ಕಾಲ್ತುಳಿತ: ಟಿವಿಸಿ ಜಿಲ್ಲಾ ಕಾರ್‍ಯದರ್ಶಿ ಬಂಧನ

ಕರೂರ್/ಚೆನ್ನೈ, ಸೆ. ೩೦: ಇದೇ ೨೭ ರಂದು ೪೧ ಜನರನ್ನು ಬಲಿ ತೆಗೆದುಕೊಂಡ ಭೀಕರ ಕಾಲ್ತುಳಿತದಲ್ಲಿ ಪ್ರಮುಖ ಶಂಕಿತರೆಂದು ಹೆಸರಿಸಲಾದ ನಟ ವಿಜಯ್ ಅವರ ಪಕ್ಷದ ಮೂವರು ಹಿರಿಯ ಕಾರ್ಯಕರ್ತರಲ್ಲಿ ಸೇರಿದ ತಮಿಳಿಗ ವೆಟ್ರಿ ಕಳಗಂನ ಕರೂರ್ ಜಿಲ್ಲಾ ಕಾರ್ಯದರ್ಶಿ ಮಥಿಯಾಳಗನ್ ಅವರನ್ನು ತಮಿಳುನಾಡು ಪೊಲೀಸರು ತಡ ರಾತ್ರಿ ಬಂಧಿಸಿದ್ದಾರೆ.


ಎ. ಸೆಲ್ವರಾಜ್, ಪ್ರಧಾನ ಕಾರ್ಯದರ್ಶಿ ಬುಸ್ಸಿ ಆನಂದ್ , ಜಂಟಿ ಪ್ರಧಾನ ಕಾರ್ಯದರ್ಶಿ ಸಿಟಿಆರ್ ನಿರ್ಮಲ್ ಕುಮಾರ್ ಮತ್ತು ಮಥಿಯಾಳಗನ್ ಅವರನ್ನು ಎಫ್‌ಐಆರ್ ನಲ್ಲಿ ಉಲ್ಲೇಖಿಸಲಾಗಿದೆ. ಕರೂರ್ ನಲ್ಲಿ ವಿಜಯ್ ಅವರ ಪ್ರಚಾರ ರಾಲಿಯಲ್ಲಿ ವಿಳಂಬ, ದುರಾಡಳಿತ ಮತ್ತು ಅವ್ಯವಸ್ಥೆಯು ಮಾರಣಾಂತಿಕ ಪ್ರೇಕ್ಷಕರ ಸಂದಣಿಯು ಚೋದಿಸಿತು ಎಂದು ಆರೋಪಿಸಲಾಗಿದೆ.


ಬಿಸಿಲಿನಲ್ಲಿ ದೀರ್ಘಕಾಲ ಕಾಯುವಿಕೆಯು ನೀರು ಮತ್ತು ವೈದ್ಯಕೀಯ ಸೌಲಭ್ಯಗಳ ಕೊರತೆ ಮತ್ತು ಜನಸಂದಣಿ ಭೀತಿಯನ್ನು ಹುಟ್ಟುಹಾಕಿದೆ ಎಂದು ಪೊಲೀಸರು ಆರೋಪದಲ್ಲಿ ಉಲ್ಲೇಖಿಸಿದ್ದಾರೆ.


ಕರೂರ್ ಪಟ್ಟಣ ಪೊಲೀಸರು ದಾಖಲಿಸಿದ ಎಫ್‌ಐಆರ್ ನಲ್ಲಿ ರಾಲಿಯನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಗಿದೆ ಎಂದು ಇದೇ ವೇಳೆ ಆರೋಪಿಸಲಾಗಿದೆ.
ಆನ್ ಲೈನ್ ನಲ್ಲಿ ಸುಳ್ಳು ಮಾಹಿತಿ ಹರಡಿದ್ದು ಅದು ಭೀತಿಗೆ ಕಾರಣವಾಯಿತು ಎಂದು ಮೂವರನ್ನು ಪೊಲೀಸರು ಬಂದಿಸಿದ್ದಾರೆ.


ವಿಜಯ್ ಮಧ್ಯಾಹ್ನ ಆಗಮಿಸಲಿದ್ದಾರೆ ಎಂದು ಟಿವಿ ಚಾನೆಲ್ ಗಳು ಘೋಷಿಸಿದ್ದವು. ಬೆಳಿಗ್ಗೆ ೧೦ ಗಂಟೆಯಿಂದ ಜನಸಂದಣಿ ಸೇರಲು ಪ್ರಾರಂಭವಾಯಿತ ಮತ್ತು ಸಂಘಟಕರು ೧೦,೦೦೦ ಸ್ವಯಂಸೇವಕರಿಗೆ ಅನುಮತಿ ಕೋರಿದ್ದರೆ, ೨೫,೦೦೦ ಕ್ಕೂ ಹೆಚ್ಚು ಜನರು ಕಾಣಿಸಿಕೊಂಡರು. ಸುಮಾರು ೫೦೦ ಪೊಲೀಸರನ್ನು ನಿಯೋಜಿಸಲಾಗಿತ್ತು. ದೂರಿನ ಪ್ರಕಾರ, ವಿಜಯ್ ಸಂಜೆ ೪.೪೫ ಕ್ಕೆ ವೇಲಾಯುಧಪಾಳ್ಯಂ ಮತ್ತು ತವಿಟ್ಟುಪಾಳಯಂ ಮೂಲಕ ಕರೂರ್ ಪ್ರವೇಶಿಸಿ, ಅನುಮತಿಯಿಲ್ಲದ ರೋಡ್ ಶೋಗಳನ್ನು ನಡೆಸಿ ಜನಸಂದಣಿಯ ಮಧ್ಯದಲ್ಲಿ ತನ್ನ ವಾಹನವನ್ನು ನಿಲ್ಲಿಸಿದರು ಎಂದು ಆರೋಪಿಸಲಾಗಿದೆ.


ಸ್ವಯಂಸೇವಕರನ್ನು ನಿಯಂತ್ರಿಸಲು ಟಿವಿಕೆ ಕಾರ್ಯಕರ್ತರಿಗೆ ಪದೇ ಪದೇ ಎಚ್ಚರಿಕೆ ನೀಡಿದ್ದರೂ, ಬೆಂಬಲಿಗರು ತಗಡಿನ ಶೆಡ್ ಗಳು ಮತ್ತು ಮರಗಳನ್ನು ಹತ್ತಿ ನಂತರ ಕುಸಿದು ಕೆಳಗಿರುವ ಜನರನ್ನು ಪುಡಿಪುಡಿ ಮಾಡಿದರು ಎಂದು ಎಫ್‌ಐಆರ್ ಹೇಳಿದೆ. ಪೊಲೀಸರು ಬಿಎನ್‌ಎಸ್ ಮತ್ತು ತಮಿಳುನಾಡು ಆಸ್ತಿ (ಹಾನಿ ಮತ್ತು ನಷ್ಟ ತಡೆಗಟ್ಟುವಿಕೆ) ಕಾಯ್ದೆಯ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.


ಆರೋಪಿಗಳು ಎಲ್ಲಿದ್ದಾರೆ ಎಂಬುದು ತಿಳಿದಿಲ್ಲವಾದರೂ, ಪೊಲೀಸರು ಏಕಕಾಲದಲ್ಲಿ ಆನ್ ಲೈನ್ ತಪ್ಪು ಮಾಹಿತಿಯ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಪೆರುಂಬಕ್ಕಂನ ಸಗಾಯಂ (೩೮) ಮಂಗಡು ನಿವಾಸಿ ಶಿವನೇಶನ್ (೩೫); ಆತಂಕವನ್ನು ಹುಟ್ಟುಹಾಕುವ ಸುಳ್ಳು ಹೇಳಿಕೆಗಳನ್ನು ಪ್ರಸಾರ ಮಾಡಿದ ಆರೋಪದ ಮೇಲೆ ಅವಡಿಯ ಶರತ್ ಕುಮಾರ್ (೩೨) ಮತ್ತು ಶರತ್ ಕುಮಾರ್ (೩೨) ಅವರನ್ನು ಸೋಮವಾರ ಬಂಧಿಸಲಾಗಿದೆ. ಅವರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿ ಕಸ್ಟಡಿಗೆ ಒಪ್ಪಿಸಲಾಗಿದೆ.

ವಿಶೇಷ ಮೇಲ್ವಿಚಾರಣಾ ಘಟಕವು ಟ್ರ್ಯಾಕ್ ಮಾಡಿದ ೨೫ ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧ ಪೊಲೀಸರು ಪ್ರಕರಣಗಳನ್ನು ದಾಖಲಿಸಿದ್ದಾರೆ.