ಸದೃಢ ಆರೋಗ್ಯಕ್ಕೆ ಕ್ರೀಡೆ ಉತ್ತೇಜನ : ಶಾಸಕ ಶರಣಗೌಡ ಕಂದಕೂರ

ಗುರುಮಠಕಲ್: ಸೆ.೨:ಕ್ರೀಡಾ ವಿಭಾಗದಲ್ಲಿ ಗ್ರಾಮೀಣ ಪ್ರತಿಭೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರಥಮ ಭಾರಿಗೆ ದಸರಾ ಕ್ರೀಡಾಕೊಟ ಆರಂಭಿಸಲಾಗಿದೆ ಹಾಗೂ ಕ್ರೀಡಾ ಪ್ರೇಮಿಗಳು ಮತ್ತು ಕ್ರೀಡಾ ಪಟುಗಳು ಉತ್ತಮ ಸಾಧನೆಗ?ಯಲು ಅನುಕೂಲವಾಗುವ ನಿಟ್ಟಿನಲ್ಲಿ ಗುರುಮಠಕಲ್ ವ್ಯಾಪ್ತಿಯಲ್ಲಿ ಐದು ಎಕರೆ ಭೂಮಿಯಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲು ಕ್ರಮಕ?ಗೊಳ್ಳಲಾಗುವುದು ಎಂದು ಗುರುಮಠಕಲ್ ಶಾಸಕ ಶರಣುಗೌಡ ಕಂದಕೂರ ಹೇಳಿದರು. ಪಟ್ಟಣದ ಜವಾಹರಲಾಲ್ ನೇಹರು ಕ್ರೀಡಾಂಗಣದಲ್ಲಿ ಯುವ ಸಭಲಿಕರಣ ಮತ್ತು ಕ್ರೀಡಾ ಇಲಾಖೆ, ಶಾಲಾಶಿಕ್ಷಣ ಮತ್ತು ಸಾಕ್ಷರತ ಇಲಾಖೆ, ತಾಲೂಕಾ ಪಂಚಾಯತ, ಪುರಸಭೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ೨೦೨೫-೨೬ ಸಾಲಿನ ತಾಲೂಕು ಮಟ್ಟದ ದಸರಾ ಕ್ರೀಡಾಕೊಟವನ್ನು ಉದ್ಘಾಟಿಸಿ ಮಾತನಾಡಿದರು. ಕ್ರೀಡಾ ಮ?ದಾನದಲ್ಲಿ ಬಂದಿರುವ ಕ್ರೀಡಾ ಪಟುಗಳು ತೀರ್ಪುಗಾರರು ನೀಡುವ ತೀರ್ಮಾನಕ್ಕೆ ಗೌರವ ಕೊಡುವುದು ಕ್ರೀಡಾ ಪಟುವಿನ ಧರ್ಮವಾಗಿದೆ ಹಾಗೆಯೆ ತೀರ್ಪುಗಾರರು ಯಾರಮೇಲೆಯು ಬೇದ ಭಾವ ವಿಲ್ಲದೆ ನಿಸ್ಸಂಶಯವಾಗಿ ತೀರ್ಮಾನ ಮಾಡುವ ಮೂಲಕ ಯುವಕರಲ್ಲಿ ಉತ್ಸಹ ತುಂಬಬೇಕು ಕ್ರೀಡೆಗಳಲ್ಲಿ ಭಾಗವಹಿಸುವದರಿಂದ ಪ್ರತಿಯೋಬ್ಬರಿಗು ಮಾನಸಿಕ ಹಾಗೂ ದ?ಹಿಕ ಆರೋಗ್ಯ ವೃದ್ಧಿಯಾಗುತ್ತದೆ ಹೇಳಿದರು. ಈ ವೇಳೆ ಪುರಸಭೆ ಅಧ್ಯಕ್ಷೆ ಜಯಶ್ರೀ ಆರ್. ಪಾಟೀಲ್, ನರ್ಮದ ಅವಂಗಪೂರ,ಶಿಕ್ಷಣ ಸಂಯೋಜಕ ರವೀಂದ್ರ, ಬಾಲಪ್ಪ ಸಿರಿಗೆಂ, ಅನಿಲ್ ಕುಮಾರ ದೊರನಹಳ್ಳಿ, ಬಸಣ್ಣ ದೇವರಹಳ್ಳಿ,ಶರಣು ಅವುಂಟಿ, ಪ್ರಕಾಶ ನಿರೇಟಿ, ಎಸ್ ಪಿ ಮಹೇಶ್,ಅಂಬದಾಸ ಜೀತ್ರಿ, ಬಾಲಪ್ಪ ದಾಸರಿ, ಆಶೋಕ ಕಲಾಲ್, ಭಾನು ಪ್ರಕಾಶ ಸೇರಿದಂತೆ ವಿವಿಧ ಶಾಲೆಗಳ ಕ್ರೀಡಾ ಪಟ್ಟುಗಳು ಇದ್ದರು.