
ತಾಳಿಕೋಟೆ:ಡಿ.೨೩: ಕ್ರೀಡೆ ಎಂಬುದು ಮನುಷ್ಯನ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವಂತಹದ್ದಾಗಿದೆ ಅಲ್ಲದೇ ವಿದ್ಯಾರ್ಥಿಗಳಲ್ಲಿ ಓದಿನ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವಂತಹದ್ದಾಗಿದೆ ಎಂದು ಅಸ್ಕಿ ಪೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ ಅವರು ಹೇಳಿದರು.
ರವಿವಾರರಂದು ನಗರದ ಶ್ರೀ ಖಾಸ್ಗತೇಶ್ವರ ಪಧವಿ ಪೂರ್ವ ಕಾಲೇಜ್ ಆವರಣದಲ್ಲಿ ತಾಳಿಕೋಟಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ತಾಳಿಕೋಟಿ ವ್ಹಾಲಿಬಾಲ್ ಪ್ರೀಯರ್ ಲೀಗ್ ಸೀಜನ್-೨ನಲ್ಲಿ ಪ್ರಥಮ ಸ್ಥಾನದಲ್ಲಿ ವಿಜೇತರಾದ ಯುಥ್ ಸ್ಪೋರ್ಟ್ಸ ಕ್ಲಬ್‌ನ ತಂಡಕ್ಕೆ ಅಸ್ಕಿ ಪೌಂಡೇಶನ್ ವತಿಯಿಂದ ೫೦ ಸಾವಿರ ರೂ. ನಗಧು ಹಾಗೂ ಪ್ರಥಮ ಭಹುಮಾನವನ್ನು ವಿತರಿಸಿ ಮಾತನಾಡುತ್ತಿದ್ದ ಅವರು ಆಟಗಳನ್ನು ಆಡುವಾಗ ಸೋಲು-ಗೆಲವು ಸಾಮಾನ್ಯವಾಗಿದೆ ಸೋಲು ಎಂಬುದು ಮುಂದೊAದು ದಿನ ಗೆಲುವಿನ ಸೋಪಾನವಾಗಲಿದೆ ಎರಡನ್ನು ಸಮಾನವಾಗಿ ಸ್ವಿಕರಿಸಿ ಕ್ರೀಡಾ ಮನೋಭಾವನೆಯನ್ನು ಹೆಚ್ಚಿಸಬೇಕೆಂದ ಅವರು ಈ ವ್ಹಾಲಿಬಾಲ್ ಕ್ರೀಡಾಕೂಟಕ್ಕೆ ಮುಂದಿನ ಭಾರಿ ಅಸ್ಕಿ ಪೌಂಡೇಶನ್ ವತಿಯಿಂದ ೧ ಲಕ್ಷ ರೂ. ಪ್ರಥಮ ಭಹುಮಾನವನ್ನು ಘೋಷಿಸಿದ ಅವರು ಕ್ರೀಡಾ ಮನೋಭಾವನೆಯನ್ನು ಹೆಚ್ಚಿಸುವದಕ್ಕಾಗಿ ಅಸ್ಕಿ ಪೌಂಡೇಶನ್‌ವು ಸದಾಕಾಲ ನಿಮ್ಮಜೊತೆಗೆ ನಿಲ್ಲಲಿದೆ ಈ ಸಿಜನ್-೨ ಮುಂದೆ ನೂರಾರು ವರ್ಷಗಳವರೆಗೆ ನಡೆಯಲಿ ಎಂದು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಳಿಕೋಟಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ರವಿ ಕಟ್ಟಿಮನಿ ಅವರು ವಹಿಸಿದ್ದರು.
ಇದೇ ಸಮಯದಲ್ಲಿ ಪ್ರಾಯೋಜಕತ್ವದವರ ವತಿಯಿಂದ ದ್ವಿತೀಯ, ತೃತೀಯ, ಭಹುಮಾನವನ್ನು ವಿತರಿಸಲಾಯಿತು.
ವೇದಿಕೆ ಮೇಲೆ ಗಣ್ಯರಾದ ಕಾಶಿನಾಥ ಮುರಾಳ, ದತ್ತು ಹೆಬಸೂರ, ಸಂತೋಷ ಮುರಾಳ, ಮಾನಸಿಂಗ್ ಕೊಕಟನೂರ, ಯಮನಪ್ಪ ಮಸರಕಲ್ಲ, ಮೈಹಿಬೂಬ ಕೇಂಭಾವಿ, ಲಂಕೇಶ ಪಾಟೀಲ, ದೈಹಿಕ ಶಿಕ್ಷಕ ಶಾಂತಗೌಡ ಅಸ್ಕಿ, ಮಲ್ಲು ಢವಳಗಿ, ವಿಕ್ರಮ ಅಗರವಾಲಾ, ಸಿದ್ದನಗೌಡ ಬಿರಾದಾರ, ತಾಳಿಕೋಟಿ ಸ್ಪೋರ್ಟ್ಸ ಕ್ಲಬ್‌ನ ಪದಾಧಿಕಾರಿಗಳು, ವ್ಹಾಲಿಬಾಲ್ ತಂಡಗಳ ಮಾಲಿಕರುಗಳಾದÀ ಪರಶುರಾಮ ಕಟ್ಟಿಮನಿ, ನಿರಂಜನಶಾ ಮಕಾಂದಾರ, ಸಂಜೀವ ಹಜೇರಿ, ರಾಜು ಪಾಟೀಲ, ಸಿದ್ದಾರ್ಥ ಕತ್ತಿ, ಇಲಿಯಾಸ ಜಮಖಂಡಿ, ಫಯಾಜ್ ಉತ್ನಾಳ, ಮೊದಲಾದವರು ಉಪಸ್ಥಿತರಿದ್ದರು.
ಸಂಜೀವ ಹಜೇರಿ ಸ್ವಾಗತಿಸಿದರು. ಎಸ್.ಕೆ.ಬಾಲಕೀಯರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಎ.ಬಿ.ಇರಾಜ್ ನಿರೂಪಿಸಿದರು. ರಾಘವೇಂದ್ರ ಮಾನೆ ವಂದಿಸಿದರು.
ಕ್ರೀಡೆಯಲ್ಲಿ ಸೋಲು-ಗೆಲವು ಸಮಾನವಾಗಿ ಸ್ವಿಕರಿಸಬೇಕು ಗೆದ್ದೆ ಎಂದು ಹಿಗ್ಗುವದು ಬೇಡಾ ಸೋತೆವು ಎಂದು ಕುಗ್ಗುವದು ಬೇಡಾ ಯಾವುದೇ ತಗಾದೆ ಇಲ್ಲದೇ ನಿರ್ಣಾಯಕರ ನಿರ್ಣಯಕ್ಕೆ ಬದ್ದರಾಗಿ ಕ್ರೀಡಾಮನೋಭಾವನೆಯೊಂದಿಗೆ ವ್ಹಾಲಿಬಾಲ್ ಕ್ರೀಡಾಕೂಟ ಯಶಸ್ವಿಗೊಂಡಿರುವದು ಸಂತಸ ತಂದಿದೆ.
ಸಿ.ಬಿ.ಅಸ್ಕಿ(ಅಸ್ಕಿ ಪೌಂಡೇಶನ್ ಅಧ್ಯಕ್ಷ)

























