
ಸಂಜೆವಾಣಿ ವಾರ್ತೆ,
ವಿಜಯಪುರ,ನ.೧೨:ಬೀದರಿನ ಡಾ. ಚನ್ನಬಸವ ಪಟ್ಟದೇವರ ರಂಗ ಮಂದಿರದಲ್ಲಿ ಕೇತಕಿ ಶೈಕ್ಷಣಿಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಹಾಗು ಹಣ್ಮು ಪಾಜಿ ಗೆಳೆಯರ ಬಳಗದಿಂದ ಕನ್ನಡ ರಾಜ್ಯೋತ್ಸವ ನಿಮಿತ್ತ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಯನ್ನು ಗುರುತಿಸಿ ಕರಾಟೆ ಶಿಕ್ಷಕ ಬಸವರಾಜ ಬಾಗೇವಾಡಿ ಉತ್ನಾಳ ಅವರಿಗೆ ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಕನ್ನಡ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಪೂಜ್ಯ ಪ್ರಭುದೇವರು ಮಹಾಸ್ವಾಮಿಗಳು, ಸಿದ್ರಾಮ ಶಿಂದೆ ಸಂಸ್ಥೆಯ ಅಧ್ಯಕ್ಷÀ ಹಣ್ಮು ಪಾಜಿ, ಸುರೇಶ ಚನಶಟ್ಟಿ, ಡಾ. ಸಂಜೀವಕುಮಾರ ಅತಿಹಾಳ, ಅನೇಕ ಅಥಿತಿಗಳು ಭಾಗವಹಿಸಿದ್ದರು.


























