ಸಮುದಾಯದಲ್ಲಿ ಅರಿವು ಮೂಡಿಸಲು ಬೀದಿ ನಾಟಕಗಳು ಪೂರಕ


ಗದಗ,ಜ.೧೫: ರಾಷ್ಟಿçÃಯ ಆರೋಗ್ಯ ಅಭಿಯಾನದಡಿಯಲ್ಲಿ ರಾಷ್ಟಿçÃಯ ಆರೋಗ್ಯ ಕಾರ್ಯಕ್ರಮ ಯೋಜನೆಗಳ ಬಗ್ಗೆ ಸಮುದಾಯದಲ್ಲಿ ಅರಿವು ಮೂಡಿಸುವಲ್ಲಿ ಆರೋಗ್ಯ ಜಾಗೃತಿಯ ಬೀದಿ ನಾಟಕಗಳು ಪೂರಕವಾಗಿದ್ದು ಇವುಗಳನ್ನು ಜನರು ವೀಕ್ಷಿಸುವ ಮೂಲಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಕ್ರಮಗಳು ಮಾಹಿತಿ ಸೌಲಭ್ಯಗಳು ಪ್ರಯೋಜನಗಳನ್ನ ಪಡೆಯಬಹುದಾಗಿದೆ ಎಂದು ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಡಾ. ರಾಜೇಂದ್ರ ಎಸ್ ಗಡಾದ ಅವರು ಹೇಳಿದರು.


ಇಲ್ಲಿಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯ ಶಿಕ್ಷಣ ವಿಭಾಗ ಗದಗ ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಲಕ್ಕುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಅಡವಿಸೋಮಾಪುರ ಆಯುಷ್ಮಾನ್ ಆರೋಗ್ಯ ಮಂದಿರ ಇವುಗಳ ಸಂಯುಕ್ತ ಆಶ್ರಯದಲ್ಲಿ ಅಡವಿ ಸೋಮಾಪುರದ ಆಯುಷ್ಮಾನ್ ಆರೋಗ್ಯ ಮಂದಿರದ ಆವರಣದಲ್ಲಿ ಏರ್ಪಡಿಸಲಾಗಿದ್ದ ಆರೋಗ್ಯ ಇಲಾಖೆಯ ರಾಷ್ಟಿçÃಯ ಕಾರ್ಯಕ್ರಮಗಳ ಅರಿವು ಮೂಡಿಸುವ ಜನಪದ ಬೀದಿ ನಾಟಕ ಕಾರ್ಯಕ್ರಮವನ್ನು ತಪ್ಪಡಿ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು. ಆಯುಷ್ಮಾನ್ ಭಾರತ, ಗೃಹಆರೋಗ್ಯ ತಾಯಿ ಮತ್ತು ಮಗುವಿನ ಆರೋಗ್ಯ , ಬ್ರೂಣಲಿಂಗ ಪತ್ತೆ ನಿಷೇಧ, ಹದಿಹರೆಯದವರ ಆರೋಗ್ಯ ಎಚ್‌ಐವಿ ಪೌಷ್ಟಿಕ ಆಹಾರ ಅನಿಮೀಯ ಯುಕ್ತ ಭಾರತ ಸಾಂಕ್ರಾಮಿಕ ಅಸಾಂಕ್ರಾಮಿಕ ರೋಗಗಳು ಹಾಗೂ ಎನ್ ಹೆಚ್ ಎಂ ಯೋಜನೆಗಳ ಬಗ್ಗೆ ಜಾನಪದ ಕಾರ್ಯಕ್ರಮಗಳ ಮೂಲಕ ಸಮುದಾಯದಲ್ಲಿ ಜಾಗೃತಿ ಮೂಡಿಸುವುದು ಈ ನಾಟಕಗಳ ಉದ್ದೇಶವಾಗಿದೆ ಎಂದರು.


ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸರ್ಕಾರಿ ಪ್ರೌಢಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯರಾದ ಶ್ರೀಮತಿ ನೀಲಮ್ಮ ಅಂಗಡಿ ಅವರು ಮಾತನಾಡಿ ಇದೊಂದು ಉಪಯುಕ್ತ ಯೋಜನೆಯಾಗಿದ್ದು ಜನತೆ ಇದರ ಪ್ರಯೋಜನವನ್ನು ಪಡೆಯಲು ಮುಂದಾಗ ಬೇಕೆಂದರು.


ಗ್ರಾಮ ಪಂಚಾಯತಿಯ ಹಿರಿಯ ಸದಸ್ಯರಾದ ಶ್ರೀಮತಿ ಗಂಗಮ್ಮ ಪುರದ ಅವರು ಅಧ್ಯಕ್ಷತೆ ವಹಿಸಿಕೊಂಡಿದ್ದರು. ಅಡವಿ ಸೋಮಾಪುರದ ಜಾನಪದ ಕಲಾವಿದ ವೀರಣ್ಣ ಅಂಗಡಿ ನೇತೃತ್ವದ ಶ್ರೀ ಸಿದ್ದಲಿಂಗೇಶ್ವರ ಜಾನಪದ ಕಲಾ ತಂಡ ಎರಡು ಬೀದಿ ನಾಟಕಗಳನ್ನು ಹಾಗೂ ಆರೋಗ್ಯ ಗೀತೆಗಳನ್ನು ಪ್ರಸ್ತುತಪಡಿಸಿದರು.


ಆರಂಭದಲ್ಲಿ ಅಡವಿ ಸೋಮಾಪುರ ಉಪ ಕೇಂದ್ರದ ಆರೋಗ್ಯ ನಿರೀಕ್ಷನಾಧಿಕಾರಿ ಸಿದ್ದಪ್ಪ ಲಿಂಗದಾಳ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ ಆರೋಗ್ಯ ಜಾಗೃತಿ ಮೂಡಿಸುವ ಈ ಬೀದಿ ನಾಟಕಗಳು ತುಂಬಾ ಮಾಹಿತಿಯನ್ನು ಒಳಗೊಂಡ ನಾಟಕಗಳಾಗಿವೆ ಎಂದು ಸರ್ವರನ್ನು ಸ್ವಾಗತಿಸಿದರು. ಲಕ್ಕುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಾಯ್.ಎನ್. ಕಡೆಮನಿ, ಇನ್ನೋರ್ವ ಆರೋಗ್ಯ ನಿರೀಕ್ಷಾಧಿಕಾರಿ ಮುತ್ತಣ್ಣ ಹಟ್ಟಿಮನಿ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ರಾಜೇಸಾಬ ಪೆಂಡಾರಿ ಸೇರಿದಂತೆ ಸರ್ಕಾರಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಯ ಶಿಕ್ಷಕ ವೃಂದ ಮತ್ತು ಮಕ್ಕಳು ಆಶಾ ಕಾರ್ಯಕರ್ತೆಯರು ಸಾರ್ವಜನಿಕರು ಇದರಲ್ಲಿ ಪಾಲ್ಗೊಂಡಿದ್ದರು.