
ಯಾದಗಿರಿ: ಜ.೧೧:ಗ್ರಾಮೀಣ ಭಾಗದಲ್ಲಿ ಹಬ್ಬಗಳ ಸಂದರ್ಭದಲ್ಲಿ ಹಿಂದೆ ನಾವು ಹತ್ತಾರು ದೇಸಿ ಆಟಗಳನ್ನು ಆಡುತ್ತಿದ್ದೇವು ಅವುಗಳು ಪ್ರಸ್ತುತ ದಿನಗಳಲ್ಲಿ ಮರೆಯಾಗಿವೆ
ಇತ್ತಿಚಿನಲ್ಲಿ ದಿನಗಳಲ್ಲಿ ಮುಂದುವರೆಸುವ ನಿಟ್ಟಿನಲ್ಲಿ ಕ್ರೀಡಾಕೂಟ ಆಯೋಜಿಸಿರುವುದು ಮೆಚ್ಚುವ ಕಾರ್ಯ ಎಂದು ಸಮಾಜ ಸೇವಕ ಪ್ರಥಮ ದರ್ಜೆ ಗುತ್ತಿಗೆದಾರ ಹನುಮೇಗೌಡ ಬೀರನಕಲ್ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲೆಯ ವಡಿಗೇರ ತಾಲೂಕಿನ ಗುಂಡುಗುರ್ತಿ ಗ್ರಾಮದಲ್ಲಿ ನಮ್ಮ ಕರ್ನಾಟಕ ಸೇನೆ ವತಿಯಿಂದ ಸಂಕ್ರಾAತಿ ಸುಗ್ಗಿ ಸಂಭ್ರಮ ಅಂಗವಾಗಿ ಆಯೋಜಿಸಲಾಗಿದ್ದ ಕ್ರೀಡೆಗಳಾದ ವಾಲಿಬಾಲ್ ಖೋ ಖೋ, ಮತ್ತು ಕಬ್ಬಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಯೊಬ್ಬರು ಇಂದು ಕ್ರೀಡೆಗಳು ಬೆಳೆಸುವ ಅಗತ್ಯವಿದ್ದು, ಯುವಕರು ದುಶ್ಚಟಕ್ಕೆ ಮಾರುಹೋಗದೆ ಕ್ರೀಡಾ ಮನೋಭಾವವನ್ನು ರೂಡಿಸಿಕೊಳ್ಳಬೇಕು ಶಿಕ್ಷಣದಿಂದ ಉಜ್ವಲ ಭವಿಷ್ಯ, ಕ್ರೀಡೆಯಿಂದ ಮಾನಸಿಕ ಹಾಗೂ ದೈಹಿಕವಾಗಿ ಉಜ್ವಲ ಆರೋಗ್ಯ ಕಂಡುಕೊಳ್ಳಬಹುದು ಎಂದು ಕ್ರೀಡಾಭಿಮಾನಿಗಳಿಗೆ ತಿಳಿಸಿದರು.
ನಮ್ಮ ಕರ್ನಾಟಕ ಸೇನೆ ನಾಡು ನುಡಿ ಸೇವೆಯ ಜೊತೆಗೆ ಕ್ರೀಡಾ ಅಭಿರುಚಿ ಬೆಳೆಸುವ ಕಾರ್ಯಕ್ರಮ ಆಯೋಜನೆ ಮಾಡಿರುವುದು ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಧರ್ ಸಾಹುಕಾರ ಮಾತನಾಡಿ ಈಗಿನ ಯುವ ಪೀಳಿಗೆಯು ಆನ್ಲೈನ್ ಬೆಟ್ಟಿಂಗ್ ಆಪ್ ಅಂತಹ ಮಾರಕಗಳಿಂದ ಬದುಕು ಹಾಳು ಮಾಡಿಕೊಳ್ಳದೆ ಕ್ರೀಡೆಗಳಲ್ಲಿ ತೊಡಗಿ ದೈಹಿಕವಾಗಿ ಸದೃಢಗೊಳಿಸುವ ಕ್ರೀಡೆಗಳಿಗೆ ಮಾತ್ರ ಮಹತ್ವ ನೀಡಬೇಕು, ಸೋಲು ಗೆಲುವು ಸಮನಾಗಿ ಸ್ವೀಕರಿಸಿದಾಗ ಮಾತ್ರ ಅವರು ನಿಜವಾದ ಕ್ರೀಡಾಪಟುಗಳಾಗಲು ಸಾಧ್ಯ ಎಂದು ತಿಳಿ ಹೇಳಿದರು.
ಅಧ್ಯಕ್ಷತೆಯನ್ನು ನಕಸೇ ಜಿಲ್ಲಾದ್ಯಕ್ಷ ವಿಶ್ವರಾಧ್ಯ ದಿಮ್ಮೆ ವಹಿಸಿದ್ದರು. ನೇತೃತ್ವವನ್ನು ನಕಸೇ ವಡಿಗೇರಾ ಯುವ ಘಟಕ ತಾಲೂಕು ಅಧ್ಯಕ್ಷರಾದ ರಾಜು ಬಿ ಮ್ಯಾಗಿನಮನಿ ವಹಿಸಿದ್ದರು.
ಅತಿಥಿಗಳಾಗಿ ಪ್ರೌಢಶಾಲೆ ಮುಖ್ಯ ಗುರು ತಿಪ್ಪಣ್ಣ ನಾಗವಾರ, ವಡಿಗೇರ ತಾಲೂಕ ಅಧ್ಯಕ್ಷ ಮಲ್ಲು ಕಲ್ಮನಿ, ನಾಗರೆಡ್ಡಿಗೌಡ ಗೋಡಿಹಾಳ, ಮಲ್ಲಣ್ಣಗೌಡ, ದೇವೀಂದ್ರಪ್ಪ ಮ್ಯಾಗಿನಮನಿ, ವಿಜಯ್ ಭಾರದ್ವಾಜ್, ರಾಜುಗೌಡ ದಳಪತಿ ಹಾಗೂ ಅನೇಕ ಗ್ರಾಮದ ಮುಖಂಡರು ವೇದಿಕೆಲಿದ್ದರು. ನಕಸೇ ಮುಖಂಡರಾದ ಅಬ್ದಲ್ ಸಾಹುಕಾರ, ಚೆನ್ನಬಸ್ಸು ಕನಕ, ಶರಣು ನಾಟೇಕರ್, ಸಿದ್ದು ಕಾಡಂನೋರ್, ವಿಶ್ವಾರಾಧ್ಯ ಮಾನೇಗಾರ ಸೇರಿ ಇನ್ನಿತರು ಪಾಲ್ಗೊಂಡರು.
























