
ಕಲಬುರಗಿ,ಜ.೨೬- ಪ್ರತಿವರ್ಷದಂತೆ ಈ ವರ್ಷವೂ ಕೂಡ ನಗರದ ಸುಪರ ಮಾರುಕಟ್ಟೆ ಸಿಟಿ ಬಸ್ ನಿಲ್ದಾಣದ ಬಳಿ ಇರುವ ಅಖಿಲ ಕರ್ನಾಟ ರಾಜ್ಯ ಬೀದಿ ವ್ಯಾಪಾರಿಗಳ ಸಂಘದ ಕಾರ್ಯಾಲಯದಲ್ಲಿ ಇಂದು ಆಯೋಜಿಸಿದ್ದ ೭೭ನೇ ಗಣರಾಜ್ಯೋತ್ಸವ ದಿನಾಚರಣೆಯ ಧ್ವಜಾರೋಹಣವನ್ನು ಹಿರಿಯ ಪತ್ರಕರ್ತ ಭವಾನಿ ಸಿಂಗ್ ಠಾಕೂರ ನೆರವೇರಿಸಿದರು.
ರಾಷ್ಟçಪಿತ ಮಹಾತ್ಮ ಗಾಂಧಿಜಿ ಮತ್ತು ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ ಅವರ ಭಾವಚಿತ್ರಕ್ಕೆ ಅಖಿಲ ಕರ್ನಾಟಕ ಬೀದಿ ವ್ಯಾಪಾರಿಗಳ ಸಂಘದ ಸಂಸ್ಥಾಪಕ ಅಧ್ಯಕ್ಷ ಜಗನ್ನಾಥ ಸೂರ್ಯವಂಶಿ ಅವರು ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಆರ್.ಎಫ್.ಓ ಅರಣ್ಯಾಧಿಕಾರಿ ವೀರಣ್ಣ ಪಟ್ಟೆದಾರ, ಚಂದ್ರಹಾಸ ಜೀತ್ರಿ, ವೆಂಕಟೇಶ ಕಾಂಬಳೆ, ಕೃಷ್ಣವೇಣಿ ಸೂರ್ಯವಂಶಿ, ಬೀಲಕಿಸ್, ರಷ್ಮಾ ರೌಫ್, ಮಹೇಶ, ಲಕ್ಷಿö್ಮÃ ಬಾವಜಿ, ರೇಷ್ಮಾ ಖಾಸಿಂ, ಬಾಬು ಶೇಖ ಪರಿಟ ಸೇರಿದಂತೆ ಹಲವರಿದ್ದರು.
























