
ವಿಜಯಪುರ, ಅ. 12: ವಿಜಯಪುರ ಗ್ರಾಮೀಣ ತಾಲ್ಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕ್ರೀಡಾಕೂಟ ಅರಕೇರಿಯ ಜ್ಞಾನಜ್ಯೋತಿ ವಸತಿ ಶಾಲೆಯಲ್ಲಿ ನಡೆಯಿತು.
ಕಳ್ಳಕವಟಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿವಿಧ ಕ್ರೀಡಾ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
14 ವರ್ಷದೊಳಗಿನ ಬಾಲಕರ ವಾಲಿಬಾಲ್ನಲ್ಲಿ ವಿಷ್ಣು ರಾಠೋಡ್, ಆದಿತ್ಯ ರಾಠೋಡ್, ದರ್ಶನ್ ರಾಠೋಡ್, ಸಾಯಿನಾಥ ರಾಠೋಡ್, ಕುಮಾರ್ ರಾಠೋಡ್ ಹಾಗೂ ದಿನೇಶ ಪವಾರ ಅವರು ಉತ್ತಮ ಪ್ರದರ್ಶನ ನೀಡಿ ತಾಲ್ಲೂಕು ಮಟ್ಟದಲ್ಲಿ ಜಯಗಳಿಸಿ ಜಿಲ್ಲಾಮಟ್ಟಕ್ಕೆ ಅರ್ಹತೆ ಪಡೆದಿದ್ದಾರೆ.
17 ವರ್ಷದೊಳಗಿನ ಬಾಲಕಿಯರ ್ಠ4100 ಮೀಟರ್ ರಿಲೇಯಲ್ಲಿ ಪ್ರತೀಕ್ಷಾ ಕೊಟ್ಟಲಗಿ, ಶ್ರಷ್ಠಿ ವಾಲಿಕಾರ, ಅಂಜಲಿ ದಂಡಿನ ಹಾಗೂ ಪ್ರಿಯಾಂಕಾ ಅಟಪಳಕರ ಅವರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ.
ವಿದ್ಯಾರ್ಥಿಗಳ ಸಾಧನೆಗೆ ಮುಖ್ಯಶಿಕ್ಷಕ ಎಂ.ಎಂ. ಮಕಾನದಾರ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಮಾರುತಿ ಎಲ್. ಜಾಧವ ಸಂತಸ ವ್ಯಕ್ತಪಡಿಸಿ, ಜಿಲ್ಲಾಮಟ್ಟದಲ್ಲಿಯೂ ಉತ್ತಮ ಸಾಧನೆ ಮಾಡುವಂತೆ ಶುಭ ಹಾರೈಸಿದರು.
ಎಸ್ಡಿಎಂಸಿ ಅಧ್ಯಕ್ಷ ಗುರಪ್ಪ ಗಿದ್ನವರ, ಸರ್ವ ಸದಸ್ಯರು, ಗ್ರಾಮಸ್ಥರು, ಪಾಲಕ-ಪೆÇೀಷಕರು, ಶಿಕ್ಷಕರಾದ ಆರ್.ಎಸ್. ಚಿಕ್ಕಮಠ, ನಾಗೇಶ್, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.




















