
ಕಲಬುರಗಿ:ಜ.19: ದೇವಸ್ಥಾನಗಳು ನಮ್ಮ ಸಂಸ್ಕøತಿಯ ಪ್ರತಿಕವಾಗಿದ್ದು, ಅವುಗಳು ಆಧ್ಯಾತ್ಮಿಕ ಭಕ್ತಿಯ ಚಿಂತನೆಗಳ ಮೂಲಕ ಮನಸ್ಸಿಗೆ ಶಾಂತಿ, ನೆಮ್ಮದಿ ನೀಡುವ ಪವಿತ್ರ ತಾಣಗಳಾಗಿವೆ. ಇಂತಹ ದೇವಸ್ಥಾನಗಳ ಸಾಲಿನಲ್ಲ್ಲಿಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲೂಕಿನ ಸುಕ್ಷೇತ್ರ ನಾಲವಾರ ಸದ್ಗುರು ಶ್ರೀಕೋರಿಸಿದ್ದೇಶ್ವರ ಮಠವು ಒಂದು. ಶ್ರೀಕೋರಿಸಿದ್ದೇಶ್ವರರು ನಿರಂಕಾರಿಯಾದ ಶಿವನವಾಣಿಯಂತೆ ಈ ಪುಣ್ಯಭೂಮಿಗೆ ಅವತರಿಸಿದ್ದ ಸಿದ್ಧಿಪುರುಷ ಶ್ರೀಕೋರಿಸಿದ್ದೇಶ್ವರರು
ಇಂತಹ ಪವಾಡ ಪುರುಷನ ಕರ್ತೃ ಗದ್ದಿಗೆ ಚೇತನ ಶಕ್ತಿ ಇಂದಿಗೂ ಇದೇ ಹೀಗಾಗಿಯೇ ಭಕ್ತರು ತಮ್ಮ ಸಂಸಾರ ತಾಪತ್ರಯ ನಿವಾರಣೆಗಾಗಿ ಪ್ರತಿ ಗುರುವಾರ ಹಾಗೂ ರವಿವಾರ ಅಪಾರ ಸಂಖ್ಯೆಯ ಭಕ್ತರು ಶ್ರೀಮಠಕ್ಕೆ ಆಗಮಿಸಿ ಕರ್ತೃ ಗದ್ದಿಗೆಗೆ ನಮಿಸಿ ದಿವ್ಯಾನಂದ ಪಡೆಯುವರು.
ಸದ್ಗುರು ಶ್ರೀಕೋರಿಸಿದ್ದೇಶ್ವರರನ್ನು ಕಾಖಂಡಕಿಯ ಗುರುಮಲ್ಲರಾಧ್ಯರು ತಮ್ಮ ಹತ್ತಿರ ಕರೆದು “ನೀನು ನಿಂತನಿರಾಗಬೇಡ ಹರಿಯುವ ನೀರಾಗು” ಜಗತ್ತಿನ ಜನರ ಬವಣೆಯನ್ನು ದೂರಮಾಡಿ ನಿನ್ನ ಮಹಿಮೆ ತೊರಿಸಲು ನೀನು ನಾಲವಾರಕ್ಕೆ ಹೋಗಿ ಅಲ್ಲಿಯ ಭೂತ ಬಾದೆಯನ್ನು ತೊಲಗಿಸಿ, ಶಿವತತ್ವ ಬೀಜವನ್ನು ಬಿತ್ತು. “ನೀನು ಮೇಟ್ಟಿದನೆಲ ಪಾವನ, ನೀನು ಮೇಟ್ಟಿದ ನಾಡು ಕೈಲಾಸವಾಗುವದು ಅನ್ನುವ ಹಾಗೇ ಶ್ರೀಕೋರಿಸಿದ್ದೇಶ್ವರರು ಗುರುಗಳ ಅಪ್ಪಣೆ ಮೇರೆಗೆ ಭೂತಬಾದೆಯನ್ನು ತೊಲಗಿಸಿ ನಾಲವಾರ ಕ್ಷೇತ್ರವನ್ನು ಕೈಲಾಸವನ್ನಾಗಿ ಮಾಡಿದ್ದು ಶ್ರೀಗಳ ಪವಾಡ ಲೀಲೆಯಿಂದ ಶ್ರೀಕೋರಿಸಿದ್ದೇಶ್ವರರ ಜಾತ್ರೆ ಭಕ್ತರ ಸೆಳೆಯುವ ಹಾಗೂ ಕೈಬೀಸಿ ಕರೆಯುವುದು ಮಠದ ಪಿಠಾಧಿಪತಿಯಾಗಿರುವ ಡಾ. ಸಿದ್ದತೊಂಟೇಂದ್ರ ಶಿವಾಚಾರ್ಯರು ಮಠವು ಕೇವಲ ಪೂಜಾ-ಪುನಸ್ಕಾರಕ್ಕೆ ಸಿಮೀತವಾಗದೆ, ಸಮಾಜವನ್ನು ಒಗ್ಗುಡಿಸುವಲ್ಲಿ ಮಹತ್ತರ ಪಾತ್ರ ವಹಿಸಿದ ಭಕ್ತರನ್ನು ಧಾರ್ಮಿಕ ಪ್ರಜ್ಞೆ ಹಾಗೂನೈತಿಕ ಮೌಲ್ಯಗಳ ಮೂಲಕ ಬೆಳೆಸುವಲ್ಲಿ ಶ್ರೀಗಳ ನಿರಂತರ ಶ್ರಮವಿದೆ. ಶ್ರೀಗಳ ಅಮೋಘಸೇವೆ ಗುರುತಿಸಿ ಸರ್ಕಾರ ಹಾಗೂ ಸಂಘಸಂಸ್ಥೆಗಳು ಗೌರವಪೂರ್ಣ ಸನ್ಮಾನ ಪ್ರಶಸ್ತಿ ನೀಡಿವೆ. ಬನ್ನಿ ಸದ್ಗುರು ಶ್ರೀಕೋರಿಸಿದ್ದೇಶ್ವರ ರಥೋತ್ಸವ ಡಾ. ಸಿದ್ದತೊಂಟೇಂದ್ರ ಶಿವಚಾರ್ಯರ ದಿವ್ಯಸನ್ನಿದಾನದಲ್ಲಿ ಜರಗುವ ರಥೋತ್ಸವದಲ್ಲಿ ನಾವು-ನೀವುಗಳೆಲ್ಲ ಭಾಗಿಗಳಾಗಿ ಉಭಯಶ್ರೀಗಳ ಕೃಪೆಗೆ ಪಾತ್ರರಾಗೊಣ
ರಮೇಶ ಎ ಗುತ್ತೇದಾರನಿವೃತಶಿಕ್ಷಕರುಬಿರಾಳ(ಬಿ)

























