
ಬೀದರ್: ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ರಾಜ್ಯ ಸರ್ಕಾರದ ವತಿಯಿಂದ ನೀಡಲಾಗುವ ರಾಜ್ಯಮಟ್ಟದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಬಿದ್ರಿ ಕಲಾವಿದೆ ಶಾಂತಾಬಾಯಿ ಮೋಹನರಾವ್ ಕಾಂಬಳೆ ಅವರನ್ನು ನಗರದಲ್ಲಿ ಸೋಮವಾರ ಸತ್ಕರಿಸಲಾಯಿತು.
ಕಲಾವಿದರು, ಹಿತೈಷಿಗಳು ಹಾಗೂ ಕುಟುಂಬದ ಸದಸ್ಯರು ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ ಗೌರವಿಸಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ದೃಶ್ಯ ಕಲಾ ವಿಭಾಗದ ಮುಖ್ಯಸ್ಥ ಡಾ. ಮೋಹನರಾವ್ ಬಿ. ಪಾಂಚಾಳ, ಸಂಶೋಧನಾ ವಿದ್ಯಾರ್ಥಿ ಸುನೀಲ್ ಸಾಗರ್, ಪವನ್ ಪೀಸೆ, ಪೀಸೆ ಮತ್ತು ಕಾಂಬಳೆ ಕುಟುಂಬದ ಸದಸ್ಯರು ಹಾಜರಿದ್ದರು.




















