Home ಜಿಲ್ಲೆ ಕಲಬುರಗಿ ಶ್ರೀ ಅಂಬಾ ಭವಾನಿ ದೇವಿಗೆ ವಿಶೇಷ ಪೂಜೆ: ಭಕ್ತರಿಗೆ ಪ್ರಸಾದ ವಿತರಣೆ

ಶ್ರೀ ಅಂಬಾ ಭವಾನಿ ದೇವಿಗೆ ವಿಶೇಷ ಪೂಜೆ: ಭಕ್ತರಿಗೆ ಪ್ರಸಾದ ವಿತರಣೆ

ಚಿಂಚೋಳಿ: ಪಟ್ಟಣದ ಚಂದಾಪುರ ರಾಮನಗರದಲ್ಲಿರುವ ಶ್ರೀ ಅಂಬಾ ಭವಾನಿ ದೇವಿಯ ದೇವಸ್ಥಾನದಲ್ಲಿ ಪ್ರತಿವರ್ಷದ ಸಂಪ್ರದಾಯದಂತೆ ಈ ವರ್ಷವೂ ದಸರಾ ಹಬ್ಬದ ನಂತರದ ಹುಣ್ಣಿಮೆಯ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಶ್ರೀ ಅಂಬಾ ಭವಾನಿ ದೇವಿಗೆ ಅಭಿಷೇಕ ಹಾಗೂ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ದೇವಿಯ ದರ್ಶನಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಶ್ರೀ ಅಂಬಾ ಭವಾನಿ ದೇವಿಯ ನೂತನವಾಗಿ ನಿರ್ಮಿಸಲಾದ ಭವನದಲ್ಲಿ ಪೂಜಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಭಕ್ತರು ಭಕ್ತಿಭಾವದಿಂದ ಪಾಲ್ಗೊಂಡು ದೇವಿಯ ಆಶೀರ್ವಾದ ಪಡೆದರು.