
ಲಕ್ಷೆ÷್ಮÃಶ್ವರ,ನ.೧೭:ತಾಲೂಕಿನ ಶಿಗ್ಲಿ ಗ್ರಾಮದ ಎಸ್ ಎಸ್ ಕೂಡ್ಲುಮಠ ಮಾಧ್ಯಮಿಕ ಶಾಲೆ ವಿದ್ಯಾರ್ಥಿಗಳು ಇತ್ತೀಚಿಗೆ ಗದಗನಲ್ಲಿ ನಡೆದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕ್ರೀಡಾಕೂಟದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಮೂರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಸರಪಳಿ ಗುಂಡು ಎಸೆತದಲ್ಲಿ ೪೪.೬೫ ಮೀಟರ್ ದೂರ ಎಸೆದು ಪ್ರಥಮ ಸ್ಥಾನ ಪಡೆದಿದ್ದರೆ ಚಕ್ರ ಎಸೆತದಲ್ಲಿ ರೇಣುಕಾ ಡಿ ಹುಳ್ಳಿಕೂಪಿ ಪ್ರಥಮ ಸ್ಥಾನ ಪಡೆದಿದ್ದಾಳೆ. ಅದೇ ರೀತಿ ಶ್ರೇಯಸ್ ಗೌಡ ಬಿ ಪಾಟೀಲ್ ಸರಪಳಿ ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಆಯ್ಕೆಯಾದ ವಿದ್ಯಾರ್ಥಿಗಳನ್ನು ಮತ್ತು ತರಬೇತುದಾರ ಕೆಆರ್ ಲಮಾಣಿ ಅವರನ್ನು ಸಂಸ್ಥೆಯ ಚೇರ್ಮನ್ನರಾದ ಎಸ್ ಪಿ. ಬಳಿಗಾರ ವಾಯ್ಸ್ ಚೇರ್ಮನ್ ರಾದ ಎಚ್‌ಎಫ್ ತಳವಾರ ಸಿಎಂ ರಾಗಿ ಮುಖ್ಯೋಪಾಧ್ಯಯರಾದ ಸಿಬಿ ಮೊಗಲಿ ಬಿಬಿ ಚಿಟಗಿ ಎಲ್ ಪಿ ಲಮಾಣಿ ಬಿಬಿ ಬಳಿಗಾರ ಆರ್ ಎಂ ಜಂಬೆರಾಳ ಬಿಎಸ್ ಹೆಬ್ಬಾಳ ವೈ ಬಿ ಬಸಾಪುರ ಮಹಾಂತೇಶ್ ಕಳ್ಳ ಳ್ಳಿ ಹಾಗೂ ಗ್ರಾಮದ ಮುಖಂಡರು ಅಭಿನಂದಿಸಿದ್ದಾರೆ.























