
ಕೋಲಾರ,ಡಿ,೨೮- ರಾಜ್ಯದಲ್ಲಿ ಸುಮಾರು ೩ ಕೋಟಿ ಅಸಂಘಟಿತರಿದ್ದು ಅವರಿಗೆ ಕನಿಷ್ಠ ವೇತನ ಸೇರಿದಂತೆ ಸಾಮಾಜಿಕ ಮೂಲಭೂತ ಸೌಲಭ್ಯಗಳನ್ನು ದೊರಕಿಸುವ ದಿಸೆಯಲ್ಲಿ ರಾಜ್ಯದ ಅಸಂಘಟಿತರನ್ನು ಸಂಘಟಿಸಿ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರದ ಗಮನಕ್ಕೆ ತರಲು ರಾಜ್ಯ ಪ್ರವಾಸದ ಕಾರ್ಯವನ್ನು ಕೈಗೊಂಡಿರುವುದಾಗಿ ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷ ಟಿ.ಎಂ. ಷಹೀದ್ ತೆಕ್ಕಿಲ್ ತಿಳಿಸಿದರು.
ನಗರದ ಪತ್ರಕರ್ತರ ಭವನದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ಅಸಂಘಟಿತ ವಿವಿಧ ಕ್ಷೇತ್ರಗಳ ಕಾರ್ಮಿಕರ ಕುರಿತು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ವಿಶೇಷ ಕಾಳಜಿ ವಹಿಸಿದ್ದಾರೆ. ರಾಜ್ಯದಲ್ಲಿ ಪ್ರತಿಯೊರ್ವ ಅಸಂಘಟಿತರಿಗೂ ಸಮಾಜಿಕ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಕನಿಷ್ಟ ವೇತನದಿಂದ ವಂಚಿತರಾಗಬಾರದೆಂಬ ದಿಸೆಯಲ್ಲಿ ಕಳೆದ ೩ ತಿಂಗಳ ಹಿಂದೆ ಈ ಸಲಹಾ ಮಂಡಳಿಯನ್ನು ರಚಿಸಿ ನನಗೆ ಈ ಜವಾಬ್ದಾರಿಯನ್ನು ವಹಿಸಿದೆ. ಇದರೊಂದಿಗೆ ನನಗೆ ಸಚಿವ ಸ್ಥಾನಮಾನದ ಸೌಲಭ್ಯಗಳನ್ನು ಕಲ್ಪಿಸಿರುವುದಕ್ಕೆ ನಾನು ಮುಖ್ಯ ಮಂತ್ರಿಗಳಿಗೆ ಅಭಾರಿಯಾಗಿರುವೆ. ಪ್ರಮಾಣಿಕವಾಗಿ ನನ್ನ ಜವಬ್ದಾರಿಯನ್ನು ನಿರ್ವಹಿಸುವೆ ಎಂಬ ವಿಶ್ವಾಸವನ್ನು ವ್ಯಕ್ತಡಿಸಿದರು.
ಭಾರತವು ಸಾರ್ವಜನಾಂಗಿಯ ಶಾಂತಿ ತೋಟವಾಗಿದೆ. ಭಾರತ ಜಾತ್ಯಾತೀತ ದೇಶವಾಗಿದೆ ಮಸೀದಿ. ಮಂದಿರ ಹಾಗೂ ಚರ್ಚಗಳಿಗೆ ಭೇಟಿ ನೀಡಿ ಎಲ್ಲರಲ್ಲೂ ಸೌಹಾರ್ಧ ಭಾವನೆ ವಿಶ್ವಾಸದ ಭರವಸೆಗಳನ್ನು ಹೊಂದಿದ್ದರೆ ಮಾತ್ರ ದೇಶವನ್ನು ಪ್ರಗತಿಪಥದತ್ತ ಕೊಂಡಯ್ಯಲು ಸಾಧ್ಯ ಎಂದ ಅವರು ಮೊನ್ನೆ ಕ್ರಿಸ್ ಮಸ್ ಸಂದರ್ಭದಲ್ಲಿ ಕೈಸ್ತ ಸಮುದಾಯವರಿಗೆ ಕೆಲವರು ತೊಂದರೆ ನೀಡಿರುವುದು ಖಂಡನೀಯ ಯಾರೇ ಅಗಲಿ ಜಾತಿಯತೆ ಬಗ್ಗೆ ಪ್ರತಿಪಾದಿಸುವುದು ಸರಿಯಲ್ಲ ಎಲ್ಲರೂ ಮಾನವೀಯತೆಗೆ ಒತ್ತು ನೀಡ ಬೇಕು; ತಮ್ಮ ಧರ್ಮದ ಬಗ್ಗೆ ಪ್ರೀತಿ ಇರಲಿ ಬೇರೆಯವರ ಧರ್ಮದ ಬಗ್ಗೆ ಗೌರವ ಇರ ಬೇಕೆಂದು ಬೇರೆ ಧರ್ಮವನ್ನು ಅವಹೇಳನಾ ಮಾಡಬಾರದು ಎಂದರು
ಇದು ನನ್ನ ಪ್ರಥಮ ಪ್ರವಾಸವಾಗಿದ್ದು ಎಲ್ಲಾ ಅಸಂಘಟಿತ ಸಂಘಟನೆಗಳ ಮುಖಂಡರನ್ನು ಸಂಘಟಿಸಿ ಅವರೊಂದಿಗೆ ಸಮಸ್ಯೆಗಳ ಕುರಿತು ಚರ್ಚಿಸಿ ಕಾನೂನು ಬದ್ದವಾಗಿ ಪರಿಹರಿಸುವ ದಿಸೆಯಲ್ಲಿ ಕಾರ್ಮಿಕ ಸಚಿವರೊಂದಿಗೆ ಮುಖ್ಯ ಮಂತ್ರಿಗಳು ಹಾಗೂ ಸಂಬಂಧ ಪಟ್ಟ ಅಧಿಕಾರಿಗಳ ಗಮನ ಸೆಳೆಯುವುದಾಗಿ ತಿಳಿಸಿದ ಅವರು ವಿವಿಧ ಕ್ಷೇತ್ರಗಳಿಗೆ ವಿವಿಧ ರೀತಿಯಲ್ಲಿ ವೇತನ, ಸೌಲಭ್ಯಗಳನ್ನು ದೊರಕಿಸುವ ಮೂಲಕ ಗುರುತಿನ ಚೀಟಿಗಳನ್ನು ನೀಡ ಬೇಕಾಗಿದೆ. ೬೦ ವರ್ಷ ಹಿರಿಯ ನಾಗರೀಕರಿಗೆ ಹಾಗೂ ನಿವೃತ್ತ ಕಾರ್ಮಿಕರಿಗೆ ವಿಶೇಷವಾದ ಸೌಲಭ್ಯಗಳನ್ನು ಕಲ್ಪಿಸ ಬೇಕಾಗಿರುವುದು ಈಗಾಗಲೇ ಕೆಲವು ಕೈಗಾರಿಕೆಗಳಲ್ಲಿ ಕಾರ್ಮಿಕರ ನೇಮಕಾತಿಗೆ ಸಂಬಂಧಿಸಿದಂತೆ ಗುತ್ತಿಗೆ ನೀಡುವುದರಿಂದ ಕಾರ್ಮಿಕರ ಕನಿಷ್ಟ ವೇತನ, ಆರೋಗ್ಯದ ಸೌಲಭ್ಯಗಳು ಹಾಗೂ ಕಾರ್ಯನಿರ್ವಹಿಸುವ ಅವಧಿಗಳ ನಡುವೆ ತಾರತಮ್ಯದ ದೂರುಗಳು ಇದ್ದಲ್ಲಿ ಇವುಗಳನ್ನು ದಾಖಲೆ ಸಮೇತ ಗಮನಕ್ಕೆ ತಂದಲ್ಲಿ ಕಾನೂನು ಬದ್ದವಾಗಿ ಕ್ರಮ ಜರುಗಿಸಲಾಗುವುದು ಎಂಬ ಆಶ್ವಾಸನೆಯನ್ನು ನೀಡಿದರು.
ಜಿಲ್ಲಾ ಕಾರ್ಮಿಕ ವಿಭಾಗದ ಅಧ್ಯಕ್ಷ ಸಮೀರ್ ಪಾಷ, ಅಸಂಘಟಿತ ಕಾರ್ಮಿಕ ಅಧ್ಯಕ್ಷ ಶ್ರೀನಾಥ್, ಆರೋಗ್ಯನಾದನ್, ಬಕ್ರಾತ್, ಬಷೀರ್, ಮಾಲಿ, ಜುನಾಧಿ ಮುಂತಾದವರು ಉಪಸ್ಥಿತರಿದ್ದರು.




























