ಮಕ್ಕಳಿಂದಲೇ ಶಕ್ತಿ, ಮಕ್ಕಳಿಂದಲೇ ಮುಕ್ತಿ-ಜಗದೀಶ

ತಾಳಿಕೋಟೆ, ನಲ೧೫- ತಂದೆತಾಯಿಗಳಿಗೆ ಮುಕ್ತಿ ಸೀಗಬೇಕಾದರೇ ಮಕ್ಕಳಿಂದಲೇ ಸಾಧ್ಯ ಮಕ್ಕಳಿಂದಲೇ ಸರ್ವಸ್ವ ದೊರೆಯಲಿದೆ ಆ ಕಾರಣಕ್ಕಾಗಿಯೇ ಮಾಜಿ ಪ್ರಧಾನಿ ಜವಾಹಾರಲಾಲ್ ನೆಹರು ಅವರು ಮಕ್ಕಳ ದಿನಾಚರಣೆಯನ್ನು ಹುಟ್ಟುಹಾಕಲು ಕಾರಣವಾಯಿತೆಂದು ಎಸ್.ಕೆ.ಪ್ರೌಢ ಶಾಲೆಯ ಉಪಪ್ರಾಚಾರ್ಯರಾದ ಜಗದೀಶ ಕಟ್ಟಿಮನಿ ಅವರು ನುಡಿದರು.
ಶುಕ್ರವಾರರಂದು ಎಸ್.ಕೆ.ಪೌಢ ಶಾಲೆಯಲ್ಲಿ ಮಕ್ಕಳ ದಿನಾಚಾರಣೆ ಕುರಿತು ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಜವಾಹಾರಲಾಲ ನೇಹರು ಅವರ ಭಾವಚಿತ್ರಕ್ಕೆ ಪುಷ್ಪಹಾರ ಹಾಕಿ ಗೌರವಿಸಿ ಮಾತನಾಡುತ್ತಿದ್ದ ಅವರು ನ.೧೪ ರಂದು ಪ್ರತಿ ವರ್ಷ ಮಕ್ಕಳ ದಿನಾಚಾರಣೆಯನ್ನು ಆಚರಿಸಿಕೊಂಡು ಬರಲಾಗುತಿದೆ ಅವರ ಜನ್ಮದಿನವನ್ನೆ ಮಕ್ಕಳ ದಿನಾಚಾರಣೆಯನ್ನಾಗಿ ಆಚರಿಸಲಾಗುತ್ತದೆ ಎಂದರು. ಮಕ್ಕಳಿರ ಬೇಕು ಮನೆಯ ತುಂಬಾ ಶಾಲೆ ನಡೆಯಲು ಕೂಡ ಮಕ್ಕಳೇ ಬೇಕು ಮಕ್ಕಳು ಎಲ್ಲರಿಗೂ ಸರ್ವಸ್ವವೆಂದು ಹೇಳಿದ ಅವರು ಮಕ್ಕಳಿಗೆ ಶುಭಾಷಯ ಕೊರುತ್ತಾ ಹೊಸತನವೆಂಬುದನ್ನು ಸೃಷ್ಠಿಮಾಡಬೇಕು ಅಂದರೇ ಹೆಸರೇ ಶಾಶ್ವತವಾಗಿ ಉಳಿಯುತ್ತದೆ ಕಾರಣ ಜವಹರಲಾಲ್ ನೆಹರು ಅವರು ಮಕ್ಕಳ ಮೇಲೆ ಪ್ರೀತಿ ಹೊಂದಿದ್ದಲ್ಲದೆ ದೇಶದ ಪ್ರಗತಿಗಾಗಿ ಅನೇಕ ಯೋಜನೆಗಳನ್ನು ತಂದು ಇಲ್ಲಿಯವರೆಗೂ ಹೆಸರುವಾಸಿ ಆಗಲೂ ಕಾರಣಿಬೂತರಾಗಿದ್ದಾರೆಂದರು.
ಮುಖ್ಯಅತಿಥಿಗಳಾಗಿ ಆಗಮಿಸಿದ ಹಿರಿಯ ಪರ್ತಕರ್ತರಾದ ಜಿ.ಟಿ.ಘೋರ್ಪಡೆ ಅವರು ಮಾತನಾಡಿ ಜವಹರಲಾಲ್ ನೆಹರು ಅವರ ತಂದೆ ಮೋತಿಲಾಲ್ ನೆಹರು ಅವರು ಅವರಿಗೆ ಒಳ್ಳೆಯ ಮಾರ್ಗದರ್ಶನ ತೋರಿದ್ದರಿಂದಲೇ ಉನ್ನತ ಸ್ಥಾನಮಾನ ಹೊಂದಲು ಕಾರಣವಾಯಿತು ಕಾರಣ ಮಕ್ಕಳ ಪಾಲಕರು ಮಕ್ಕಳಿಗೆ ವಿದ್ಯಾ ಬುದ್ಧಿ ಅಷ್ಟೇಅಲ್ಲ ಆದ್ಯಾತ್ಮಿಕ ವಿಚಾರಗಳನ್ನು ಸಹ ಅವರಿಗೆ ತಿಳುವಳಿಕೆ ಮೂಡಿಸುವ ಕಾರ್ಯವಾಗಬೇಕು ಹಿರಿಯರೊಂದಿಗೆ ಮಾರ್ಗ ದರ್ಶನ ಪ್ರೀತಿ ವಾತ್ಸಲ್ಯ ಹೇಗಿರಬೇಕೆಂಬುದನ್ನು ಅರ್ಥೈಸುವಂತಹ ಕಾರ್ಯವಾಗಬೇಕು ಇದರಿಂದ ಮಕ್ಕಳ ಪಾಲಕರು ಅವರಿಂದ ಮುಕ್ತಿ ಪಡೆಯಲು ಅನೂಕುಲವಾಗುತ್ತದೆ ಇಲ್ಲದಿದ್ದರೆ ವೃದ್ಧಾಶ್ರಮ ಸೇರಬೇಕಾಗುತ್ತದೆ ಎಂದು ಜವಹರಲಾಲ್ ನೆಹರು ಅವರಂತಹ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೆಕೆಂದು ವಿದ್ಯಾರ್ಥೀಗಳಿಗೆ ತಿಳುವಳಿಕೆ ನೀಡಿದರು.
ಇನ್ನೋರ್ವ ಶಿಕ್ಷಕರಾದ ಎಸ್.ಎಸ.ಮಠ ,ಶಿಕ್ಷಕ ಎ.ಎಚ್.ಹೂಗಾರ,ಶಿಕ್ಷಕ ಆರ್.ಎಸ್.ಬೂದಿಹಾಳ ಹಾಗೂ ಶಿಕ್ಷಕಿ ಜೆ.ಎಸ್.ಮಸೂತಿಮಠ ಅವರು ಮಾತನಾಡಿ ಜವಹರಲಾಲ್ ನೆಹರು ಅವರು ಜನ್ಮದಿನವನ್ನು ಪ್ರತಿವರ್ಷ ನವ್ಹೆಂಬರ ೧೪ರಂದು ಆಚರಿಸಿಕೊಂಡು ಬರಲಾಗುತ್ತಿದೆ ಇಗ್ಲೇಂಡಿನಲ್ಲಿ ಶಿಕ್ಷಣ ಪಡೆದು ಪದವಿದರರಾಗಿದ್ದಲ್ಲದೇ ವಕೀಲ ವೃತ್ತಿಯಂತೆ ಗಾಂಧೀಜಿ ಅವರ ಮಾರ್ಗ ದರ್ಶನದಂತೆ ಮುಂದುವರೆದ ನೆಹರು ಅವರು ೧೯೪೭ ಅಗಸ್ಟ ೧೫ರಂದು ದೇಶದ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಅವರು ಆಧೂನಿಕ ಶಿಲ್ಪಿಎಂದು ಹೆಸರು ಪಡೆದು ಭಾರತ ರತ್ನ ಎಂಬ ಬಿರುದು ಪಡೆದುಕೊಂಡ ಅವರ ಮಾರ್ಗದರ್ಶನವನ್ನು ಎಲ್ಲರು ಅನುಸರಿಸುತ್ತಾ ಸಾಗಬೇಕೆಂದು ಎಲ್ಲ ವಿದ್ಯಾರ್ಥೀಗಳಿಗೆ ಮನವರಿಕೆ ಮಾಡಿದರು.
ಈ ಕಾರ್ಯಕ್ರಮ ಕುರಿತು ಶಿಕ್ಷಕಿಎಸ್.ಎಸ.ಮಠ ಹಾಗೂ ವಿದ್ಯಾರ್ಥೀನಿ ಬೊರಮ್ಮ ಕಟ್ಟಿಮನಿ, ವಿದ್ಯಾರ್ಥೀಗಳಾದ ಆದಿತ್ಯ ಮೂಕಿಹಾಳ,ಭಾಗ್ಯಶ್ರೀ ನಿರಲಗಿ, ಆಕಾಶ ಡಿ.ಎಮ(ಯಡಹಳ್ಳಿ) ಅವರು ಜವಹರಲಾಲ್ ನೆಹರು ಅವರ ಆದರ್ಶಮಯ ಪ್ರೀತಿ ವಾತ್ಸಲ್ಯ ಮಕ್ಕಳ ಮೇಲೆ ಹೇಗಿತ್ತೆನ್ನುವುದನ್ನು ತಮ್ಮ ತಮ್ಮ ಅನಿಸಿಕೆಗಳಲ್ಲಿ ವ್ಯಕ್ತಪಡಡಿಸಿದರು.
ಈ ಕಾರ್ಯಕ್ರಮ ಕುರಿತು ಏರ್ಪಡಿಸಲಾದ ಗಾಯನ ಸ್ಪರ್ಧೇ, ಚಿತ್ರಕಲಾ , ಪ್ರಬಂಧ,ಇAಗ್ಲೀಷ ಪ್ರಬಂಧ, ಹಿಂದಿ ಪ್ರಬಂಧ, ಮೂಸಿಕಲ್ ಚೇರ್ ಹಾಗೂ ಕ್ರೀಕೇಟ್ ಸ್ಪರ್ಧೇಗಳಿಲ್ಲಿ ಭಾಗವಹಿಸಿದ ವಿಜೇತ ವಿದ್ಯಾರ್ಥೀಗಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು. ಶಿಕ್ಷಕ ಸುನೀಲ ಪಾಟೀಲ ಸ್ವಾಗತಿಸಿದರು, ಶಿಕ್ಷಕ ರಾಜು ರಾಠೋಡ ನಿರೂಪಿಸಿದರು, ಶಿಕ್ಷಕಿ ಶೃತಿ ಮೂಕಿಹಾಳ ವಂದಿಸಿದರು.