇಡ ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದ ಅವರು ಮಾನವೀಯತೆ ರೂಡಿಸಿಕೊಳ್ಳಬೇಕು ಪ್ರತಿ ಹಂತದಲ್ಲೂ ಉನ್ನತ ಸ್ಥಾನದತ್ತ ತಮ್ಮ ಗುರಿ ಇಡುವುದರ ಜೊತೆಗೆ ಗುರು ಹಿರಿಯರ ಬಗ್ಗೆ ಹೆತ್ತ -ತಂದೆ ತಾಯಿ ಬಗ್ಗೆ ವ್ಯಾಸಂಗ ಮಾಡಿದ ಶಾಲೆಯ ಬಗ್ಗೆ ಹೆಮ್ಮೆ ಇರಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿ ಸಂದೀಪ ಬಿ ರೆಡ್ಡಿ ಮನನ ಮಾಡಿದರು.


ಇದೆ ವೇಳೆ ರಾಜ್ಯದಲ್ಲಿಯೇ ಎರಡನೇ ರಾಂಕ್ ಪಡೆದ ಮಂಚನಬೆಲೆ ಗ್ರಾಮೀಣ ಪ್ರತಿಭೆ ಪ್ರಣತಿರಾಜ್ ಸೇರಿದಂತೆ ಜಿಲ್ಲೆ ತಾಲೂಕು ಹಾಗೂ ಶಾಲಾ ಹಂತದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಧನುಶ್ರೀ ೬೨೧
ಅಗಲಗುರ್ಕಿ ಬಿಜಿಎಸ್ ಶಾಲೆಯ ಕುಶಲ ಕೆ. ಎಸ್. ಭಾರತಿ ಪ್ರೌಢಶಾಲೆಯ ಕೆ.ಎನ್.ವೀಣಾ, ಶೃತಿ.ಸಿ, ಪೂರ್ವಿಕ ಆರ್, ವಾಪಸಂದ್ರ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯ ಕರುಣಶ್ರೀ, ನಿಹಾರಿಕಾ ಕೆ.ಎನ್, ಅನುಜ, ಚಂದ್ರದೀಪ ಕೆ.ಎಲ್, ವೈಷ್ಣವಿ ಎಸ್, ಅನಂತ ವಿದ್ಯಾನಿಕೇತನ ಶಾಲೆಯ ರಾಜಸ್ ಸಿ.ಎಂ. ಪ್ರಕೃತಿ ವಿದ್ಯಾನಿಕೇತನ ಶಾಲೆಯ ತೇಜಸ್ವಿನಿ ಎಂ., ದರ್ಶನ್ ವಿಷ್ಣು, ಅನುಪಮಾ ಎಂ ರವರುಗಳನ್ನು ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಸಂದೀಪ ಬಿ ರೆಡ್ಡಿ, ಮೌಂಟ್ ಅಬು ಮಧುಬನ ನಿವಾಸಿ ರಾಮಕೃಷ್ಣಣ್ಣ, ಪ್ರಜಾಪಿತ ಬ್ರಹ್ಮಾ ಕುಮಾರೀಸ್ ಈಶ್ವರೀಯ ವಿಶ್ವ ವಿದ್ಯಾಲಯದ ಸ್ಥಾನಿಕ ಸಂಚಾಲಕರಾದ ರಾಜಯೋಗಿನಿ ಬಿ.ಕೆ.ಲಲಿತ ಅಕ್ಕ, ಸಾರ್ವಜನಿಕ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪ ನಿರ್ದೇಶಕರ ಕಚೇರಿಯ ವಿಷಯ ಪರೀಕ್ಷಕ ಅಂಜಿನಪ್ಪ, ಹಿರಿಯ ಪತ್ರಕರ್ತ ಎಚ್.ವಿ.ಸೋಮಶೇಖರ್ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗೌರವ ಸಮರ್ಪಣೆ ಸನ್ಮಾನಿಸಿದರು.


ಇದೆ ವೇಳೆ ಮೌಂಟ್ ಅಬು ಮಧುಬನ ನಿವಾಸಿ ರಾಮಕೃಷ್ಣಣ್ಣ, ವಿದ್ಯಾರ್ಥಿಗಳು ಮೌಲ್ಯಗಳನ್ನ ರೂಡಿಸಿಕೊಳ್ಳುವುದರ ಬಗ್ಗೆ ತಮ್ಮ ಜೀವನವನ್ನು ಶ್ರೇಷ್ಠತೆ ಮಾಡಿಕೊಳ್ಳುವುದರ ಬಗ್ಗೆ ಸರಳ ಧ್ಯಾನದಿಂದ ಉಂಟಾಗುವ ಒಳಿತಿನ ಬಗ್ಗೆ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಮನನ ಮಾಡಿದರು.


ಟಿ ಡಿ ಪಿ ಐ ಕಚೇರಿಯ ವಿಷಯ ಪರಿವೀಕ್ಷಕ ಅಂಜಿನಪ್ಪ ಮಾತನಾಡಿ, ವಿದ್ಯೆ ಕೇವಲ ಅಂಕಗಳಿಗೆ ಸೀಮಿತ ಸಲ್ಲ ಜೀವನದಲ್ಲಿ ಸಂಸ್ಕಾರವನ್ನ ಬೆಳೆಸಿಕೊಳ್ಳಲು ಇದು ಉಪಯೋಗ ಆಗಬೇಕು ಸರ್ಕಾರ ಶಿಕ್ಷಣದ ಗುಣಮಟ್ಟ ಹೆಚ್ಚು ಮಾಡುವ ದಿಸೆಯಲ್ಲಿ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ ವಿದ್ಯಾರ್ಥಿಗಳಿಗೆ ಕಲಿಕೆಯ ಪ್ರಾರಂಭದಿಂದ ಮೊದಲ ಪರೀಕ್ಷೆ ಎಸ್ ಎಸ್ ಎಲ್ ಸಿ ಯಾಗಲಿದೆ ಪ್ರತಿಯೊಬ್ಬರೂ ಗುಣಮಟ್ಟದ ಶಿಕ್ಷಣದೊಂದಿಗೆ ತಮ್ಮ ಬದ್ಧತೆಯನ್ನು ತೋರಿಸಬೇಕು ಎಂದು ಕಿವಿಮಾತು ಹೇಳಿದರು.


ಹಿರಿಯ ಪತ್ರಕರ್ತ ಎಚ್.ವಿ.ಸೋಮಶೇಖರ್ ಮಾತನಾಡಿ, ಅನೇಕ ಸಂಘ ಸಂಸ್ಥೆಗಳು ವಿದ್ಯಾರ್ಥಿಗಳ ಹಿತವನ್ನ ಬಯಸಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿದೆ, ಇದರ ಉದ್ದೇಶ ನಿಮ್ಮ ಶಿಕ್ಷಣದ ಮೌಲ್ಯ ನಿಮ್ಮ ಗುರಿ ಉನ್ನತ ಮಟ್ಟದ ಶಿಕ್ಷಣ ಇನ್ನಷ್ಟು ಮತ್ತಷ್ಟು ಹೆಚ್ಚು ಮಾಡಲು ನಿಮಗೆ ಸವಾಲು ಆಗಲಿದೆ ಈ ಸನ್ಮಾನ ಗೌರವ ಸಮರ್ಪಣೆ ನಿಮ್ಮ ಮೇಲಿನ ಜವಾಬ್ದಾರಿಯನ್ನ ಇನ್ನಷ್ಟು ಕಲಿಕೆಯ ಹಾದಿ ಸುಲಭಗೊಳಿಸಲಿದೆ ಎಂದರು.


ಶಿಕ್ಷಕ ಹಾಗೂ ಸಹೋದರ ಮಂಜುನಾಥ್, ರಾಮಕೃಷ್ಣಣ್ಣ, ಬಿ.ಕೆ.ರೇಣುಕಾ, ಚಿನ್ನಮ್ಮ, ಲಕ್ಷ್ಮಿದೇವಮ್ಮ, ಮಂಚೇನಹಳ್ಳಿ ಬಿ.ಕೆ. ಸಹೋದರಿ ಮಂಜುಳಾ, ಪತ್ರಕರ್ತ ಎಂ ಕೃಷ್ಣಪ್ಪ, ಸೇರಿದಂತೆ ಪ್ರಕೃತಿ ವಿದ್ಯಾನಿಕೇತನ್, ವಾಪಸಂದ್ರ ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಇಂಡಿಯನ್ ಪಬ್ಲಿಕ್ ಸ್ಕೂಲ್, ಅನಂತ ವಿದ್ಯಾನಿಕೇತನ್ ಭಾರತಿ ಪ್ರೌಢಶಾಲೆ ಪೀಜಿಎಸ್ ಮಂಚನಬಲೆ ಮತ್ತು ಅಗಲಗುರ್ಕಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಶಿಕ್ಷಕ ವೃಂದದವರು ಪೋಷಕರು ಇದ್ದರು