ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಖಾಸಗಿ ಬ್ಯಾಂಕುಗಳ ಸಿಬ್ಬಂದಿಗಳಿAದ ಮುಷ್ಕರ

ಅಥಣಿ : ಜ.೨೮:ದೇಶದಲ್ಲಿರುವ ಎಲ್ಲ ರಾಷ್ಟ್ರೀಕೃತ ಬ್ಯಾಂಕ ಹಾಗೂ ಖಾಸಗಿ ಬ್ಯಾಂಕುಗಳ ವಾರದ ೫ ದಿನ ಮಾತ್ರ ಕರ್ತವ್ಯ ನಿರ್ವಹಣೆ ಮಾಡುವಂತೆ ಕೇಂದ್ರ ಸರಕಾರ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಅಥಣಿಯ ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕುಗಳ ಸಿಬ್ಬಂದಿಗಳಿAದ ಬ್ಯಾಂಕ್ ಬಂದ್ ಮಾಡಿ ಪ್ರತಿಭಟನೆ ನಡೆಸಿದರು
ಅಥಣಿ ಪಟ್ಟಣದ ಫೇಡರಲ್ ಬ್ಯಾಂಕ ಶಾಖೆಯ ಮುಂದೆ ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕುಗಳ ಸಿಬ್ಬಂದಿಗಳು ಕೈಗೆ ಕಪ್ಪು ಬಟ್ಟೆ ಧರಿಸಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮಂಗಳವಾರ ಸಾಂಕೇತಿಕವಾಗಿ ಒಂದು ದಿನ ಬ್ಯಾಂಕ್ ಬಂದ್ ಮಾಡಿ ನಮ್ಮ ಬೇಡಿಕೆಗಳಿಗೆ ಕೇಂದ್ರ ಸರಕಾರ ಸ್ಪಂದಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು
ಈ ವೇಳ ಕೆನರಾ ಬ್ಯಾಂಕಿನ ಸಿಬ್ಬಂದಿ ರಾಜು ಪೂಜಾರಿ ಮಾತನಾಡಿ ೨೦೨೨-೨೩ ರಲ್ಲಿ ಕೇಂದ್ರ ಸರಕಾರ ೫ ದಿನಗಳು ಬ್ಯಾಂಕ ಕಾರ್ಯ ನಿರ್ವಹಣೆ ಮಾಡಲು ಒಪ್ಪಿಕೊಂಡಿತ್ತು ಆದರೆ ಅದರ ಆದೇಶ ಇನ್ನು ಅನ್ವಯವಾಗಿಲ್ಲ ಹಾಗಾಗಿ ಕೇಂದ್ರ ಸರಕಾರದ ಅಧೀನದಲ್ಲಿರುವ ಇತರ ಕ್ಷೇತ್ರಗಳಿಗೆ ಅನ್ವಯವಾಗಿದ್ದು, ಆದರೆ ರಾಷ್ಟ್ರೀಕೃತ ಬ್ಯಾಂಕ ಹಾಗೂ ಖಾಸಗಿ ಬ್ಯಾಂಕುಗಳ ಸಿಬ್ಬಂದಿಗಳು ಇದರಿಂದ ವಂಚಿತರಾಗಿದ್ದು ಈ ತಾರತಮ್ಯವನ್ನು ಸರಕಾರ ಸರಿಪಡಿಸಿ ೫ ದಿನಗಳ ಕಾರ್ಯ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರಬೇಕು ಇಲ್ಲವಾದರೆ ಮುಂದಿನ ದಿನಮಾನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದರು
ಈ ವೇಳೆ ವಿವಿಧ ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ ಸಿಬ್ಬಂದಿಗಳಾದ ತಿರುಪತಿ ಹೇರಕಲ್, ಸುರೇಶ ಜೋಶಿ, ಅಶೋಕ ಬಬೂಜಿ, ಆನಂದ ತೇಲಿ, ರಾಜು ಪೂಜಾರಿ, ರಾಜಕುಮಾರ ಕುರಣಿ, ಮಹಾವೀರ ಜೆ, ಲಕ್ಷ್ಮಣ ಬುರುಡ, ಸಿದ್ದರಾಮ ಎಸ್, ಮುತ್ತಪ್ಪ, ಪರಮೇಶ್ವರ, ಮಹೇಶ ಡಂಬಳಕರ, ಸುನೀಲ ಆಚಾರಟ್ಟಿ, ಸಚೀನ ಸೌದತ್ತಿ ಸೇರಿದಂತೆ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.