
ಕೋಲಾರ,ಜು,೨೨- ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ಕೋಮುಲ್ ವತಿಯಿಂದ ಎಮ್ಮೆ ಖರೀದಿಗ ವಿಶೇಷ ಸಹಾಯಧನವನ್ನು ಜಾರಿಗ ತರಲು ಆಡಳಿತ ಮಂಡಳಿ ಐತಿಹಾಸಿಕ ನಿರ್ಣಯ ಕೈಗೊಂಡಿದೆ ಎಂದು ಕೋಮುಲ್ ಅಧ್ಯಕ್ಷ ಹಾಗೂ ಶಾಸಕ ಕೆ ವೈ ನಂಜೇಗೌಡ ಹೇಳಿದರು.
ಕೋಮುಲ್ ಹಾಲು ಡೇರಿ ಕಚೇರಿಯ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಯಲ್ಲಿ ಹೈನುಗಾರಿಕೆ ಸಾಕಾಣಿಕೆಯನ್ನು ಪ್ರೋತ್ಸಾಹಿಸಲು ಮತ್ತು ಹೈನುಗಾರರ ಆದಾಯ ಹೆಚ್ಚಿಸಲು ಪ್ರತಿ ಎಮ್ಮೆಗ ೩೦ ಸಾವಿರ ರೂ. ಸಹಾಯಧನವನ್ನು ನೀಡಲು ಒಕ್ಕೂಟದಿಂದ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಪ್ರತಿ ವರ್ಷಕ್ಕ ಒಂದು ಸಾವಿರ ಸಂಖ್ಯ ಎಮ್ಮೆ ಖರೀದಿಸುವ ಅರ್ಹ ಹಾಲು ಉತ್ಪಾದಕರಿಗ ೩ ಕೋಟಿ ರೂ. ಗಳ ಸಹಾಯಧನ ನೀಡಲು ಆಡಳಿತ ಮಂಡಳಿ ಒಪ್ಪಿಗ ಇದ್ದು, ಈ ಯೋಜನೆಯು ೫ ವರ್ಷಗಳ ಅವಧಿಗ ಜಾರಿಗೊಳಿಸಲು ಉದ್ದೇಶಿಸಲಾಗಿದ್ದು, ಈ ಯೋಜನೆ ಅನುಷ್ಠಾನಕ್ಕ ಪ್ರತಿ ವರ್ಷ ರೂ. ೩ ಕೋಟಿಗಳಂತೆ, ೫ ವರ್ಷಗಳಿಗ ರೂ. ೧೫ ಕೋಟಿ ರೂ. ವೆಚ್ಚವಾಗಲಿದ್ದು, ಈ ಯೋಜನೆಯ ಖರೀದಿ ಪ್ರಕ್ರಿಯೆಯನ್ನು ಕ್ಷೇತ್ರ ಮಟ್ಟದ ನಿರ್ದೇಶಕರು, ಒಕ್ಕೂಟದ ಅಧಿಕಾರಿಗಳು ಮತ್ತು ಪ್ರಾಥಮಿಕ ಸಹಕಾರ ಸಂಘದ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯು ಒಕ್ಕೂಟದ ಷರತ್ತು ಮತ್ತು ಪಾರದರ್ಶಕವಾಗಿ ಹೊರರಾಜ್ಯ ಅಥವಾ ಹೊರ ಜಿಲ್ಲಗಳಿಂದ ಖರೀದಿಸುವ ಹೈನುಗಾರಿಕೆ ಪ್ರೋತ್ಸಾಹ ಧನ ನೀಡಲಾಗುವುದು ಎಂದು ತಿಳಿಸಿದರು.
ಕೋಲಾರ ಜಿಲ್ಲಾ ಸಹಕಾರ ಹಾಲು ಒಕ್ಕೂಟ ವ್ಯಾಪ್ತಿಯಲ್ಲಿ ೧೦ ಲಕ್ಷ ಲೀಟರ್ ಹಾಲು ಶೇಖರಣ ಗುರಿಯನ್ನು ಹೊಂದಿದ್ದು, ಈ ನಿಟ್ಟಿನಲ್ಲಿ ಕಳದ ಎರಡು ವರ್ಷಗಳಲ್ಲಿ ೭೦ ನೂತನ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಸ್ಥಾಪಿಸಲಾಗಿದೆ.
ಎಲ್ಲಾ ಕಂದಾಯ ಗ್ರಾಮಗಳಲ್ಲೂ ಸಹಕಾರ ಸಂಘಗಳನ್ನು ಸ್ಥಾಪಿಸಲು ಕ್ರಮ ವಹಿಸಲು ಅಧಿಕಾರಿಗಳಿಗ ಸೂಚಿಸಲಾಗಿದೆ ಎಂದರು.
ಗೋದಾಮಿನಲ್ಲಿರುವ ಸೂಪರ್ ನೇಪಿಯರ್ ಹುಲ್ಲಿನ ಕಡ್ಡಿಗಳನ್ನು ೧೦,೦೦೦ ಕಡ್ಡಿಗಳಿಗ ೫೦೦ ಅಂತ ಪಾವತಿಸಿಕೊಂಡು ಹಾಲು ಉತ್ಪಾದಕರಿಗ ವಿತರಿಸಲಾಗುತ್ತಿದ್ದು ಈ ಸಾಲಿಗ ಉಚಿತವಾಗಿ ವಿತರಿಸಲು ಆಡಳಿತ ಮಂಡಳಿ ತೀರ್ಮ?ನ ಕೈಗೊಳ್ಳಲಾಗಿದೆ.
ಮೊಟ್ಟ ಮೊದಲ ಬಾರಿಗ ಬೇಸಿಗ ಕಾಲದಲ್ಲಿ ಅಂದರ ಜನವರಿಯಿಂದ ಏಪ್ರಿಲ್ ವರಗ ರೂ.೧,೦೦೦ ಎಕರಗ ಮಾತ್ರ ಹಸಿರುಮೇವು ಬಳಯುವ ರತರಿಗ ಪ್ರತಿ ಎಕರಗ ರೂ.೩,೦೦೦ ಪ್ರೋತ್ಸಾಹ ಧನ ನೀಡಲಾಗುತ್ತಿದ್ದು ಈಗ ಯಾವುದೇ ಮಿತಿ ಇಲ್ಲದೆ ಮೇವು ಬಳಯುವ ಎಲ್ಲಾ ಹಾಲು ಉತ್ಪಾದಕರಿಗೂ ಪ್ರತಿ ಎಕರಗ ೫ ಸಾವಿರ ರಂತೆ ಬರಗಾಲ ಮುಗಿಯುವವರಗೂ ಪ್ರೋತ್ಸಾಹ ಧನ ನೀಡಲು ಕ್ರಮ ಕೈಗೊಳ್ಳಲಾಗಿದೆ.
ಸಹಾಯಧನ ನೀಡಲಾಗುತ್ತಿದ್ದು ಈಗ ಬರ ಪರಿಸ್ಥಿತಿಯಲ್ಲಿ ಸಂಪೂರ್ಣವಾಗಿ ನಿವಾರಣ ಯಾಗುವವರಗೂ ಜಿಲ್ಲ ಎಲ್ಲಾ ಹೈನುಗಾರಿಗ ಎಲ್ಲಾ ರೀತಿಯ ಮೇವು ಬಜಗಳನ್ನು ಒಂದು ಎಕರಗ ೬ ಕೆ.ಜಿಯಂತೆ ಉಚಿತವಾಗಿ ನೀಡಲು ಮುಂದಾಗಿದ್ದು, ಜಿಲ್ಲಯ ಎಲ್ಲಾ ಹೈನೋಧ್‌ಯಮ ರತರು ಕೋಮುಲ್ ಒಕ್ಕೂಟದಿಂದ ಆಡಳಿತ ಮಂಡಳಿಯಿಂದ ತೆಗದುಕೊಂಡ ತೀರ್ಮಾನವನ್ನು, ರತರು ಸದುಪಯೋಗಪಡಿಸಿಕೊಳ್ಳುವ ಕಡೆಗ ಮುಂದಾಗಬೇಕು ಎಂದರು.
ರಾಜ್ಯ ಸರಕಾರದ ಸಂಪುಟ ವಿಸ್ತರಣಯ ಬಳಿಕ, ಮಾಲೂರಿನಲ್ಲಿ ಮುಖ್ಯಮಂತ್ರಿ ಕಾರ್ಯಕ್ರಮ ನಡೆಸುವ ಕುರಿತು ಕೋಮುಲ್ ಅಧ್ಯಕ್ಷರು ಮಾಹಿತಿ ನೀಡಿದ್ದು, ಮುಂದಿನ ತಿಂಗಳು ಕೋಲಾರದಲ್ಲಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರಿಂದ ಎಂವಿಕೆ ಗೋಲ್ಡನ್ ಡರಿ ಮತ್ತು ಸೋಲಾರ್ ಪ್ಲಾಂಟ್ ಉದ್ಘಾಟನೆ ನಡೆಯಲಿದೆ ಎಂದು ತಿಳಿಸಿದ್ದಾರ. ಇದೇ ವೇಳ ಕೋಮುಲ್ ನೇಮಕಾತಿ ಹಗರಣದ ಆರೋಪಗಳನ್ನು ತಳ್ಳಿ ಹಾಕಿದ ಅವರು, ಯಾರು ಬೇಕಾದರೂ ಆರೋಪ ಮಾಡಬಹುದು, ಕೋರ್ಟ್‌ಗ ಹೋಗಬಹುದು. ಆದರ ನಮ್ಮ ನೇಮಕಾತಿ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿದೆ ಎಂದು ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಕೋಮುಲ್ ನಿರ್ದೇಶಕರಾದ ಕೆ ಕೆ ಮಂಜುನಾಥ್, ಶ್ರೀನಿವಾಸ್, ಕೋಮುಲ್ ವ್ಯವಸ್ಥಾಪಕ ನಿರ್ದೇಶಕ ಗೋಪಾಲಮೂರ್ತಿ ಇದ್ದರು.

































