
ಮುದ್ದೇಬಿಹಾಳ :ಡಿ.೧೧: ಸನಾತನ ಧರ್ಮದ ಮದುವೆಯು ಕೇವಲ ಸಾಮಾಜಿಕ ಸಮಾರಂಭವಲ್ಲ, ಬದಲಿಗೆ ಬ್ರಹ್ಮಚರ್ಯದಿಂದ ಗೃಹಸ್ಥಾಶ್ರಮಕ್ಕೆ ಪಾದಾರ್ಪಣೆ ಮಾಡುವ ಆಧ್ಯಾತ್ಮಿಕ ಸಂಸ್ಕಾರ, ಒಳಗೊಂಡಿರುತ್ತದೆ ಇದರಲ್ಲಿ ಗಣೇಶ ಪೂಜೆ, ಕನ್ಯಾದಾನ, ಸಪ್ತಪದಿ ಮತ್ತು ಹವನಗಳಂತಹ ಪವಿತ್ರ ಆಚರಣೆಗಳು ಒಳಗೊಂಡಿರುತ್ತವೆ ಎಂದು ಬ.ಬಾಗೇವಾಡಿ ಹಿರೇಮಠದ ಶ್ರೀ.ಷ.ಬ್ರ.ಶಿವಪ್ರಕಾಶ ಮಹಾ ಸ್ವಾಮಿಗಳು ನುಡಿದರು.
ಸೋಮವಾರರಂದು ಪಟ್ಟಣದ ಮದರಿ ಸಭಾ ಭವನದಲ್ಲಿ ನಲವಡೆ ಕುಟುಂಭದವರ ವತಿಯಿಂದ ಆಯೋಜಿಸಲಾದ ರೋಹನ-ಪ್ರೀಯಾಂಕ ಅವರ ವಿವಾಹ ಮಹೋತ್ಸವ ಸಮಾರಂಭದಲ್ಲಿ ದಿವ್ಯ ಸಾನಿದ್ಯ ವಹಿಸಿ ನೂತನ ವಧುವರರಿಗೆ ಆಶಿರ್ವದಿಸಿ ಸನ್ಮಾನ ಸ್ವಿಕರಿಸಿ ಮಾತನಾಡುತ್ತಿದ್ದ ಅವರು ಸನಾತನ ಹಿಂದೂ ಧರ್ಮದ ಪದ್ದತಿಯಲ್ಲಿ ನಡೆಯುವ ವಿವಾಹ ಮಹೋತ್ಸವಗಳು ಅರ್ಥ, ಕಾಮ ಮತ್ತು ಮೋಕ್ಷದ ಗುರಿಗಳನ್ನು ಸಾಧಿಸಲು ವಧು-ವರರ ಜೀವನಕ್ಕೆ ಮಾರ್ಗದರ್ಶನ ನೀಡುತ್ತವೆ, ಜೊತೆಗೆ ವೈದಿಕ ಮಂತ್ರಗಳು ಮತ್ತು ಆಶೀರ್ವಾದಗಳಿಂದ ಈ ಬಂಧವನ್ನು ಪವಿತ್ರಗೊಳಿಸಲಾಗುತ್ತದೆ. ಸಮಾರಂಭದ ಆರಂಭದಲ್ಲಿ ಗಣೇಶನನ್ನು ಪೂಜಿಸಿ, ಮದುವೆಯ ಅಡೆತಡೆಗಳನ್ನು ನಿವಾರಿಸಲು ಪ್ರಾರ್ಥಿಸಲಾಗುತ್ತದೆ. ಮಂಡಪವನ್ನು ಸ್ಥಾಪಿಸುವುದರಿಂದ ದೈವಿಕ ಶಕ್ತಿಗಳ ಉಪಸ್ಥಿತಿಯನ್ನು ಆಹ್ವಾನಿಸಲಾಗುತ್ತದೆ ಎಂದರು.
ಇನ್ನೋರ್ವ ಗುಂಡಕನಾಳ ಹಿರೇಮಠದ ಶ್ರೀ ಷ.ಬ್ರ.ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಮಧುವೆ ಎಂಬುದು ಬಿಡಿಸಲಾಗದ ಸಂಬAದವಾಗಿದೆ ವಧುವಿನ ತಂದೆಯು ತನ್ನ ಮಗಳನ್ನು ವರನಿಗೆ ಹಸ್ತಾಂತರಿಸುವ ಪವಿತ್ರ ಕ್ರಿಯೆ, ಇದು ವಧುವಿನ ಜೀವನದ ಜವಾಬ್ದಾರಿಯನ್ನು ವರನಿಗೆ ನೀಡುತ್ತದೆ. ಸಪ್ತಪದಿ (ಏಳು ಹೆಜ್ಜೆ) ಅಗ್ನಿ ಸಾಕ್ಷಿಯಾಗಿ ವಧು-ವರರು ಏಳು ಸುತ್ತುಗಳು ನಡೆಯುತ್ತಾರೆ, ಪ್ರತಿ ಸುತ್ತು ಜೀವನದ ಒಂದು ನಿರ್ದಿಷ್ಟ ಪ್ರತಿಜ್ಞೆ ಮತ್ತು ಉದ್ದೇಶವನ್ನು ಪ್ರತಿನಿಧಿಸುತ್ತದೆ, ಇದು ಶಾಶ್ವತ ಬದ್ಧತೆಯನ್ನು ಸಂಕೇತಿಸುತ್ತದೆ ಮುದ್ದೇಬಿಹಾಳದ ನೇತಾಜಿ ನಲವಡೆ ಕುಟುಂಭದವರು ತಮ್ಮ ಪುತ್ರ ರೋಹನ್ ಅವರ ಮಧುವೆ ಕಾರ್ಯದಲ್ಲಿ ನಾಡಿನ ಸಂತರನ್ನು ಕರೆಯಿಸಿ ವಿಶೇಷವಾಗಿ ಗೌರವಿಸುವದರೊಂದಿಗೆ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುವ ಕಾರ್ಯ ಮಾಡಿರುವದು ಶ್ಲಾಘನೀಯವಾಗಿದೆ ಎಂದರು.
ಇನ್ನೋರ್ವ ಆಲಮೇಲ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಆಡಂಬರದ ಮಧುವೆಗಿಂದ ನಮ್ಮ ಸಮಾತನ ಧರ್ಮದ ಪದ್ದತಿ ಮತ್ತು ಸಂಸ್ಕಾರದಡಿ ಸಮಾರಂಭಗಳು ನಡೆಯಬೇಕು ಅಂತಹ ಹಿಂದೂ ಧರ್ಮದ ಸನಾತನ ಪದ್ದತಿಯಂತೆ ನಲವಡೆ ಕುಟುಂಭದವರ ಮಧುವೆ ಸಮಾರಂಭದಲ್ಲಿ ಸಾಕಷ್ಟು ಜನ ಸಂತರನ್ನು ಕರೆಯಿಸಿ ದಾರ್ಮಿಕ ಪದ್ದತಿ ವಿವಾಹ ಮಹೋತ್ಸವ ಕೈಗೊಂಡಿರುವದು ಮಾದರಿಯಾಗಿದೆ ಎಂದರು.
ಇನ್ನೋರ್ವ ಕೆಸರಟ್ಟಿಯ ಶಂಕರಲಿAಗ ಗುರುಪೀಠದ ಶ್ರೀ ಸೋಮಲಿಂಗ ಮಹಾಸ್ವಾಮಿಗಳು ಮಾತನಾಡಿ ವಿವಾಹ ಎಂಬುದು ಗಂಡು ಹೆಣ್ಣನ ಬಿಡಿಸಲಾಗದ ಸಂಬAದವಾಗಿದೆ ಈ ಸಂಬAದ ಗಟ್ಟಿಗೊಳಿಸಲು ವಿವಾಹ ಮಹೋತ್ಸವದಲ್ಲಿ ಪವಿತ್ರ ಅಗ್ನಿಯಲ್ಲಿ ವಿವಿಧ ಹವನ ಸಾಮಗ್ರಿಗಳನ್ನು ಅರ್ಪಿಸಲಾಗುತ್ತದೆ. ಇದು ದೈವಿಕ ಶಕ್ತಿಗಳ ಸಾಕ್ಷಿಯಾಗಿ ಒಕ್ಕೂಟವನ್ನು ಪವಿತ್ರಗೊಳಿಸುತ್ತದೆ. ವರನು ವಧುವಿಗೆ ಸಿಂಧೂರವನ್ನು ಹಚ್ಚುತ್ತಾನೆ ಮತ್ತು ಮಂಗಳಸೂತ್ರವನ್ನು ಕಟ್ಟುತ್ತಾನೆ. ಇದು ಪತಿ-ಪತ್ನಿಯರ ಬಾಂಧವ್ಯ ಮತ್ತು ವಧುವಿನ ಸೌಭಾಗ್ಯದ ಸಂಕೇತವಾಗಿದೆ ಮದುವೆಯು ಜೀವನದ ನಾಲ್ಕು ಮುಖ್ಯ ಗುರಿಗಳಾದ ಧರ್ಮ (ಕರ್ತವ್ಯ), ಅರ್ಥ (ಸಂಪತ್ತು), ಕಾಮ (ಆಸೆಗಳು) ಮತ್ತು ಮೋಕ್ಷ (ವಿಮೋಚನೆ)ಗಳನ್ನು ಪೂರೈಸಲು ಸಹಾಯ ಮಾಡುತ್ತದೆ ಇದು ಬ್ರಹ್ಮಚರ್ಯದ ನಂತರದ ಜೀವನದ ಎರಡನೇ ಹಂತವಾಗಿದ್ದು, ಜವಾಬ್ದಾರಿ ಮತ್ತು ಸಮುದಾಯಕ್ಕೆ ಕೊಡುಗೆ ನೀಡುವುದನ್ನು ಸೂಚಿಸುತ್ತದೆ ಮತ್ತು ಕಲಿಸುತ್ತದೆ ಎಂದರು.
ಇದೇ ಸಮಯದಲ್ಲಿ ಆಗಮಿಸಿದ ವಿವಿಧ ಮಠಗಳ ಮಠಾಧೀಶರಿಗೆ ನಲವಡೆ ಕುಟುಂಭದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಮಠಾಧೀಶರು ವಿವಿಧ ಮಂತ್ರಪಠಣಗಳೊAದಿಗೆ ನೂತನ ದಂಪತಿ ರೋಹನ್-ಪ್ರೀಯಾಂಕಾ ಒಳಗೊಂಡು ವಿವಾಹ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರಿಗೂ ಆಶಿರ್ವದಿಸಿದರು.
ಈ ಸಮಯದಲ್ಲಿ ಚಿಮ್ಮಲಗಿ ಹಿರೇಮಠದ ಶ್ರೀ ಸಿದ್ದರೇಣುಕ ಶಿವಾಚಾರ್ಯ ಮಹಾಸ್ವಾಮಿಗಳು, ಬಳವಾಟದ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಕೊಣ್ಣೂರ-ಮುಳವಾಡದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಬಾಗಲಕೋಟೆಯ ಶ್ರೀ ರಾಘವೇಂದ್ರ ಮಠದ ವೇ,ಆಧಿಶೇಷ ಆಚಾರ್ಯ, ವೇ.ಶ್ರೀನಿವಾಸ ಗಜೇಂದ್ರಗಡ, ಹಾಗೂ ನೇತಾಜಿ ನಲವಡೆ, ಪ್ರಕಾಶ ಜಾಧವ, ಅಸ್ಕಿ ಪೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ, ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ), ಪ್ರಭುಗೌಡ ದೇಸಾಯಿ, ಡಾ.ವಿರೇಶ ಪಾಟೀಲ, ಡಾ.ಬಸವರಾಜ ಮುತ್ತತ್ತಿ, ವಿಕ್ರಮ ಓಸ್ವಾಲ, ರಾಜೇಂದ್ರ ಭೋಸಲೆ, ಜಿ.ಟಿ.ಘೋರ್ಪಡೆ, ಸುರೇಶಗೌಡ ಪಾಟೀಲ, ಮೊದಲಾದವರು ಉಪಸ್ಥಿತರಿದ್ದರು.
























