
ಸೇಡಂ, ಜ,೦೮: ವೆಂಕಟೇಶ ಅಪ್ಪು ಎನ್ನುವ ವ್ಯಕ್ತಿ ಫೇಸ್ ಬುಕ್ ಐ.ಡಿ.ಮೂಲಕ ಸಾಮಾಜಿಕ ಜಾಲ ತಾಣದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಚೆಲವಾದಿ ನಾರಾಯಣ ಸ್ವಾಮಿಯವರಿಗೆ ಜೀವ ಬೆದರಿಕೆ ಹಾಕಿದ್ದು ಕೂಡಲೇ ಅವರನ್ನು ಬಂಧಿಸಬೇಕು ಹಾಗೂ ಚೆಲವಾದಿ ನಾರಾಯಣ ಸ್ವಾಮಿಯವರಿಗೆ ಭದ್ರತೆ ನೀಡುವಂತೆ ಭಾರತಿಯ ಜನತಾ ಪಾರ್ಟಿ ಎಸ್.ಸಿ ಮೋರ್ಚಾದ ತಾಲೂಕಾ ಅಧ್ಯಕ್ಷ ರಾಮು ಕಣೆಕಲ್ ನೇತೃತ್ವದಲ್ಲಿ ಸಹಾಯಕ ಉಪವಿಭಾಗ ಆಯುಕ್ತರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಒತ್ತಾಯಿಸಿದರು. ಈ ವೇಳೆಯಲ್ಲಿ ಓಂ ಪ್ರಕಾಶ್ ಪಾಟೀಲ್ ತರನಳ್ಳಿ, ತಿರುಪತಿ ಶಾಬದ್ಕರ್, ರಾಘವೇಂದ್ರ ಮೆಕ್ಯಾನಿಕ್, ವಿಷ್ಣು ಊಡಗಿ,ಜೈಪ್ರಕಾಶ ರಾಠೋಡ, ಸಿದ್ದು ಊಡಗಿ, ಮಹಾವೀರ ಅಳ್ಳೊಳ್ಳಿ, ಸಿದ್ದಲಿಂಗ ನಿಡಗುಂದಾ, ರಾಜು ಕಟ್ಟಿ, ಅನಂತಪ್ಪ ಮೋತಕಪಲ್ಲಿ, ಹಣಮಂತ ಭರತನೂರ್, ಅಶೋಕ್ ಕೊಡದೂರ್, ಸೇರದಂತೆ ಅನೇಕರು ಇದ್ದರು.
ವೆಂಕಟೇಶ ಅಪ್ಪು ಎನ್ನುವ ಇವರನ್ನು ಬಂಧಿಸಿ ಛಲವಾದಿ ನಾರಾಯಣ ಸ್ವಾಮಿಯವರಿಗೆ ಜಡ್+ಭದ್ರತೆ ಒದಗಿಸಿಕೊಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ.
ರಾಮು ಕಣೆಕಲ್ ತಾಲೂಕಾ ಅಧ್ಯಕ್ಷರು
ಭಾರತಿಯ ಜನತಾ ಪಾರ್ಟಿ ಎಸ್.ಸಿ ಮೋರ್ಚಾ ಸೇಡಂ

























