Home ಜಿಲ್ಲೆ ಬೆಂಗಳೂರು ಶ್ರೀ ದ್ರೌಪತಮ್ಮ ಧರ್ಮರಾಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ

ಶ್ರೀ ದ್ರೌಪತಮ್ಮ ಧರ್ಮರಾಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ

ವಿಜಯಪುರ.ಆ.೧೩: ಪಟ್ಟಣದಲ್ಲಿ ಅನಾದಿಕಾಲದಿಂದಲೂ ನೆಲೆಸಿರುವ ಇತಿಹಾಸ ಪ್ರಸಿದ್ಧ ಶ್ರೀ ದ್ರೌಪತಮ್ಮ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಭೀಮನ ಅಮಾವಾಸ್ಯೆ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು ಹಾಗೂ ಭಕ್ತಿ ಸಭೆಯನ್ನು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಆಯೋಜಿಸಲಾಗಿತ್ತು.


ದೇವಾಲಯದ ಅಧ್ಯಕ್ಷ ಕೆ. ವಿ. ಮುನಿರಾಜ್ ಅವರು ಪೂಜಾ ಕಾರ್ಯಕ್ರಮದ ನೇತೃತ್ವ ವಹಿಸಿ, ವ್ರತದ ವಿಶೇಷತೆ ಹಾಗೂ ಮಹತ್ವದ ಕುರಿತು ಬೆಳಕು ಚೆಲ್ಲಿದರು.


ಭೀಮನ ಅಮಾವಾಸ್ಯೆ ವ್ರತವನ್ನು ಆಯಾ ಪ್ರದೇಶದ ಸಂಪ್ರದಾಯಕ್ಕೆ ಅನುಗುಣವಾಗಿ ವಿಭಿನ್ನ ಹೆಸರುಗಳಿಂದ ಕರೆಯಲಾಗುತ್ತದೆ. ಉತ್ತರ ಕರ್ನಾಟಕದಲ್ಲಿ ದಿವಸಿ ಅಮಾವಾಸ್ಯೆ ಹಾಗೂ ಕೋಡಿ ಅಮಾವಾಸ್ಯೆ ಎಂದು, ದಕ್ಷಿಣ ಕನ್ನಡದಲ್ಲಿ ಆಟಿ ಅಮಾವಾಸ್ಯೆ ಎಂದು ಮತ್ತು ಮೈಸೂರು-ಬೆಂಗಳೂರು ಭಾಗಗಳಲ್ಲಿ ಪತಿ ಸಂಜೀವಿನಿ ವ್ರತ ಎಂದೂ ಆಚರಿಸಲಾಗುತ್ತದೆ.


ಕಾರ್ಯಕ್ರಮದ ಭಕ್ತಿ ಸಭೆಯ ಪೂಜಾ ಸೇವೆಯನ್ನು ದಿ.ಆಂಡ್ಯಪ್ಪ ಮಕ್ಕಳು ಹಾಗೂ ಮುನಿ ಆಂಡ್ಯಪ್ಪ ಮತ್ತು ಮಕ್ಕಳು, ಮುನಿ ರಾಮಪ್ಪ ಮತ್ತು ಮಕ್ಕಳು ವಹಿಸಿಕೊಂಡಿದ್ದರು.


ಸಮಾರಂಭದಲ್ಲಿ ದೇವಾಲಯದ ಯಜಮಾನರಾದ ಸಿ. ನಾರಾಯಣಪ್ಪ, ಗಣಾಚಾರಿ ರವಿ, ಗೌಡರಾದ ರಮೇಶ್, ನಂಜುಂಡಪ್ಪ, ಕೆ. ಎಮ್. ಮಧು, ಪುರಸಭಾ ಸದಸ್ಯ ನಂದಕುಮಾರ್, ಎಂ. ರಾಜಣ್ಣ, ಮಂಜುನಾಥ್, ಎಂ. ಡಿ. ವಿಜಯಕುಮಾರ್, ಪಿಸಿಕೆ ವಿಶ್ವನಾಥ್, ಜೆ. ಆರ್. ಮುನಿ, ವೀರಣ್ಣ, ಸೌದೆ ವ್ಯಾಪಾರಿ ಆಂಜನಪ್ಪ, ಕನಕರಾಜು, ಪುರಸಭೆ ಮಾಜಿ ಸದಸ್ಯರಾದ ಜಿ. ಎಂ. ಚಂದ್ರು, ಮುನಿ ಚಿನ್ನಪ್ಪ, ವಿ. ಎಂ. ನಾಗರಾಜು, ಆರ್. ಎಂ. ಸಿ. ಟಿ. ಮಂಜು ಹಾಗೂ ಭಕ್ತ ಮಂಡಳಿಯ ಶ್ರೀನಿವಾಸ್ ಬಿರ್ಲಾ, ನಾಗರಾಜು ಸೇರಿದಂತೆ ಕುಲಸ್ಥರು ಮತ್ತು ವೀರ ಕುಮಾರ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.