ಎಸ್ಸೆಸ್ಸೆಲ್ಸಿ ಮರು ಮೌಲ್ಯಮಾಪನಖಡಕೇಶ್ವರ ಶಾಲೆಯ ವಿದ್ಯಾರ್ಥಿ ಅಶ್ವಿತಾಗೆ ೬೦೨ ಅಂಕ

ಭಾಲ್ಕಿ :ಮೇ.೨೪: ಇಲ್ಲಿಯ ಖಡಕೇಶ್ವರ ಪ್ರೌಢ ಶಾಲೆಯ ವಿದ್ಯಾರ್ಥಿ ಅಶ್ವಿತಾ ಸುನಿಲ ಅವರು ಎಸ್ಸೆಸ್ಸೆಲ್ಸಿ ಮರುಮೌಲ್ಯಮಾಪನದಲ್ಲಿ ೬ ಅಂಕ ಅಧಿಕ ಪಡೆದು ಶಾಲೆಯ ಪ್ರಥಮ ಸ್ಥಾನ ಕೊಂಡಿದ್ದಾರೆ. ೫೯೬ ಅಂಕ ಗಳಿಸಿದ್ದ ಅಶ್ವಿತಾ ಶಿಕ್ಷಕರ ಸಲಹೆ ಮೇರೆಗೆ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಮರು ಮೌಲ್ಯಮಾಪನದ ವೇಳೆ ಸಮಾಜ ವಿಜ್ಞಾನದಲ್ಲಿ ಆರು ಅಧಿಕ ಅಂಕ ಗಳಿಸಿದ್ದರಿಂದ ೬೦೨ ಅಂಕ ಗಳಿಸಿದ್ದಾರೆ ಎಂದು ಶಾಲೆಯ ಮುಖ್ಯಗುರು ಆನಂದ ಕಲ್ಯಾಣೆ ತಿಳಿಸಿದ್ದಾರೆ.
ಹರ್ಷ : ವಿದ್ಯಾರ್ಥಿಯ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಸುಧೀರ ನಾಯಕ, ಕೋಶಾಧ್ಯಕ್ಷ ಪ್ರಭುರಾವ ಧೂಪೆ, ನಿರ್ದೇಶಕ ಅಶೋಕ ಲೋಖಂಡೆ, ಮುಖ್ಯಗುರು ಆನಂದ ಕಲ್ಯಾಣೆ ಸೇರಿದಂತೆ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತ ಪಡಿಸಿದ್ದಾರೆ.