ಬೀದರ್: ಬೀದರ್ ಹಳೆ ಬಸ್ ನಿಲ್ದಾಣದಿಂದ ಯರನಳ್ಳಿ ಗ್ರಾಮದ ವರೆಗೆ ಅಲಿಯಂಬರ್ ಮಾರ್ಗವಾಗಿ ಹೊಸ ಬಸ್ ಆರಂಭಿಸಬೇಕೆಂದು ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ನಿಗ್ರಹ ಸಮಿತಿ ಒತ್ತಾಯಿಸಿದೆ.
ಈ ಕುರಿತು ಇತ್ತೀಚಿಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ ಅವರು, ಯರನಳ್ಳಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇರುವುದರಿಂದ ಸಾಕಷ್ಟು ಜನ ನಿತ್ಯ ಇಲ್ಲಿಗೆ ಬಂದು ಹೋಗುತ್ತಾರೆ. ಆಲಿದಿಂಬರ್, ಮಮದಾಪೂರ, ಜನರು ಬಸ್ಸಿನ ವ್ಯವಸ್ಥೆ ಇಲ್ಲದೇ ಇರುವುದು ಮತ್ತು ಬಸ್ಸು ಉಚಿತವಾಗಿರುವುದರಿಂದ ಎಲ್ಲಾ ಬಸ್ಸುಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸ ಮಾಡುವುದರಿಂದ ವಿದ್ಯಾರ್ಥಿಗಳಿಗೆ ತುಂಬ ತೊಂದರೆ ಆಗುತ್ತಿದೆ. ಅಲಿಯಂಬರ್- ಯರನಳ್ಳಿಗೆ ಬಸ್ಸಿನ ವ್ಯವಸ್ಥೆ ಇಲ್ಲದೇ ಇರುವುದರಿಂದ ಸಂಪರ್ಕ ಕಡಿತವಾಗಿರುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕರ ಹಾಗೂ ಮಕ್ಕಳ ವಿದ್ಯಾಭ್ಯಾಸದ ಹಿತದೃಷ್ಟಿಯಿಂದ ಒಂದು ಹೊಸ ಬಸ್ಸನ್ನು ಜನವಾಡ ಮಾರ್ಗವಾಗಿ ಅಲಿಯಂಬರದಿಂದ ಯರನಳ್ಳಿ ವರೆಗೆ ಮುಂಜಾನೆ 11-00 ಗಂಟೆಗೆ ಬೀದರ ದಿಂದ ಬಿಟ್ಟು 11.30 ಗಂಡೆಗೆ, ಯರನಳ್ಳಿ ಗ್ರಾಮಕ್ಕೆ 12 ಗಂಟೆಗೆ, ಬೀದರಿಗೆ ಬಂದು, 12-30 ಗಂಟೆಗೆ ಮತ್ತೆ ಯರನಳ್ಳಿಗೆ 1-30 ಗಂಟೆ ಬಿಟ್ಟು ಮತ್ತೆ ಸಾಯಂಕಾಲ 4-00 ಗಂಟೆಗೆ ಬಿಟ್ಟು 5-00 ಗಂಟೆಗೆ ಯರನಳ್ಳಿಗೆ ತಲುಪಮವಂತೆ ಈ ರೀತಿಯಾಗಿ ಬಸ್ಸು ಓಡಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ನಿಗ್ರಹ ಸಮಿತಿಯ ವಿಭಾಗಿಯ ಪ್ರಮುಖರಾದ ಸಂಗಮೇಶ ಬಾವಿದೊಡ್ಡಿ,, ಜಿಲ್ಲಾಧ್ಯಕ್ಷ ವಿಶಾಲ್ ದೊಡ್ಡಿ ಸ್ಥಳೀಯ ಯುವ ಮುಖಂಡ ದತ್ತು ಬಾವಗೆ ಹಾಗೂ ಇತರರು ಉಪಸ್ಥಿತರಿದ್ದರು.























