ಅಗರಖೇಡದ ಶ್ರೀ ಶಂಕರಲಿಂಗ ಜಾತ್ರಾಮಹೋತ್ಸವ

ಇಂಡಿ :ಮೇ.19: ಲೋಕ ಹಿತ ಹಾಗೂ ಆಗರಖೇಡ ಗ್ರಾಮದ ಶ್ರೇಯೋಭಿವೃದ್ಧಿಯ ಸಲುವಾಗಿ ಇಂಡಿ ತಾಲೂಕಿನ ಐತಿಹಾಸಿಕ ಸುಪ್ರಸಿದ್ಧವಾಗಿರುವ ಪುಣ್ಯ ಸುಕ್ಷೇತ್ರ ಅಗರಖೇಡ ಗ್ರಾಮದಲ್ಲಿ ಪುರಾತನ ಕಾಲದಿಂದಲೂ ಕೈಲಾಸನಾಥ ನೆಂದು ಹೆಸರು ವಾಸಿಯಾಗಿರುವ ಶ್ರೀ ಶಂಕರಲಿಂಗ ದೇವರಿಗೆ ರುದ್ರಾಭಿಷೇಕ, ಶಾಂತಿ ರುದ್ರ, ಹೋಮ, ನವಗ್ರಹ ಪೂಜೆ, ಸರ್ವ ದೇವತಾ ವಿಧಿ ವಿಧಾನ ಮುತೈದಿ ಯರಿಗೆ ಉಡಿತುಂಬುವ ಕಾರ್ಯಕ್ರಮ ಪಲ್ಲಕಿ ಮೆರವಣಿಗೆ ಹಾಗೂ ಪ ಪೂ ಶ್ರೀ ಬಸವರಾಜೇಂದ್ರ ಮಹಾ ಶಿವಯೋಗಿಗಳು ವೀರಕ್ತ ಮಠ ಖೇಡಗಿ, ಪ ಪೂ ಪ್ರಭುಲಿಂಗೇಶ್ವರ್ ಮಹಾ ಶಿವಯೋಗಿಗಳು ವೀರಕ್ತ ಮಠ ಅಗರಖೇಡ, ಹಾಗೂ ಪ ಪೂ ಶ್ರೀ ಶಂಕರಾನಂದ ಮಹಾ ಸ್ವಾಮಿಗಳು ಸಿದ್ದಾರೂಢ ಮಠ ಚಳಕಾಪುರ್ ಶಾಖೆ ಅಳೂರ್ ಇವರ ಉಪ ಸ್ಥಿತಿಯಲ್ಲಿ ವಿವಿಧ ಮೇಳದೊಂದಿಗೆ ಸಕಲ ವಾದ್ಯ ವೈಭವ ಹಾಗೂ ರಂಗು ರಂಗಿನ ಮದ್ದು ಸುಡುವುದುರೊಂದಿಗೆ ರಥೋತ್ಸವ ಜರುಗಿತು.