ಸ್ವಾ-ನಿಧಿ ಯೋಜನೆ ನೆರವಿನಿಂದ ಬೀದಿ ಬದಿ ವ್ಯಾಪಾರಿಗಳ ಏಳಿಗೆ

ಕಾಳಗಿ:ಸೆ.20:ಪಟ್ಟಣದ ಬಿದಿ ಬದಿ ವ್ಯಾಪಾರಿಗಳಿಗೆ ಪ್ರಧಾನಮಂತ್ರಿ ಸ್ವಾ-ನಿಧಿ ಯೋಜನೆ ನೆರವಾಗುತ್ತಿದೆ. ದಿನನಿತ್ಯದ ವ್ಯಾಪಾರ ನಡೆಸುವ ಅನೇಕರು ಬ್ಯಾಂಕ್‍ನಿಂದ 15,000 ರಿಂದ ?50,000 ರವರೆಗಿನ ಸಾಲ ಪಡೆದು ತಮ್ಮ ವ್ಯವಹಾರ ವಿಸ್ತರಿಸುತ್ತಿದ್ದಾರೆ ಎಂದು ಸಾವಿತ್ರಿ ಒಡೆಯರಾಜ ತಿಳಿಸಿದರು

300ಕ್ಕೂ ಹೆಚ್ಚು ಬಿದಿ ಬದಿ ವ್ಯಾಪಾರಿಗಳು ಈ ಯೋಜನೆಯಡಿ ಸಾಲ ಪಡೆದಿದ್ದು, ಅವರಲ್ಲಿ ಬಹುತೇಕರು ಡಿಜಿಟಲ್ ಪಾವತಿ ವ್ಯವಸ್ಥೆಯತ್ತ ತಿರುಗಿದ್ದಾರೆ. ಸರ್ಕಾರ ನೀಡುತ್ತಿರುವ ಬಡ್ಡಿ ಸಬ್ಸಿಡಿ ಹಾಗೂ ಡಿಜಿಟಲ್ ವಹಿವಾಟಿಗೆ ಹೆಚ್ಚುವರಿ ಪೆÇ್ರೀತ್ಸಾಹ ದೊರೆಯುತ್ತಿದೆ.

“ಈ ಮೊದಲು ಹಣಕಾಸಿನ ಕೊರತೆ ಇದ್ದು ವ್ಯಾಪಾರ ನಡೆಸುವುದು ಕಷ್ಟವಾಗುತ್ತಿತ್ತು. ಈಗ ಸಾಲ ಸಿಕ್ಕಿರುವುದರಿಂದ ಹೊಸ ಸಾಮಾನು ತರಲು ಸಾಧ್ಯವಾಗಿದೆ,” ಎಂದು ಫಲಾನುಭವಿಗಳು ಹರ್ಷ ವ್ಯಕ್ತಪಡಿಸುತ್ತಿದಾರೆ.

ಯೋಜನೆಯ ನೆರವಿನಿಂದ ಬಿದಿ ಬದಿ ವ್ಯಾಪಾರಿಗಳ ಬದುಕಿನಲ್ಲಿ ಬದಲಾವಣೆ ಕಂಡುಬರುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನವರಿಗೆ ಇದು ಸಹಾಯವಾಗುವಂತೆ ಬ್ಯಾಂಕಿನ ಅಧಿಕಾರಿಗಳು ಸಹಕರಿಸಿಬೇಕು.


ಬಿದಿ ಬದಿ ವ್ಯಾಪಾರಿಗಳು ತಗೊಂಡ ಸಾಲಗಳನ್ನು ಸಕಾಲದಲ್ಲಿ ಪಾವತಿಸಿದರೆ ಸಿಬಿಲ್ ಹಾಳಾಗುವುದಿಲ್ಲಾ ಮತ್ತು ಮುಂದಿನ ಕಂತಿನ ಸಾಲ ತೆಗೆದುಕೊಳ್ಳುಲು ಸಹಾಯಕಾರಿಯಾಗುತ್ತೆ.

ಸಾವಿತ್ರಿ ಒಡೆಯರಾಜ
ಪಪಂ ಸಮುದಾಯದ ಸಂಪನ್ಮೂಲ ವ್ಯಕ್ತಿ