
ಸೇಡಂ,ಫೆ,೨೫:ಇAದಿನ ಯಾಂತ್ರಿಕ ಜೀವನದಲ್ಲಿ ಮನುಷ್ಯ ಭೌತಿಕ ಸುಖಗಳ ಹಿಂದೆ ಬಿದ್ದು ಅಶಾಂತಿಗೆ ಒಳಗಾಗುತ್ತಿದ್ದಾನೆ, ಅಂತರAಗದ ಶಾಂತಿ ಮತ್ತು ಆತ್ಮದ ಉನ್ನತಿಗಾಗಿ ಪ್ರತಿಯೊಬ್ಬರಿಗೂ ಆಧ್ಯಾತ್ಮಿಕ ಚಿಂತನೆ ಅತಿ ಅವಶ್ಯಕ ಎಂದು ತೊಟ್ನಳ್ಳಿಯ ಶ್ರೀ ಮಹಾಂತೇಶ್ವರ ಹಿರೇಮಠದ ಪೀಠಾಧಿಪತಿಗಳಾದ ಷ, ಬ್ರ, ಶ್ರೀ ಡಾ. ತ್ರಿಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.
ಪಟ್ಟಣದಲ್ಲಿರುವ ಜಂಗಮ ಓಣಿಯಲ್ಲಿರುವ ಶ್ರೀ ಕಾರೇಘಟ್ಟ ಸಿದ್ಧೇಶ್ವರ ದೇವಾಲಯದ ಗೋಪುರ ಕಳಸಾಹರೋಹಣ ಹಾಗೂ ರಜತ ಮಹೋತ್ಸವದ ಮೂರ್ತಿ ಪ್ರತಿಷ್ಠಾಪನೆ ಮತ್ತು ಮಹಾ ಮಂಗಳಾರತಿಯ ಪ್ರಥಮ ವರ್ಷದ ವಾರ್ಷಿಕೋತ್ಸವದ ನಿಮಿತ್ಯವಾಗಿ ಶ್ರೀ ಕಾರೇಘಟ್ಟ ಸಿದ್ಧೇಶ್ವರ ದೇವಾಲಯ ಚಾರಿಟೇಬಲ್ ಆಯಿಂಡ್ ವೇಲ್‌ಫೇರ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡ ಧರ್ಮಸಭೆಯ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು ಶಾಂತಿ ಎಂಬುದು ನಮ್ಮ ಒಳಗಿದೆ, ಅದನ್ನು ಹೊರತೆಗೆಯಲು ಆಧ್ಯಾತ್ಮಿಕ ಚಿಂತನೆಯ ಅವಶ್ಯಕತೆ ಇದೆ ಎಂದು ಶ್ರೀಗಳು ಮಾರ್ಮಿಕವಾಗಿ ನುಡಿದರು. ಷ.ಬ್ರ. ಶ್ರೀ ಶಿವಶಂಕರ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಿದರು,ಷ.ಬ್ರ. ಶ್ರೀ ಅಭಿನವ ಕಾರ್ತಿಕಶ್ವರ ಶಿವಾಚಾರ್ಯರು,ಮ.ನಿ.ಪ್ರ. ಶ್ರೀ ಪಂಚಾಕ್ಷರ ಮಹಾಸ್ವಾಮಿಗಳು,ಶ್ರೀಮತಿ ಸಂತೋಷಿರಾಣಿ ರಾಜಕುಮಾರ ಪಾಟೀಲ್, ರಾಜಶೇಖರ್ ನೀಲಂಗಿ ಮಾತನಾಡಿದರು. ಈ ವೇಳೆಯಲ್ಲಿ ಸಿದ್ದಯ್ಯ ಸ್ವಾಮಿ ಇಮ್ಮಡಾಪುರ, ದೇವೇಂದ್ರಪ್ಪ ಕೋಟ್ರಕಿ, ರಾಜಶೇಖರ ರುದೂರ, ಪುರಸಭೆ ಮಾಜಿ ಅಧ್ಯಕ್ಷ ಶಿವರುದ್ರಪ್ಪ ಕೊಳಕೂರ, ಬಿಜೆಪಿ ಮುಖಂಡ ಶ್ರೀಮಂತ ಅವಂಟಿ, ಹಿರಿಯ ಸಾಹಿತಿ ವೀರಯ್ಯ ಸ್ವಾಮಿ ಮಠಪತಿ,ಉಮೇಶ ಪಾಟೀಲ ಯಾಕಪುರ, ಸಂತೋಷಕುಮಾರ ಕುಲಕರ್ಣಿ,ಸಿದ್ದಯ್ಯಸ್ವಾಮಿ ಭಂಡಾ,ಶಿವಲಿAಗಯ್ಯಸ್ವಾಮಿ ಮಠಪತಿ, ಶರಣಯ್ಯ ಸ್ವಾಮಿ ಭಂಡಾ, ನಾಗೇಂದ್ರಪ್ಪ ರಾಜಾಪುರ, ಶಂಕ್ರಯ್ಯ ಸ್ವಾಮಿ ಮಠಪತಿ, ಮಹೇಶ ಕೋಟ್ರಕಿ,ಲಲಿತಾ ಪಾಟೀಲ ಯಾಕಾಪುರ, ರೇಣುಕಾ ಕೊಳ್ಳಿ, ಅಶ್ವಿನಿ ಭಂಡಾ ಶ್ರೀದೇವಿ ಮಠಪತಿ ಇನ್ನಿತರರು
ಇದ್ದರು.ಶ್ರೀಮತಿ ಶಾಕಾಂಬರಿದೇವಿ ಬೊಮ್ಮನಳ್ಳಿ ಪ್ರಾರ್ಥಿಸಿದರು. ನಂಜುAಡೇಶ್ವರ ಸ್ವಾಮಿ ಮಠಪತಿ ಸ್ವಾಗತಿಸಿದರು.ಶಿವಕುಮಾರ ಸ್ವಾಮಿ ಹಿರೇಮಠ ನಿರೂಪಿಸಿದರು, ರಾಚಣ್ಣ ಬಳಗಾರ ವಂದಿಸಿದರು.






















