
ನವಲಗುಂದ,ನ8: ಸಾಮಾಜಿಕ ಸಮಾನತೆ ಮತ್ತು ಭಕ್ತಿ ಚಳುವಳಿಗೆ ಕನಕದಾಸರು ನೀಡಿದ ಕೊಡುಗೆ ಅಮೂಲ್ಯವಾಗಿದ್ದು, ಸಾಮಾಜಿಕ ಅಸಮಾನತೆಗಳ ವಿರುದ್ಧ ಹೋರಾಡಿ, ಜಾತಿ ವ್ಯವಸ್ಥೆಯನ್ನು ನಿರಾಕರಿಸಿ, ಉಡುಪಿಯ ಶ್ರೀಕೃಷ್ಣನ ದರ್ಶನವನ್ನು “ಕನಕನ ಕಿಂಡಿ” ಮೂಲಕ ಎಲ್ಲರಿಗೂ ಸಾಧ್ಯವಾಗಿಸಿದವರು ಎಂದು ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಸಂತೋಷ ಹುಬ್ಬಳ್ಳಿ ಹೇಳಿದರು.
ಸ್ಥಳೀಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾದ ದಾಸ ಶ್ರೇಷ್ಠ ಪೂಜ್ಯ ಕನಕದಾಸರ ಜಯಂತಿಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು ಕವಿ, ತತ್ತ್ವಜ್ಞಾನಿ, ಮತ್ತು ಹರಿದಾಸರಾಗಿ ಕನ್ನಡ ಭಾಷೆಯಲ್ಲಿ ‘ಮೋಹನತರಂಗಿಣಿ’, ‘ನಳಚರಿತ್ರೆ’, ‘ರಾಮಧಾನ್ಯ ಚರಿತೆ’, ಮತ್ತು ‘ಹರಿಭಕ್ತಿಸಾರ’ ಮುಂತಾದ ಶ್ರೇಷ್ಠ ಕೃತಿಗಳನ್ನು ರಚಿಸಿದರು ಎಂದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಎಂ ಬಿ ಬಾಗಡಿ ಮಾತನಾಡಿ ಕನಕದಾಸರು ತಮ್ಮ ಕೃತಿಗಳ ಮೂಲಕ ಅಂದಿನ ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಪ್ರಯತ್ನಿಸಿದ ಕನಕದಾಸರು ತಮ್ಮ ಅನೇಕ ಕೀರ್ತನೆಗಳ ಮುಖಾಂತರ ಕನ್ನಡ ಸಾಹಿತ್ಯ ಲೋಕಕ್ಕೂ ತಮ್ಮ ಕೊಡಗೆಯನ್ನು ನೀಡಿದ್ದಾರೆ ಎಂದರು
ಇದಕ್ಕೂ ಮೊದಲು ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಗೌರವ ಅರ್ಪಣೆ ಮಾಡಿದರು.
ಪೆÇ್ರ ಆಯ್ ಬಿ ಸಾತಿಹಾಳ, ನಾಗರತ್ನ ಕುರಡೇಕರ, ಸವಿತಾ ಚಿಕ್ಕಣ್ಣವರ, ಗಣೇಶ, ಗಂಗಾಧರ, ಗುಳುಗಂದಿ, ಪಟಾಣಿ, ದೊಡಮನಿ, ರವಿ ಬ್ಯಾಹಟ್ಟಿ, ಕುಡ್ಲಣ್ಣವರ, ಮರಡಿ, ಪ್ರತಿಭಾ, ಚೈತ್ರ ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಕುಮಾರಿ ರೂಪಾ ಕೋಷ್ಟಿ ಸ್ವಾಗತಿಸಿ ನಿರೂಪಿಸಿದರು.ಸವಿತಾ ಜಾಲಗೇರಿ ವಂದಿಸಿದರು.

























