Home ಜಿಲ್ಲೆ ಎಸ್ ಎಸ್ ಎಂಎಸ್ ಕಾಲೇಜಿಗೆ ಸತತ ಐದನೇ ಬಾರಿಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿ

ಎಸ್ ಎಸ್ ಎಂಎಸ್ ಕಾಲೇಜಿಗೆ ಸತತ ಐದನೇ ಬಾರಿಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿ

ಅಥಣಿ : ಇಲ್ಲಿನ ಭೋಜರಾಜ ಕ್ರಿಡಾಂಗಣದಲ್ಲಿ ಜರುಗಿದ ೨೦೨೬-೨೭ ಸಾಲಿನ ಅಥಣಿ ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ಸ್ಥಳೀಯ ಕೆ.ಎಲ್.ಇ. ಸಂಸ್ಥೆಯ, ಎಸ್.ಎಸ್.ಎಮ್.ಎಸ್. ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿವ ಮೂಲಕ ಸುಮಾರು ೨೭೭ ಅಂಕಗಳಿAದ ಪ್ರಚಂಡ ಗೆಲವು ಸಾಧಿಸುವ ಮೂಲಕ ಸತತ ಐದನೇ ಬಾರಿ ಅಂದರೆ, ೨೦೨೨-೨೩, ರಿಂದ ೨೦೨೬-೨೭ ವರೆಗೆ ತಾಲೂಕಾ ಕ್ರೀಡಾಕೂಟದಲ್ಲಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ಗಳಿಸುವ ಮೂಲಕ ಸಂಸ್ಥೆಗೆ, ಕಾಲೇಜಿಗೆ ಮತ್ತು ತಾಲೂಕಿಗೆ ಕೀರ್ತಿಯನ್ನು ತಂದು ಇತಿಹಾಸ ನಿರ್ಮಿಸಿದ್ದಾರೆ.
ಈ ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ಸುಮಾರು ೪೨ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಉಪನಿರ್ದೇಶಕ ಲಿಂಗರಾಜ ಎನ್. ಹಾಗೂ ಎಲ್ಲ ಅಥಣಿ ತಾಲೂಕಿನ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರು ಉಪಸ್ಥಿತರಿದ್ದರು.
ಗುಂಪು ಆಟದಲ್ಲಿ ಖೋ ಖೋ ದಲ್ಲಿ ಬಾಲಕರು ಮತ್ತು ಬಾಲಕಿಯರು ಪ್ರಥಮ, ತ್ರೋಬಾಲನಲ್ಲಿ ಬಾಲಕರು ಹಾಗೂ ಬಾಲಕಿಯರು ಪ್ರಥಮ, ಕಬಡ್ಡಿಯಲ್ಲಿ ಬಾಲಕರು ದ್ವಿತಿಯ, ಬಾಲಕಿಯರು ಪ್ರಥಮ ಸ್ಥಾನ ಗಿಟ್ಟಿಸಿಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅದೇ ರೀತಿಯಾಗಿ ವಾಲಿಬಾಲ್ ಪಂದ್ಯದಲ್ಲಿ ಬಾಲಕರು ಪ್ರಥಮ ಸ್ಥಾನಗಳಿಸಿದ್ದಾರೆ. ಯೋಗಾ ಸ್ಪರ್ದೇಯಲ್ಲಿ ಬಾಲಕರು ೬ ಮತ್ತು ಬಾಲಕಿಯರು ೩ ಪ್ರಥಮ ಸ್ಥಾನಗಳಿಸಿದ್ದಾರೆ. ಟೇನಿಕ್ವಾಟ್ ದಲ್ಲಿ ಬಾಲಕರು ಪ್ರಥಮ ಮತ್ತು ಬಾಲಕಿಯರು ದ್ವಿತೀಯ ಸ್ಥಾನಗಳಿಸಿದ್ದಾರೆ. ಗೆಲ್ಲುವುದು ನಮ್ಮ ಗುರಿಯಲ್ಲ ಗೆಲುವನ್ನು ನಮ್ಮ ಹೆಸರಿನ ಜೊತೆ ಶಾಶ್ವತವಾಗಿ ಬರೆಯುವದು ನಮ್ಮ ಗುರಿ ಎಂಬAತೆ ಹೆಮ್ಮೆಯ ಸಾಧನೆ ಮಾಡಿದ್ದಾರೆ.
ವ್ಯಯಕ್ತಿಕ ಆಟಗಳಾದ ಕಾಲನಡಿಗೆಯಲ್ಲಿ ಬಾಲಕ ಪ್ರಥಮ ಮತ್ತು ಬಾಲಕಿ ಪ್ರಥಮ, ದ್ವಿತೀಯ ಚೇಸ್‌ನಲ್ಲಿ ಬಾಲಕ ಹಾಗೂ ಬಾಲಕಿ ಪ್ರಥಮ ಹಾಗೂ ಎತ್ತರ ಜಿಗಿತದಲ್ಲಿ ಬಾಲಕ ಪ್ರಥಮ, ಹರ್ಡಲ್ಸ್ ನಲ್ಲಿ ಬಾಲಕ ಹಾಗೂ ಬಾಲಕಿ ದ್ವಿತೀಯ, ತೃತೀಯ, ಹಾಗೂ ೮೦೦ಮೀ ಓಟದಲ್ಲಿ ಬಾಲಕ ಪ್ರಥಮ ಹಾಗು ಬಾಲಕಿಯರು ದ್ವಿತೀಯ ಸ್ಥಾನಗಳಿಸಿದ್ದಾರೆ. ಮತ್ತು ೧೦೦ಮೀ ಓಟದಲ್ಲಿ ಬಾಲಕಿಯರು ತೃತೀಯ ಸ್ಥಾನಗಳಿಸಿದ್ದಾರೆ ಹಾಗೂ ೨೦೦ ಮೀ ಓಟದಲ್ಲಿ ಬಾಲಕಿಯರು ಪ್ರಥಮ ಸ್ಥಾನಗಳಿಸಿದ್ದಾರೆ. ೩೦೦೦ಮೀ ಗುಡ್ಡಗಾಡು ಓಟದಲ್ಲಿ ತೃತೀಯ ಸ್ಥಾನಗಳಿಸಿಕೊಂಡಿದ್ದಾರೆ.೧೦೦ಮೀ ರಿಲೇಯಲ್ಲಿ ಪ್ರಥಮ ಹಾಗೂ ಬಾಲಕಿ ದ್ವಿತೀಯ, ೪೦೦ಮೀ ರಿಲೇಯಲ್ಲಿ ಬಾಲಕಿಯರು ದ್ವಿತೀಯ. ತ್ರಿವಿಧ ಜಿಗಿತದಲ್ಲಿ ಬಾಲಕ ದ್ವಿತೀಯ ಹಾಗೂ ಬಾಲಕಿ ದ್ವಿತೀಯ ಪೋಲವಾಲ್ಟದಲ್ಲಿ ಬಾಲಕ ದ್ವಿತೀಯ ಗುಂಡು ಎಸೆತದಲ್ಲಿ ಬಾಲಕ ಪ್ರಥಮ, ಚಕ್ರ ಎಸೆತದಲ್ಲಿ ಬಾಲಕ ತೃತೀಯ ಭಲ್ಲೆ ಎಸೆತ ಬಾಲಕಿ ದ್ವಿತೀಯ ಹಾಗೂ ತೃತೀಯ ಸ್ಥಾನಗಳಿಸಿ ಯಾವ ವಿಭಾಗವಾದರು ಒಂದೆ ಉತ್ತರ ನೀಡಲು ನಾವು ಸಿದ್ದ ಗೆಲುವು ನಮ್ಮದೆ ತಾಲೂಕು ಮಟ್ಟದಲ್ಲಿ ಅಬ್ಬರ ಜಿಲ್ಲಾಮಟ್ಟದಲ್ಲಿ ಅದೆ ಜೋಶ ಈಗ ರಾಜ್ಯ ಮಟ್ಟದ ಅಖಾಡಕ್ಕೆ ನಮ್ಮ ಹೆಜ್ಜೆ ಎಂಬAತೆ ಹೆಮ್ಮೆಯ ಸಾಧನೆ ಮಾಡಿದ್ದಾರೆ.
ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಜಿಲ್ಲಾಮಟ್ಟದ ವಿವಿಧ ಕ್ರೀಡಾ ಸ್ಪರ್ಧೆಯಲ್ಲಿ ಭಾಗಿಯಾಗಿ ಇಲ್ಲಿಯವರೆಗೆ ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ವಿಜಯಶಾಲಿಯಾಗಿ ಸೂಮಾರು ೩೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಅದೇರೀತಿಯಾಗಿ ಕುಸ್ತಿ ಸ್ಪರ್ಧೆಯಲ್ಲಿ ೨ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ವಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬಾಲಕರು ೬೦ ಕೆ.ಜಿ. ಪ್ರಥಮ ೭೧ ಕೆಜಿ ದ್ವಿತೀಯ ೯೮ ಕೆ.ಜಿ. ದ್ವಿತೀಯ ಬಾಲಕಿಯರು ೪೮ ಕೆ.ಜಿ ಪ್ರಥಮ ೫೩ ಕೆ.ಜಿ. ಪ್ರಥಮ ಸ್ಥಾನ ಪಡೆದು ಕೊಂಡು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ
ಅವರ ಈ ಸಾಧನೆಯನ್ನು ಮೆಚ್ಚಿ ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ಕಾರ್ಯಾಧ್ಯಕ್ಷ ಅಮಿತ ಪಿ ಕೋರೆ, ಆಡಳಿತ ಮಂಡಳಿಯ ನಿರ್ದೇಶಕರು ಸ್ಥಾನಿಕ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಎಮ್.ಜಿ.ಹಂಜಿ ಹಾಗೂ ಸ್ಥಾನಿಕ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ಲಿಂಗರಾಜು ಎನ್.. ಅಥಣಿ ತಾಲೂಕಾ ಕ್ರೀಡಾ ಸಂಯೋಜಕ ಜಿ.ಎಮ್.ಚನಗೊಂಡ ಹಾಗೂ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಪ್ರಶಾಂತ ಮಗದುಮ್ಮ, ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಆರ್.ಎನ್.ಇನಾಮದಾರ, ಕ್ರೀಡಾ ವಿಭಾಗದ ಸಂಯೋಜಕ ಚಿದಾನಂದ ದಳವಾಯಿ, ದೈಹಿಕ ನಿರ್ದೇಶಕ ಕಾಶೀನಾಥ, ಖೇತಗೌಡರ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು. ಶುಭ ಹಾರೈಸಿ ಮುಂಬರುವ ಜಿಲ್ಲಾ, ರಾಜ್ಯ, ಹಾಗೂ ರಾಷ್ಟ್ರಮಟ್ಟದಲ್ಲಿ ಉನ್ನತ ಪ್ರದರ್ಶನ ನೀಡುವ ಮೂಲಕ ಕೀರ್ತಿ ಪತಾಕೆ ಹಾರಿಸಲೆಂದು ಶುಭಹಾರೈಸಿದ್ದಾರೆ.