ಮಳೆ ಬೆಳೆ ಬಾವಗಿ ಭದ್ರೆಶ್ವರನಿಗೆ ವಿಶೇಷ ಪೂಜೆ

ಬೀದರ್ :ಜೂ.23:ಉತ್ತಮ ಮಳೆ, ಬೆಳೆ ನಾಡಿನ ಸಮೃದ್ಧಿಗೆ ಕೋರಿ ಬೀದರ್ ತಾಲುಕಿನ ಬಾವಗಿ ಗ್ರಾಮದ ಶ್ರೀ ಭದ್ರೆಶ್ವರ ದೇವಸ್ಥಾನದಲ್ಲಿ ಸೋಮವಾರ ಭದ್ರೆಶ್ವರ ಮಠದ ಶ್ರೀ ಶಿವುಕುಮಾರ ಸ್ವಾಮೀಜಿ ನೇತೃತ್ವದಲ್ಲಿ ರುದ್ರ ಹೋಮ, ಹವನ, ವಿಶೇಷ ಪೂಜೆ ಇತರೆ ಧಾರ್ಮಿಕ ವಿಧಿ ವಿಧಾನಗಳನ್ನು ನೆರೆವೇರಿಸಲಾಯಿತು.

ನಂತರ ಮಾತನಾಡಿದ ಸ್ವಾಮೀಜಿಯವರು, ಪ್ರಕೃತಿ ಮೇಲೆ ಮಾನವ ನಡೆಸುತ್ತಿರುವ ಕ್ರೌರ್ಯದ ಫಲವಾಗಿ ಮಳೆ, ಬೆಳೆ ಇಲ್ಲದಂತಾಗಿದೆ ಲಕ್ಷಾಂತರ ರೂ. ಖರ್ಚು ಮಾಡಿದ ರೈತನ ಕೈಗೆ ಬೆಳೆಗಳು ಸಿಗದಂತಾಗಿದೆ. ಪ್ರಕೃತಿ ಮುನಿದರೆ ಮುನುಷ್ಯನ ಬದುಕು ನಾಶವಾಗುತ್ತದೆ. ಪ್ರಕೃತಿಯನ್ನು ನಾವು ನಡೆಸಿಕೊಂಡಂತೆ, ಪ್ರಕೃತಿ ನಮ್ಮನ್ನು ನಡೆಸಿಕೊಳ್ಳುತ್ತದೆ.

ಭದ್ರೆಶ್ವರ ಮಠದ ಶ್ರೀ ಶಿವುಕುಮಾರ ಸ್ವಾಮಿ
ವೀರೇಶ್ ಬೊಮ್ಮಣಿ ಬಸವರಾಜ ದೊಡ್ಡತಮ್ಮ ರಾಜಕುಮಾರ್ ಬಾಪೂರ್ ಭೀಮಣ್ಣ ಹೊನ್ನಿಕೇರಿ ಮಲ್ಲಿಕಾರ್ಜುನ್ ಕೋರಿ ಉಮೇಶ್ ಹೊನ್ನುಕೇರಿ
ಗ್ರಾಮಗಳ ನೂರಾರು ಭಕ್ತರು ಭಾಗವಹಿಸಿದ್ದರು. ಮಹಿಳೆಯರು ಇದ್ದರು