
ಕೋಲಾರ, ಜೂ,೧-ತಂಬಾಕು ವ್ಯಸನಕ್ಕೆ ಒಳಗಾಗಿ ಅನೇಕ ಜನರು ಕಾಯಿಲೆಗಳಿಗೆ ತುತ್ತಾಗುವ ಮುಖಾಂತರ ಪ್ರತಿ ವರ್ಷ ಭಾರತದಲ್ಲಿ ೧೦ ಲಕ್ಷಕ್ಕಿಂತ ಹೆಚ್ಚಿನ ಸಾವುಗಳು ಸಂಭವಿಸುತ್ತಿವೆ,ಆದ್ದರಿಂದ ಹದಿಹರೆಯದ ವಯಸ್ಸಿನವರು ತಂಬಾಕು ವ್ಯಸನಕ್ಕೆ ಒಳಗಾಗದಂತೆ ಎಚ್ಚರ ವಹಿಸಬೇಕೆಂದು ಜಿಲ್ಲಾ ಶಸ್ತ್ರಚಿಕಿಸ್ತಕರು ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ. ಜಗದೀಶ್ ಎಂ ರವರು ಹೇಳಿದರು.
ನಗರದ ದೇವರಾಜ್ ಅರಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡಮಿ ಕಾಲೇಜಿನ ಸಿಲ್ವರ್ ಜ್ಯೂಬಲಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಾಗೃತಿ ಕಾರ್ಯಾಗಾರವನ್ನು ಉದ್ದೇಶಿಸಿ ವಿಶ್ವ ತಂಬಾಕು ರಹಿತ ದಿನಾಚರಣೆಯ ಅಂಗವಾಗ್ದಿವರು ಮಾತನಾಡಿದರು,
ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ವತಿಯಿಂದ ೧೧೭೫ ಶಾಲಾ/ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮುಖಾಂತರ ೧೨,೩೩,೬೫೯ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗಿದೆ ಕೊಟ್ಟಾ ಕಾಯ್ದೆ ಉಲ್ಲಂಘನೆಗಳ ವಿರುದ್ಧ ೪೯೧ ದಾಳಿಗಳನ್ನು ಆಯೋಜಿಸಿ ಸುಮಾರು ರೂ ೨೬,೧೬,೩೪೦/- ದಂಡ ವಸೂಲಿ ಮಾಡಲಾಗಿದೆ. ಈ ದಾಳಿಗಳನ್ನು ಇನ್ನುಮುಂದೆ ಕೋಲಾರ ಜಿಲ್ಲೆಯ ವ್ಯಾಪ್ತಿಯಲ್ಲಿ ದಾಳಿಗಳನ್ನು ಹೆಚ್ಚಿಸುವ ಉದ್ದೇಶವಿದ್ದು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡದಂತೆ ನಿಯಮಬಾಹಿರ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದಂತೆ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ತಿಳಿಸಿದರು.
ಇದೇ ಸಂದರ್ಭದಲ್ಲಿ ದೇವರಾಜ್ ಅರಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡಮಿ ಕಾಲೇಜಿನ ಪ್ರಾಂಶುಪಾಲರಾದಂತಹ ಡಾ.ಪ್ರಭಾಕರ್.ಕೆ ರವರು ತಂಬಾಕು ಉತ್ಪನ್ನಗಳ ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವಂತಹ ದುಷ್ಪರಿಣಾಮಗಳ ಕುರಿತು ಮಾತನಾಡುತ್ತಾ ತಂಬಾಕು ಸೇವನೆ ಮತ್ತು ಧೂಮಪಾನದಿಂದ ದೇಹದಲ್ಲಿ ಕ್ಯಾನ್ಸರ್ ಕಾರಕ ಜೀವಕೋಶಗಳು ಉತ್ಪತ್ತಿಯಾಗುತ್ತಾ ಕ್ಯಾನ್ಸರ್ ಕಾಯಿಲೆಗಳಿಗೆ ಒಳಗಾಗುತ್ತಾರೆ. ಶೇ.೨೨% ರಷ್ಟು ಜನಕ್ಕೆ ಕ್ಯಾನ್ಸರ್ ತಂಬಾಕು ಉತ್ಪನ್ನಗಳ ಸೇವನೆಯಿಂದಾಗಿ ಬರುತ್ತವೆ ಎಂದು ಸಂಶೋಧನೆಗಳು ತಿಳಿಸಿವೆ,
ಧೂಮಪಾನವು ಹೆಚ್ಚು ಅಪಾಯಕಾರಿಯಾಗಿದ್ದು ಧೂಮಪಾನದಿಂದ ಶೇ.೭೧% ಜನಕ್ಕೆ ಶ್ವಾಸಕೋಶ ಕ್ಯಾನ್ಸರ್ ಉಂಟಾಗುತ್ತದೆ. ಧೂಮಪಾನ ಎಂದರೆ ಕೇವಲ ಪ್ರತ್ಯಕ್ಷ ಧೂಮಪಾನವಲ್ಲ ಪರೋಕ್ಷ ಧೂಮಪಾನವು ಕೂಡ ಹೆಚ್ಚಿನ ಅಪಾಯಕಾರಿ ಪರೋಕ್ಷ ಧೂಮಪಾನ ಎಂದರೆ ಒಬ್ಬ ವ್ಯಕ್ತಿ ಧೂಮಪಾನ ಮಾಡಿ ಅವರ ಆರೋಗ್ಯ ಮಾತ್ರ ಕೆಡಿಸಿಕೊಳ್ಳುವುದಲ್ಲದೆ ಸುತ್ತಮುತ್ತಲು ಇರುವ ನಾಲೈದು ಜನರ ಆರೋಗ್ಯ ಕೆಡಿಸುವುದೇ ಪರೋಕ್ಷ ಧೂಮಪಾನ ಸಾರ್ವಜನಿಕರು ಪರೋಕ್ಷ ಧೂಮಪಾನದಿಂದಲೂ ಸಹ ದೂರವಿರಬೇಕು ವಿಶ್ವ ಆರೋಗ್ಯ ಸಂಸ್ಥೆಯು ೨೦೨೩ರಲ್ಲಿ ಪ್ರಕಟಿಸಿದ ವರದಿ ಪ್ರಕಾರ ವಿಶ್ವದಾದ್ಯಂತ ಪ್ರತಿ ವರ್ಷ ೧.೩ ಮಿಲಿಂiನ್ ಗಿಂತಲೂ ಹೆಚ್ಚಿನ ಜನ ಪರೋಕ್ಷ ಧೂಮಪಾನಕ್ಕೆ ಒಳಗಾಗಿ ಸಾವನ್ನಪ್ಪುತ್ತಿದ್ದಾರೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಶ್ರೀ ದೇವರಾಜ್ ಅರಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡಮಿ ವಿಭಾಗದ ಕುಲಸಚಿವರಾದಂತಹ ಡಾ. ಮುನಿನಾರಾಯಣ.ಸಿ, ಡಾ. ಪ್ರಭಾಕರ್.ಕೆ, ಡಾ.ಕೃಷ್ಣಪ್ಪ,ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಮರಾದಂತಹ ಡಾ.ಸುನೀಲ್ ಬಿ.ಎನ್, ಡಾ. ಪ್ರದೀಪ್ ಟಿ.ಎಸ್, ಡಾ. ಮಹಿಮಾ, ಮನೋ ಚಿಕಿತ್ಸೆ ವಿಭಾಗದ ಡಾ.ಶರತ್, ಡಾ. ಸಹನ, ಎಸ್ ಮೂರ್ತಿ ಹಾಗೂ ಜಿಲ್ಲಾ ತಂಬಾಕು ನಿಯಂತ್ರನ ಘಟಕದ ಜಿಲ್ಲಾ ಸಲಹೆಗಾರರಾದ ಮಹಮದ್.ಪಿ ಮತ್ತು ಮಂಜುನಾಥ ಜಿ.ಎನ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.