
ಸಂಜೆವಾಣಿ ವಾರ್ತೆ,
ವಿಜಯಪುರ, ಏ. ೩ : ಮೇ ೮ ರಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಮಟ್ಟದ ೪ ನೇ ಬೃಹತ್ ರೈತ ಜನ ಜಾಗೃತಿ ಸಮಾವೇಶವನ್ನು ಆಯೋಜನೆ ಮಾಡಿದ್ದು, ಈ ಕಾರ್ಯಕ್ರಮದಲ್ಲಿ ಸುಕ್ಷೇತ್ರ ಮುಗಳಖೋಡ, ಜಿಡಗಾದ ಪ.ಪೂ ಷಡಕ್ಷರಿ ಶಿವಯೋಗಿ ಡಾ. ಮುರಘರಾಜೇಂದ್ರ ಮಹಾಸ್ವಾಮಿಗಳು ಪಾವನ ಸಾನ್ನಿಧ್ಯವನ್ನು ವಹಿಸಿಕೊಳ್ಳಲಿದ್ದು, ಶಿರಶ್ಯಾಡದ ಅಭಿನವ ಮುರಘೇಂದ್ರ ಶಿವಾಚಾರ್ಯರು ಹಾಗೂ ಬೆಳಗಾವಿಯ ಸುವರ್ಣತಾಯಿ ಹೊಸಮಠ ಸೇರಿದಂತೆ ಇನ್ನಿತರ ಮಠಾಧೀಶರು ಉಪಸ್ಥಿತರಿರುವರು. ರಾಜ್ಯಾಧ್ಯಕ್ಷ ಚುನಪ್ಪಾ ಪೂಜೇರಿ ಅವರ ಅಧ್ಯಕ್ಷತೆಯಲ್ಲಿ, ರಾಜ್ಯಮಟ್ಟದ ರೈತ ಮುಖಂಡರು, ಪ್ರಗತಿಪರ ಸಮಾನ ಮನಸ್ಕರು, ರೈತಪರ ಚಿಂತಕರು, ಅಧಿಕಾರಿಗಳು, ವಿಜ್ಞಾನಿಗಳು, ಹಾಗೂ ನಾಡಿನ ಸಮಸ್ತ ರೈತ ಬಾಂಧವರು ಭಾಗವಹಿಸಲಿದ್ದು ಈ ಕಾರ್ಯಕ್ರಮವನ್ನು ಎಲ್ಲರೂ ಸೇರಿ ಯಶಸ್ವಿ ಮಾಡೋಣ ಎಂದು ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಶಶಿಕಾಂತ ಗುರೂಜೀ ಹೇಳಿದರು.
ಈ ನಾಡಿನಲ್ಲಿ ರೈತರಿಗೆ ಎಲ್ಲಾ ಕ್ಷೇತ್ರದಲ್ಲಿ ಎಲ್ಲಾ ಪ್ರಕಾರದ ಅನ್ಯಾಯಗಳಾಗುತ್ತಾ ಬಂದಿವೆ, ಅದನ್ನು ತಡೆಯಬೇಕಾದರೆ ರೈತರೆಲ್ಲರೂ ಜಾತ್ಯಾತೀತವಾಗಿ, ಪಕ್ಷಾತೀತವಾಗಿ, ಧರ್ಮಾತೀತವಾಗಿ ಗುರ್ಲಾಪುರದಲ್ಲಿ ನಡೆದ ಹೋರಾಟದ ಮೂಲಕ ಒಗ್ಗಟ್ಟಿನ ಸಂದೇಶ ಸಾರಿರುವ ರೈತರೆಲ್ಲರೂ ಸಮಯ ಸಂದರ್ಭ ಬಂದಾಗಲೆಲ್ಲ ಒಂದಾಗಬೇಕು. ರೈತರು ಎದುರಿಸುತ್ತಿರುವ ಜ್ಷಲಂತ ಸಮಸ್ಯೆಗಳನ್ನು ಈ ಸಮಾವೇಶದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನಕ್ಕೆ ತಂದು ರೈತರ ಶಕ್ತಿ ಎನ್ನೆಂದು ತೋರಿಸಲು ರೈತರೆಲ್ಲರೂ ಒಂದಾಗಿ ಈ ತರಹದ ಸಮಾವೇಶದ ಮೂಲಕ ಒಗ್ಗಟನ್ನು ತೋರಿಸಬೇಕಾಗಿದೆ ಎಂದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಸುಮಾರು ೧೦-೧೫ ಸಾವಿರ ರೈತರೆಲ್ಲರೂ ಸೇರಿಕೊಂಡು ೪ ನೇ ಬೃಹತ್ ರೈತ ಜನ ಜಾಗೃತಿ ಸಮಾವೇಶವನ್ನು ನಗರದ ದರಬಾರ ಗ್ರೌಂಡ್ ನಲ್ಲಿ ಆಯೋಜನೆ ಮಾಡಿದ್ದು, ಇಲ್ಲಿ ಹಲವಾರು ಕೃಷಿ ತಜ್ಞರು, ವಿಜ್ಞಾನಿಗಳು, ರೈತ ಮುಖಂಡರು ಕೃಷಿ ಕುರಿತು ಚಿಂತನೆ, ಅಭಿಪ್ರಾಯ ಮಂಡನೆ ಮಾಡುತ್ತಿದ್ದು, ಜೊತೆಗೆ ಕೃಷಿಯಲ್ಲಿ ಹಾಗೂ ವಿವಿಧ ಕ್ಷೇತ್ರದಲ್ಲಿ ವಿನೂತನವಾಗಿ ಸಾಧನೆ ಮಾಡಿದ ಸಾಧಕರಿಗೆ ವಿಶೇಷವಾಗಿ ಸನ್ಮಾನಿಸಲಾಗುವುದು,
ಈ ವೇಳೆ ಜಿಲ್ಲೆಯ ೧೩ ತಾಲೂಕಿನ ಪ್ರತಿಯೊಂದು ಹಳ್ಳಿಯ ರೈತರು, ಯುವಕರು, ಮಹಿಳೆಯರು, ಕಾರ್ಮಿಕರು, ಸೇರಿದಂತೆ ಎಲ್ಲಾ ಪ್ರತಿಪರ ಸಂಘಟನೆಯವರು ಕೂಡಾ ಮುಕ್ತವಾಗಿ ಪಾಲ್ಗೊಳುತ್ತಿದ್ದಾರೆ. ಈ ಕುರಿತು ಪತ್ರಿಕೆ, ದೃಶ್ಯಮಾಧ್ಯಮ, ಸಮೂಹ ಮಾಧ್ಯಮ, ಬ್ಯಾನರ, ಸ್ಟೀಕರ್, ಕರಪತ್ರ ಸೇರಿದಂತೆ ಹಳ್ಳಿಗಳಿಗೆ ವಾಹನಗಳ ಮೂಲಕ ಧ್ವನಿ ವರ್ಧಕ ಹಚ್ಚಿ ಪ್ರಚಾರ ಮಾಡಿ ಜಿಲ್ಲೆಯ ಸಮಸ್ತ ರೈತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳುವಂತೆ ಸಂದೇಶ ಮುಟ್ಟಿಸುವ ಜವಾಬ್ದಾರಿ ಎಲ್ಲರೂ ಮಾಡಬೇಕು ಎಂದರು.
ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ಈ ಸಮಾವೇಶದಲ್ಲಿ ಆಲಿಮಟ್ಟಿಯ ಜಲಾಶಯದ ಎತ್ತರ ೫೨೪.೨೫೬ ಕ್ಕೆ ಎತ್ತರಿಸಿ ಅದಕ್ಕೆ ಬೇಕಾಗುವ ಹಣವನ್ನು ರಾಜ್ಯ ಅಥವಾ ಕೇಂದ್ರ ಸರಕಾರ ಕೊಟ್ಟು, ಪುರ್ನವಸತಿ ಹಾಗೂ ಪರಿಹಾರವನ್ನು ಬಿಡುಗಡೆ ಮಾಡಲೇಬೇಕು ಎಂದು ಆಗ್ರಹಿಸಲು ಸಂಬAಧಿಸಿದ ನೆರೆಯ ಬಾಗಲಕೋಟೆ, ಯಾದಗಿರಿ, ಕಲಬುರ್ಗಿ, ರಾಯಚೂರ, ಸೇರಿದಂತೆ ಇತರೆ ಜಿಲ್ಲೆಯ ಪ್ರತಿಯೊಂದು ತಾಲೂಕು, ಹೋಬಳಿ ಹಾಗೂ ಗ್ರಾಮ ಮಟ್ಟದಲ್ಲಿ ರೈತರನ್ನು ಸೇರಿಸಿ ಹೋರಾಟದ ರೂಪರೇಷ ಮಾಡಲು ಲಕ್ಷಾಂತರ ರೈತರೊಂದಿಗೆ ಪಾದಯಾತ್ರೆ ಮಾಡಿ ಸಂಬAಧಿಸಿದ ಅಧಿಕಾರಿಗಳಿಗೆ, ಜನಪ್ರತಿನಿದಿಗಳಿಗೆ ಮನವಿ ಸಲ್ಲಿಸಲು ಮುಕ್ತವಾಗಿ ಎಲ್ಲರೊಂದಿಗೆ ಮುಕ್ತ ಹಾಗೂ ಗಟ್ಟಿ ಹೋರಾಟ ಪ್ರಾರಂಭ ಮಾಡಲು ಈ ವೇದಿಕೆ ಮೂಲಕ ಚಾಲನೆ ನೀಡಲಾಗುವುದು ಎಂದರು.
ಇದೇ ವೇಳೆ ಮುಖಂಡರಾದ ಶಾಂತಗೌಡ ಪಾಟೀಲ, ಸೋಮು ಬಿರಾದಾರ, ಶ್ರೀಶೈಲ ವಾಲಿಕಾರ, ಸಾತಲಿಂಗಯ್ಯ ಸಾಲಿಮಠ, ಮಹಾಂತಗೌಡ ಬಿರಾದಾರ, ಶಿವಾನಂದ ಹಿರೇಮಠ, ದಯಾನಂದ ಕೋಳಿ, ಮುಕುಬುಲ್ ಕೀಜಿ, ಡಾ. ಕೆಂ.ಎA. ಗುಡ್ನಾಳ, ಮಾಳು ಪೂಜಾರಿ, ಅನಮೆಶ ಜಮಖಂಡಿ, ಮುದಕಣ್ಣ ಹೊರ್ತಿ, ಸುಜಾತಾ ಅವಟಿ, ಚೆನ್ನಮ್ಮ ಮೈತ್ರಿ, ರೇಣುಕಾ ಬಿರಾದಾರ, ನಿಲಾಂಬಿಕಾ ಕಟ್ಟಿಮನಿ, ಪ್ರಕಾಶ ತೇಲಿ, ಸಂಗಪ್ಪ ಟಕ್ಕೆ, ಶಂಕರಗೌಡ ಬಿರಾದಾರ, ಸಲೀಂ ಮಾಶ್ಯಾಳ, ಧರೆಪ್ಪ ಅನಂತಪುರ, ರಾಜುಗೌಡ ಬಿರಾದಾರ, ಗುರುನಾಥ ಬಿರಾದಾರ, ಸತೀಶ ದಾಸ್ಯಾಳ, ಗುರುಪಾದ ಹಿಪ್ಪರಗಿ, ಹನಮಂತ ಬ್ಯಾಡಗಿ, ಸೇರಿದಂತೆ ೧೩ ತಾಲೂಕಿನ ರೈತ ಮುಖಂಡರು ಉಪಸ್ಥಿತರಿದ್ದರು.























