ರಾಜ್ಯ ಸರ್ಕಾರದ ವೈಫಲ್ಯ ನೂರರಷ್ಟಿದೆ: ಉಮೇಶ

ವಿಜಯಪುರ, ಜೂ. 12:ಅನೇಕ ಸಾಧನೆಗಳನ್ನು ಮಾಡಿರುವ ಬಿಜೆಪಿ ಸರ್ಕಾರಕ್ಕೆ ಕಾಂಗ್ರೆಸ್ ನಾಯಕರು ಸೊನ್ನೆ ಸಾಧನೆ ಎಂದಿದ್ದಾರೆ. ರಾಜ್ಯ ಸರ್ಕಾರ ವೈಫಲ್ಯಗಳಿಗೆ ಶೇ. 100ರಷ್ಟು ನೀಡುವೆ ಎಂದು ಬಿ.ಜೆ.ಪಿ ಎಸ್ ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಹೇಳಿದ್ದಾರೆ
ಅಹಿಂದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ನಂತರ ಆ ವರ್ಗಗಳ ಕಲ್ಯಾಣಕ್ಕೆ ಇರಿಸಿದ ಎಸ್.ಸಿ.ಎಸ್. ಪಿ ಟಿಎಸ್.ಪಿ ಅನುದಾನ
ಸರಿಸುಮಾರು 36 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಡೈವರ್ಟ್ ಮಾಡಿರುವ ವೈಫಲ್ಯಕ್ಕೆ ಶೇ. 100ರಷ್ಟು ಕೊಡುವೆ ಎಂದಿದ್ದಾರೆ.
ಅತಿ ಹೆಚ್ಚು ಸಾಲ ಮಾಡಿದ ಅಪಕೀರ್ತಿ ಕಾಂಗ್ರೆಸ್ ಪಕ್ಷದ್ದಾಗಿದೆ.
ನೀತಿ ಆಯೋಗದ ಸಭೆಗೆ ರಾಜಕೀಯ ಕಾರಣದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಜರಾಗದೇ ರಾಜ್ಯಕ್ಕೆ ಬರಬೇಕಾದ ಅನುದಾನ ಪಡೆಯಲು ವೈಫಲ್ಯವಾಗಿರುವಲ್ಲಿಯೂ ಕಾಂಗ್ರೆಸ್ ಸರ್ಕಾರಕ್ಕೆ ನೂರರಷ್ಟು ನೀಡುವೆ ಎಂದು ಹೇಳಿದ್ದಾರೆ.
ಕೃಷ್ಣೆಗೆ ಒಂದೇ ಒಂದು ರೂ. ಅನುದಾನ ನೀಡಿಲ್ಲ. ಈ ವೈಫಲ್ಯಕ್ಕೂ ಶೇ.100 ರಷ್ಟು, ವಾಲ್ಮೀಕಿ ನಿಗಮದ ಹಗರಣ, ಮುಡಾ ಹಗರಣ, ಸ್ಮಾರ್ಟ್ ಮೀಟರ್ ಅಳವಡಿಕೆ ಹಗರಣ ಹೀಗೆ ಹಗರಣಗಳಿಗೂ ಶೇ.100 ನೀಡುವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.