ಗಮನ ಸೆಳೆದ ಶ್ರೀ ವೀರಭದ್ರೇಶ್ವರ ಅಂಬಾರಿ ಮೆರವಣಿಗೆ

ಹುಮನಾಬಾದ್:ಜ.20:ವೀರಭದ್ರೇಶ್ವರ ದೇವಸ್ಥಾನ ಬಳಿ ಹಿರೇಮಠದ ಪೂಜ್ಯ ವೀರರೇಣುಕ ಗಂಗಾಧರ ಮಹಾಸ್ವಾಮೀಜಿ ಹಾಗೂ ಶಾಸಕ ಸಿದ್ದು ಪಾಟೀಲ್ ಅವರು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅಂಬಾರಿ ಹೊತ್ತು ಆನೆ ಮೆರವಣಿಗೆ ಆರಂಭಗೊಂಡಿತು.

ಜಿಲ್ಲೆಯ ಸಾವಿರಾರು ಸಂಖ್ಯೆಯ ಭಕ್ತರು ಅಂಬಾರಿ ಮೆರವಣಿಗೆ ಕಣ್ಣುಂಬಿಕೊಳ್ಳಲು ಆಗಮಿಸಿದ್ದು ಗಮನಾರ್ಹವಾಗಿತ್ತು. ಶಾಸಕ ಡಾ.ಸಿದ್ದು ಪಾಟೀಲ ಅಂಬಾರಿ ಹೊರಲು ಆನೆ ವ್ಯವಸ್ಥೆ ಮಾಡಲಾಗಿತ್ತು.

ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾಗೂ ಸರ್ವ ಸದಸ್ಯರು ಮಾತ್ರವಲ್ಲದೇ ಅನೇಕ ಗಣ್ಯರು ಅಂಬಾರಿ ಉತ್ಸವದಲ್ಲಿದ್ದರು.