Home ಜಿಲ್ಲೆ ಬೆಂಗಳೂರು ರಾಜ್ಯ ಬಜಟ್ – ರೈತ ಸಂಘ ಪರ ರಾಮುಶಿವಣ್ಣ ಅಭಿನಂದನೆ

ರಾಜ್ಯ ಬಜಟ್ – ರೈತ ಸಂಘ ಪರ ರಾಮುಶಿವಣ್ಣ ಅಭಿನಂದನೆ

ಕೋಲಾರ,ಮಾ,೭:ಕೋಲಾರ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು, ನರಸಾಪುರಕ್ಕೆ ಕೈಗಾರಿಕಾ ವಲಯ ಪೋಲಿಸ್ ಠಾಣೆ, ಹಾಗೂ ಪ್ರತಿ ತಾಲೂಕಿಗೆ ರೈತ ಮಾಲ್‌ನ್ನು ದಾಖಲೆಯ ೧೭ನೇ ಬಜೆಟ್‌ನಲ್ಲಿ ಮಂಡನೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ರೈತ ಸಂಘದ ಜನತೆಯ ಪರವಾಗಿ ರಾಮುಶಿವಣ್ಣ ಅಭಿನಂದನೆಗಳು ಸಲ್ಲಿಸಿದ್ದಾರೆ.


ವೇಮಗಲ್ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಸಂಘ ಹಾಗೂ ಹಸಿರು ಸೇನೆ ಯುವ ಘಟಕ ಅಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ ಬಹು ದಿನಗಳ ಬೇಡಿಕೆಯಾದ ಕೋಲಾರಕ್ಕೆ ಸರ್ಕಾರಿ ಮೆಡಿಕಲ್ ಕಾಲೇಜು, ಸುಮಾರು ನಾಲ್ಕೈದು ವರ್ಷಗಳಿಂದ ನಿರಂತರವಾಗಿ ನಮ್ಮ ರೈತ ಸಂಘ ಹಾಗೂ ನರಸಾಪುರ ಭಾಗದ ಎಲ್ಲಾ ಮುಖಂಡರ ಸಹಕಾರದಿಂದ ಹಮ್ಮಿಕೊಂಡಿದ್ದ ಹೋರಾಟದ ಪ್ರತಿಫಲ ೨೦೨೬ರ ೧೭ ಬಜೆಟ್‌ನಲ್ಲಿ ನರಸಾಪುರಕ್ಕೆ ಪೊಲೀಸ್ ಸ್ಟೇಷನ್ ಮಂಜೂರು ಮಾಡಿರುವುದು ಬಹಳ ಸಂತಸ ತಂದಿದೆ. ಪ್ರತಿ ತಾಲೂಕಿನಲ್ಲಿಯೂ ರೈತರ ಅನುಕೂಲಕ್ಕಾಗಿ ರೈತಮಾಲ್ ಸ್ಥಾಪನೆ ಮಾಡಲು ಬಜೆಟ್‌ನಲ್ಲಿ ಮಂಡನೆ ಮಾಡಿರುವುದು ರೈತ ಸಂಘ ಸ್ವಾಗತ ಮಾಡುತ್ತಿದೆ.


ಆದರೆ ಕೆ.ಸಿ ವ್ಯಾಲಿ, ಎಚ್.ಎನ್. ವ್ಯಾಲಿ ೩ನೇ ಹಂತದ ಶುದ್ಧೀಕರಣ ಮಾತೇ ಇಲ್ಲ ಯಾಕೆ? ಕನಿಷ್ಠ ಪಕ್ಷ ಕೃಷ್ಣಾ ನದಿಯ ನೀರಿನ ವಿಚಾರ ಪ್ರಸ್ತಾಪವೇ ಇಲ್ಲ ? ಎತ್ತಿನಹೊಳೆ ಕೂಡ ಮರೀಚಿಕೆಯಾಗಿದೆ. ಈ ವಿಚಾರಗಳು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಜನರ ಆಸೆಗೆ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ನಿರಾಶೆಗೊಳಿಸಿದ್ದಾರೆ.


ರೈತ ನಾಯಕ ದಿವಂಗತ ಸಿ ಬೈರೇಗೌಡರವರು ಪ್ರತಿನಿಧಿಸಿ ಶಾಸಕರು ಮಂತ್ರಿಯಾದ ವೇಮಗಲ್ ವಿಧಾನಸಭಾ ಕ್ಷೇತ್ರವನ್ನು ವೇಮಗಲ್ ತಾಲೂಕು ಕೇಂದ್ರವನ್ನಾಗಿ ಮಾಡಿ ,ವಿಧಾನಸಭಾ ಕ್ಷೇತ್ರವಾಗಿ ಮರು ಸ್ಥಾಪನೆ ಮಾಡಬೇಕು. ಜೊತೆಗೆ ಕ್ಯಾಲನೂರುನ್ನು ಹೋಬಳಿ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಬೇಕು. ವೇಮಗಲ್ ಮತ್ತು ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಪ್ರತಿ ಎಕರೆಗೆ ೩ ಕೋಟಿ ಹಣ ಪರಿಹಾರವಾಗಿ ನೀಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದೇವೆ.


ಕೋಲಾರ ಜಿಲ್ಲೆಯ ಜನರ ಬೇಡಿಕೆಗಳು ಈಡೇರಿಸುವ ತನಕ ನಿರಂತರವಾಗಿ ರೈತ ಸಂಘದಿಂದ ಹೋರಾಟಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ರೈತ ಸಂಘ ಹಾಗೂ ಹಸಿರು ಸೇನೆ ಯುವ ಘಟಕ ಅಧ್ಯಕ್ಷ ಕಲ್ವಮಂಜಲಿ ರಾಮು ಶಿವಣ್ಣ ತಿಳಿಸಿದರು.