Home ಜಿಲ್ಲೆ ಬೆಂಗಳೂರು ಪರಿಶಿಷ್ಟ ನೌಕರರ ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ಅನಿವಾರ್ಯ

ಪರಿಶಿಷ್ಟ ನೌಕರರ ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ಅನಿವಾರ್ಯ

ಬಂಗಾರಪೇಟೆ ಫೆ,೧೫- ಪರಿಶಿಷ್ಟ ನೌಕರರ ಸಮಸ್ಯೆಗಳು ದಿನ ಕಳೆದಂತೆ ಒಂದಲ್ಲ ಒಂದು ಸಮಸ್ಯೆಗಳು ಹೆಚ್ಚುತ್ತಿದೆ. ಇದರ ಪರಿಹಾರಕ್ಕೆ ಸಂಘಟಿತ ಹೋರಾಟ ಸಂಘಟಿತ ಪ್ರಯತ್ನ ಆಗಬೇಕು. ಹೀಗಾಗಿ ಪರಿಶಿಷ್ಟರು ಒಂದೇ ಸೂರಿನಡಿ ಹೋರಾಟದ ದಾರಿಯನ್ನು ತುಳಿದಾಗ ಬೇಡಿಕೆಗಳು ಈಡೇರುತ್ತದೆ. ಶಾಸಕಾಂಗ ಮತ್ತು ಕಾಯಾಂಗಗಳು ನಮ್ಮ ಸಮಸ್ಯೆಗೆ ಆಸಕ್ತಿ ತೋರಿದಾಗ ಮಾತ್ರ ಬೇಡಿಕೆಗಳು ಈಡೇರುತ್ತದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ ಎಸ್ಟಿ ನೌಕರರ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷರು ಎನ್. ಮುನಿರಾಜು ಅಭಿಪ್ರಾಯ ಪಟ್ಟರು.


ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸಮಿತಿಯ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಅವರು ಮಾತನಾಡಿ,ಪ್ರತಿ ಇಲಾಖೆಯನ್ನು ಪರಿಶಿಷ್ಟ ನೌಕರರು ತಮ್ಮದೇ ಆದ ಇತಮಿತಿಯಲ್ಲಿ ಚಿಂತನೆ ನಡೆಸಿ ಸಂಘಟಿತ ಹೋರಾಟ ಮತ್ತು ಪ್ರಯತ್ನವನ್ನು ಮತ್ತಷ್ಟು ಸಂಘಟಿತರಾದಾಗ ಮಾತ್ರ ಸಮಸ್ಯೆಗಳು ಈಡೇರುತ್ತದೆ ಎಂದರು.


ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರ ಆಶಯದಂತೆ ಸಮಾಜದ ಎಲ್ಲಾ ವರ್ಗಗಳ ಜನರ ಜೊತೆ ಸೌಹಾರ್ದ ಮನೋಭಾವ ಮತ್ತು ಸಹೋದರತ್ವ ಮೈಗೂಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಜೊತೆಯಲ್ಲಿ ನೌಕರ ಹಿತಾಸಕ್ತಿಗೆ ಸದಾ ಜಾಗೃತರಾಗಿ ಕಾರ್ಯಗಳನ್ನು ಮಾಡಬೇಕು ಎಂದು ನೌಕರ ಮುಖಂಡರಿಗೆ ಸಲಹೆ ನೀಡಿದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಮಿತಿಯ ತಾಲೂಕು ಅಧ್ಯಕ್ಷ ನಾಗರಾಜಪ್ಪ ಮಾತನಾಡಿ ತಾಲೂಕಿನ ಅತ್ಯಂತ ವಿವಿಧ ಇಲಾಖೆಗಳಲ್ಲಿ ಇರುವ ಪರಿಶಿಷ್ಟ ನೌಕರರು ಒಂದೇ ಸೂರಿನಡಿ ಸೇರ್ಪಡೆಯಾಗಲು ಸದಸ್ಯತ್ವ ಆಂದೋಲನವನ್ನು ಆರಂಭ ಮಾಡಿದ್ದು ಇದರಲ್ಲಿ ತಾವು ಸ್ವಯಂ ಸೇರ್ಪಡೆ ಆಗಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾ ಗೌರವಾಧ್ಯಕ್ಷ ಜಿ ಶ್ರೀನಿವಾಸ್ ಮುಖಂಡರುಗಳಾದ ಲೋಕೇಶ್ ಅಶ್ವಿನ್ ಮುರುಗೇಶ್ ಮತದಾರರು ಉಪಸ್ಥಿತರಿದ್ದರು