ಆಧ್ಯಾತ್ಮಿಕ ಶಿವಾನುಭವ ಗೋಷ್ಠಿ ಪ್ರಾರಂಭ

ತಾಳಿಕೋಟೆ:ಫೆ.೯: ಬ್ರಹ್ಮಕುಮಾರಿ ಪಾಠ ಶಾಲೆ ಗಣೇಶನಗರ ಅವರ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಅಂಗವಾಗಿ ಕಳೆದ ದಿ. ೭ ರಿಂದ ೧೫ ರವಿವಾರದ ವರೆಗೆ ಪ್ರಾರಂಭಗೊAಡಿದೆ ಪ್ರತಿನಿತ್ಯ ಸಾಯಂಕಾಲ ೬ ಗಂಟೆಯಿAದ ೮ ಗಂಟೆಯವರೆಗೆ ಆದ್ಯಾತ್ಮೀಕ ಶಿವಾನುಭವಗೋಷ್ಠಿ ಜರುಗಲಿದ್ದು ದಿ. ೧೪ ಶನಿವಾರರಂದು ಮದ್ಯಾಹ್ನ ೨ ಗಂಟೆಯಿAದ ೬ ಗಂಟೆಯವರೆಗೆ ವಿಶ್ವಶಾಂತಿಗಾಗಿ ಶಾಂತಿಯಾತ್ರೆ ಹಾಗೂ ಅಂದು ೧೨ ಜ್ಯೋತಿರ್ಲಿಂಗಗಳ ಹಾಗೂ ಸನಾತನ ಧರ್ಮದ ದೇವತೆಗಳ ಸ್ಥಬ್ದಚಿತ್ರಗಳ ಭವ್ಯ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಾದ್ಯ ವೈಭವಗಳೊಂದಿಗೆ ಜರುಗಲಿದೆ ಎಂದು ಬ್ರಹ್ಮಕುಮಾರಿ ಪಾಠ ಶಾಲೆಯ ಸಂಚಾಲಕರಾದ ಬ್ರಹ್ಮಕುಮಾರಿ ಪ್ರೇಮಾ ಪಾಟೀಲ ಅವರು ತಿಳಿಸಿದ್ದಾರೆ.
ಪ್ರತಿನಿತ್ಯ ಗಣೇಶ ನಗರ ಈ ಬಡಾವಣೆಯಲ್ಲಿ ಜರುಗಲಿರುವ ಸಾಮಾಜಿಕ ಸಾಂಸ್ಕೃತಿಕವಾಗಿ ಆರ್ಥಿಕವಾಗಿ ಮನುಜಕುಲದ ಉದ್ದಾರಕ್ಕಾಗಿ ಅನೇಕ ಸಂತರ ಮಹಾ ಪುರುಷರ ಅಲ್ಲದೇ ಒಳ್ಳೆಯ ಅನುಭಾವಿಗಳಿಂದ ದಿ. ೧೫ ರವರೆಗೆ ಪ್ರವಚನ ಹಾಗೂ ಉಪನ್ಯಾಸಗಳು ಜರುಗುತ್ತವೆಂದರು.
ಕಾರಣ ತಾಳಿಕೋಟೆ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರರು ದಿನನಿತ್ಯ ಸಾಯಂಕಾಲ ೬ ಗಂಟೆಯಿAದ ೮ ಗಂಟೆಯವರೆಗೆ ಜರುಗಲಿರುವ ಈ ಆದ್ಯಾತ್ಮೀಕ ಶಿವಾನುಭವ ಗೋಷ್ಠಿಯಲ್ಲಿ ಪಾಲ್ಗೊಂಡು ನಿಜವಾದ ಸತ್ಯವಾದ ಪರಮಾತ್ಮನ ಪರಿಚಯವನ್ನು ಪಡೆದುಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.
(ಸ್ಥಳ ದಿವ್ಯ ಸಂಗಮ ಭವನ ಗಣೇಶ ನಗರ ಎಸ್‌ಬಿಐ ಬ್ಯಾಂಕ್ ಹಿಂದುಗಡೆ ತಾಳಿಕೋಟೆ) ಈ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಜಯಪುರದ ಬಿ.ಕೆ.ಯಾದವಾಡ, ಸಂಚಾಲಕರಾದ ಬಿ.ಕೆ.ದೇವರಾಜ, ಪ್ರೇಮಾ ಪಾಟೀಲ, ಬಿ.ಕೆ.ಮಹಾಂತೇಶ, ನಿಂಗಣ್ಣ ಬಿಳೇಭಾವಿ, ಅಣ್ಣುಗೌಡ ಪಾಟೀಲ(ಆಹೇರಿ), ಎನ್.ಎನ್.ಕುಂಭಾರ, ಆರ್.ಬಿ.ಧಾನಿ, ಅಂಜನಾ ಅನಂತರೆಡ್ಡಿ ಅವರನ್ನೊಳಗೊಂಡು ಈ ಆದ್ಯಾತ್ಮೀಕ ಶಿವಾನುಭವಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.