
ವಿಜಯಪುರ, ಜೂ. 21:ರಾಜ್ಯ ಬಿಜೆಪಿ ಸದ್ಯ ಐಸಿಯುನಲ್ಲಿದೆ
ಒಂದು ಹೋರಾಟ ಮಾಡಬೇಕು ಅಂದರೆ ಜನ ಸೇರುವುದಿಲ್ಲ ಎಂದು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಟೀಕಿಸಿದರು.
ಬಿಜೆಪಿ ರೆಬಲ್ ಟೀಂ ಜೊತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಭೆ ವಿಚಾರ ಪ್ರತಿಕ್ರಿಯೆ ನೀಡಿ ಮಾತನಾಡಿದರು.
ಬಿಜೆಪಿಯಲ್ಲಿ ಅಸಮಾಧಾನ ತುಂಬಿ ತುಳುಕುತ್ತಿದೆ. ಇದಕ್ಕೆ ಕಾರಣ ಅಂದರೆ ನಾಯಕತ್ವ ಎಂದರು.
ಕುಮಾರಸ್ವಾಮಿ ಅವರ ಜೊತೆಗೂ ಕೂಡ ಬಿಜೆಪಿ ರಾಜ್ಯ ಮಟ್ಟದ ನಾಯಕರ ಹೊಂದಾಣಿಕೆ ಇಲ್ಲ. ಜೆಡಿಎಸ್ ಮಿತ್ರ ಪಕ್ಷ ಇದ್ದರೂ ವಿಶ್ವಾಸಕ್ಕೆ ತಗೆದುಕೊಳ್ಳುತ್ತಿಲ್ಲ
ಈಗಲಾದರೂ ಅಮಿತ್ ಶಾ ಅವರು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಯಡ್ಡಿಯೂರಪ್ಪ ಕುಟುಂಬದ ಬಗ್ಗೆ, ಯಡ್ಡಿಯೂರಪ್ಪ ಅವರ ಅಸ್ತಿತ್ವ ಏನು ಉಳಿದಲ್ಲ ಎಂದೂ ತಿಳಿದುಕೊಳ್ಳಬೇಕು.
ಈಗಲೂ ಯಡ್ಡಿಯೂರಪ್ಪನನ್ನು ಯಡಿಯೂರಪ್ಪ ಜೀ ಅಂದರೆ
ಕರ್ನಾಟಕದಲ್ಲಿ ಬಿಜೆಪಿ ಗೆ ಬಹಳ ಕಷ್ಟ ಆಗುತ್ತದೆ. ಕೇವಲ ಸಿದ್ಧೆಶ್ವರ ಅವರದು ಅಷ್ಟೆ ಅಲ್ಲ. ಯಾರು ತಟಸ್ಥ ಉಳಿದಿದ್ದಾರೆಯೋ ಅವರ ಬೇಡಿಕೆ ವಿಜಯೇಂದ್ರ ಬದಲಾವಣೆ ಆಗಿದೆ.
ಯಡಿಯೂರಪ್ಪ ಕುಟುಂಬವನ್ನು ಬಿಜೆಪಿಯಿಂದ ಮುಕ್ತ ಮಾಡಬೇಕು ಎನ್ನುವುದಾಗಿದೆ ಎಂದರು.
ಪ್ರತಿನಿತ್ಯ ಹಿಂದೂ ಕಾರ್ಯಕರ್ತರ ಮೇಲೆ ಕೇಸ್ ದಾಖಲಿಸುತ್ತಿದ್ದಾರೆ. ಇವರು ಸಿದ್ದರಾಮಯ್ಯ, ಡಿಕೆಶಿ, ಜಮೀರ್ ಅಹ್ಮದ ಜೊತೆ ಸಂತೋಷವಾಗಿದ್ದಾರೆ.
ಇದು ಕಾರ್ಯಕರ್ತರಿಗೆ ಏನು ಸಂದೇಶ ಕೊಡುತ್ತದೆ ವಿಚಾರ ಮಾಡಿದರೆ ಗೊತ್ತಾಗುತ್ತದೆ ಎಂದು ಹೇಳಿದರು.
ನಿಮ್ಮದು ಇಷ್ಟು ಆತ್ಮೀಯತೆ ಇದ್ದರೆ ಕಾಂಗ್ರೆಸ್ ಪಕ್ಷ ಸೇರಿ
ಹಿಂದೂ ಕಾರ್ಯಕರ್ತರ ಬಲಿ ತಗೆದುಕೊಳ್ಳಬೇಡಿ ಎಂದು ಯತ್ನಾಳ ಕುಟುಕಿದರು.
ಅವರ ಲಗ್ನಗಳಲ್ಲಿ ನೀವು ಹಲ್ಲು ಕಿರಿಯುವುದು, ನಿಮ್ಮ ಲಗ್ನಗಳಲ್ಲಿ ಅವರು ಹಲ್ಲು ಕಿರಿಯುವುದು ಮಾಡುತ್ತಾರೆಂದು ಯಡಿಯೂರಪ್ಪ, ಡಿಕೆಶಿ, ಸಿದ್ದರಾಮಯ್ಯ ವಿರುದ್ದ ಕಿಡಿ ಕಾರಿದರು.
ಸಂತೋಷ ಲಾಡ್ ಸಿಎಂ ಆಗಬೇಕು ಎಂದು ಬಿ.ವೈ. ರಾಘವೇಂದ್ರ ಹೇಳುತ್ತಾನೆ.
ಹಾಗಾದರೆ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲೇಬಾರದಾ ಎಂದು ಯತ್ನಾಳ ಪ್ರಶ್ನೆ ಮಾಡಿದರು.
ಮತ್ತೊಂದೆಡೆ ಬಿ.ವೈ.
ವಿಜಯೇಂದ್ರ ಸಂತೋಷ ಲಾಡ್ ದಾರಿಯಲ್ಲಿ ಓಡಾಡುವ ಭಿಕ್ಷುಕ ರಾಜಕಾರಣಿ ಎನ್ನುತ್ತಾರೆ.ಇಬ್ಬರು ಸಂತೋಷ ಲಾಡ್ ಜೊತೆ ಹೋಗಿ ಬಿಡಿ
ನೀವು ಬಿಜೆಪಿ ಕಟ್ಟುತ್ತಿಲ್ಲ ಹಿಂದೂಗಳ ರಕ್ಷಣೆ ಮಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಅಲ್ಪಸಂಖ್ಯಾತರಿಗೆ ವಸತಿಯಲ್ಲಿ ಶೇ.5ರಷ್ಟು ಏರಿಕೆ ವಿಚಾರವಾಗಿ ಮಾತನಾಡಿ, ಜೈನ್,ಸಿಖ್,ಕ್ರಿಶ್ಚಿಯನ್ ರು ಅಲ್ಪಸಂಖ್ಯಾತರು ಇದ್ದಾರೆ. ಅಲ್ಪಸಂಖ್ಯಾತರಿಗೆ ಹೆಚ್ಚು ಇತರರಿಗೆ ಕಡಿಮೆ ಮೀಸಲಾತಿ ನಿಗದಿ ಸರಿಯಲ್ಲ
ಈ ವಿಚಾರ ಕುರಿತು ಕಳೆದ ಬೆಳಗಾವಿ ಅಧಿವೇಶನದಲ್ಲೂ ಜಮೀರ್ ಹಾಗೂ ನನಗೆ ಜಗಳ ಆಗಿದೆ. ಮುಸ್ಲಿಂರಿಗೆ ಶೇ.80ರಷ್ಣಟು ಅಂತಾ ಹಂಚುವವರು ಇವರು ಯಾರು? ಹಿಂದೂಗಳಿಗೆ ಇಲ್ಲಿ ಏನು ಇಲ್ಲ. ಸಿದ್ದರಾಮಯ್ಯ, ಡಿಕೆಶಿ ಬಹುತೇಕ ಮೂರು ವರ್ಷದಲ್ಲಿ ಕರ್ನಾಟಕವನ್ನು ಮತ್ತೊಂದು ಕೇರಳ, ಪಶ್ಚಿಮ ಬಂಗಾಳ ನಂತೆ ಮುಸ್ಲಿಂ ರಾಜ್ಯ ಮಾಡುತ್ತಾರೆ. ಸ್ವತಃ ಸಿದ್ದರಾಮಯ್ಯ ತಮ್ಮ ಸಮುದಾಯಕ್ಕೆ ಕೊಡುಗೆಗಳನ್ನು ಕೊಡಲಿ.
ಕುರಿಗಾರರಿಗೆ 5 ಲಕ್ಷ ರೂ ಕೊಡಲಿ. ಮುಸ್ಲಿಂರಿಗೆ ಕೊಡುವಷ್ಟು ಸಿದ್ದರಾಮಯ್ಯ ಬೇರೆ ಯಾರಿಗೂ ಕೊಡುತ್ತಿಲ್ಲ.
ಕೇವಲ ಮುಸ್ಲಿಂ ಎನ್ನುತ್ತಾರೆ. ಈ ರಾಜ್ಯದಲ್ಲಿ ಮುಸ್ಲಿಂ ಬಿಟ್ಟರೆ ಬೇರೆ ಯಾರು ಇಲ್ಲ ವೆ? ಎಂದರು.
ಇದು ಮುಸ್ಲಿಂ ಸರ್ಕಾರ. ಇದರ ವಿರುದ್ದ ಪ್ರತಿಭಟನೆ ಮಾಡುವಂತಹ ಅರ್ಹತೆ ರಾಜ್ಯ ಬಿಜೆಪಿ ಅಧ್ಯಕ್ಷನಿಗೆ ಇಲ್ಲ.
ರಾಜ್ಯಾಧ್ಯಕ್ಷ ಹೋದಲ್ಲಿ ಇವರ ಹಿಂದೆ ನೂರು ಜನ ಸೇರುತ್ತಿಲ್ಲ
ಮೊನ್ನೆ ಕಲಬುರ್ಗಿಯಲ್ಲಿ ಮೂವತ್ತು ಜನ ಸೇರಿದ್ದಾರೆ. ಪ್ರಿಯಾಂಕಾ ಖರ್ಗೆ ಅವರ ಪರವಾನಿಗೆ ಪಡೆದು ಕಲಬುರಗಿಗೆ ಬಂದಿದ್ದಾರೆ. ಹೈಕಮಾಂಡ್ ಒತ್ತಡವಿದೆ.
ಸಣ್ಣ ಹೋರಾಟ ಮಾಡುತ್ತೇನೆಂದು ವಿಜಯೇಂದ್ರ ಹೇಳುತ್ತಾನೆ ಎಂದರು.
ವಸತಿ ಯೋಜನೆಯಲ್ಲಿ ಮನೆ ಪಡೆಯಲು ಹಣ ನೀಡಬೇಕೆಂದು ಮಾತನಾಡಿರುವ ಶಾಸಕ ಬಿ.ಆರ್. ಪಾಟೀಲ ಅಡಿಯೋ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಯತ್ನಾಳ, ರಾಜ್ಯದಲ್ಲಿ ವ್ಯಾಪಕ ಭ್ರಷ್ಟಾಚಾರ ಇದೆ. ಈಗ ಎಲ್ಲ ಮಂತ್ರಿಗಳು ದುಡ್ಡು ಮಾಡಲು ನಿಂತಿದ್ದಾರೆ.ಭಷ್ಟಾಚಾರ ಮಿತಿಮೀರಿ ಬಿಟ್ಟಿದೆ.
ಬಿಜೆಪಿ ಸರ್ಕಾರ ಶೇ.40 ಪಸೆರ್ಂಟೇಜ ಸರ್ಕಾರ ಎಂದು ಆರೋಪ ಮಾಡುತ್ತಿದ್ದರು. ಈಗ ಕಾಂಗ್ರೆಸ್ ಸರ್ಕಾರ ಶೇ.60 ಪಸೆರ್ಂಟೇಜ ಆಗಿದೆ.ಗುತ್ತಿಗೆದಾರರು ನೇಣು ಹಾಕಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಟೀಕಿಸಿದರು.