
ಕಲಬುರಗಿ,ಜೂ.೪- ಮಹಾನಗರ ಪಾಲಿಕೆಯ ಪರಿಸರ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತಕರಾದ ಅಭಯ ಕುಮಾರ ಅವರನ್ನು ಕರ್ನಾಟಕ ಬೀದಿ ವ್ಯಾಪಾರಿಗಳ ಸಂಘದಿAದ ಸನ್ಮಾನಿಸಿ ಗೌರವಿಸಲಾಯಿತು.ಮಹಾನಗರದ ಬೀದಿಬದಿ ವ್ಯಾಪಾರಿಗಳಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಸಂಘದ ಅಧ್ಯಕ್ಷರಾದ ಜಗನ್ನಾಥ ಎಸ್.ಸೂರ್ಯವಂಶಿ ಅವರು ಮನವಿ ಮಾಡಿದರು.
ಮಹಾನಗರ ಪಾಲಿಕೆಯ ಪರಿಸರ ವಿಭಾಗದ ಅಭಿಯಂತಕರ ಕಾರ್ಯಾಲಯದಲ್ಲಿ ಮಂಗಳವಾರ ಬೀದಿ ವ್ಯಾಪಾರಿಗಳ ಸಂಘದ ನಿಯೋಗ ಭೇಟಿ ನೀಡಿ ಪಾಲಿಕೆ ಅಧಿಕಾರಿ ಅಭಯಕುಮಾರ ಅವರನ್ನು ಸನ್ಮಾನಿಸಲಾಯಿತು. ಮಹಾನಗರದ ಬೀದಿಬದಿ ವ್ಯಾಪಾರಗಿಳು ಎದುರಿಸುವ ಹಲವಾರು ಸಮಸ್ಯೆಗಳ ಪರಿಹಾರ ಸೇರಿಂದತ ಸರ್ಕಾರದ ವಿವಿಧ ಯೋಜನೆಗಳ ಲಾಭ ಅರ್ಹ ಬೀದಿಬದಿ ವ್ಯಾಪಾರಿಗಳಿಗೆ ಕಲ್ಪಿಸಲು ನಿಯೋಗದ ನೆತೃತ್ವ ವಹಿಸಿದ್ದ ಸೂರ್ಯವಂಶಿ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ದತ್ತು ಎಚ್.ಭಾಸಗಿ, ಬಾಬುಮಿಯಾ ಪರಿಟ್, ರಾಮದಾಸಿ ಕುಲಕರ್ಣಿ, ಮಲ್ಲು ಆಲೂರ, ಹುಸೇನಿ, ವೆಂಕಟೇಶ, ಪದ್ಮರಾಜ, ಬಸವರಾಜ ಮಾಡಿಯಾಳ, ಬಾಗೋಡಿ ಶಿವಪ್ಪ ಸೇರಿದಂತೆ ಕರ್ನಾಟಕ ರಾಜ್ಯ ಬೀದಿ ವ್ಯಾಪಾರಿಗಳ ಸಂಘದ ಪ್ರಮುಖರು ಇದ್ದರು.