Home ಜಿಲ್ಲೆ ಬೆಂಗಳೂರು ಉತ್ತಮ ಮಳೆ,ಬೆಳೆಗೆ, ಬರನೀಗಲು ವಿಶೇಷ ಪ್ರಾರ್ಥನೆ

ಉತ್ತಮ ಮಳೆ,ಬೆಳೆಗೆ, ಬರನೀಗಲು ವಿಶೇಷ ಪ್ರಾರ್ಥನೆ

ಕೋಲಾರ,ಜು,೨೦- ತಾಲ್ಲೂಕಿನ ಮುದುವಾಡಿ ಗ್ರಾಮದ ಅರಿಕೇಶ್ವರ ದೇವಾಲಯಲ್ಲಿ ಲೋಕ ಕಲ್ಯಾಣಾರ್ಥವಾಗಿ ಹಾಗೂ ಮಳೆಗೆ ಪ್ರಾರ್ಥಿಸಿ ಗಿರಿಜಾ ಕಲ್ಯಾಣವನ್ನು ಆಯೋಜಿಸಲಾಗಿತ್ತು. ಗ್ರಾಮದ ದಿವಂಗತ ಡಿ.ನಾರಾಯಣರಾವ್ ಕುಟುಂಬದವರು, ರಮೇಶ್,ಹರೀಶ್ ಕುಟುಂಬದವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.


ಪೂಜೆಯನ್ನು ಜಯಲಕ್ಷ್ಮಿ ಫಣಿಕುಮಾರ್ ಕುಟುಂಬದವರು ನೆರವೇರಿಸಿಕೊಟ್ಟಿದ್ದು, ಈ ಬಾರಿ ಮಳೆ ಕುಸಿತ ಹಾಗೂ ಬರದ ಆತಂಕ ಎದುರಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಗೆ ಒಳ್ಳೆಯ ಮಳೆ,ಬೆಳೆ ಬರಲಿ ಎಂದು ಈ ಕಲ್ಯಾಣೋತ್ಸವವನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.


ಕಾರ್ಯಕ್ರಮದ ಅಂಗವಾಗಿ ಮುಂಜಾನೆ ಮೂಲ ಶಿವಲಿಂಗಕ್ಕೆ ಅಭಿಷೇಕದೊಂದಿಗೆ ಕಾರ್ಯಕ್ರಮಗಳು ಆರಂಭಗೊಂಡಿದ್ದು, ನಂತರ ಗಿರಿಜಾ ಕಲ್ಯಾಣೋತ್ಸವವನ್ನು ವೇದವಿದ್ವಾನ್ ಆಗಮಿಕರಾದ ವಿನಯ್ ದೀಕ್ಷಿತ್, ಮಂಜುನಾಥ್, ಸತೀಶ್, ಸತ್ಯನಾರಾಯಣ ಬಾಬು ಸಂಪ್ರದಾಯಬದ್ದವಾಗಿ ನಡೆಸಿಕೊಟ್ಟರು.


ಇದಾದ ನಂತರ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ ನಡೆದಿದ್ದು, ಪ್ರಾಕಾರೋತ್ಸವದಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು. ಮುದುವಾಡಿ ಗ್ರಾಮ ಮಾತ್ರವಲ್ಲದೇ ದೂರದ ಅನೇಕ ಕಡೆಗಳಿಂದ ಭಕ್ತರು ಪೂಜೆಯಲ್ಲಿ ಪಾಲ್ಗೊಂಡಿದ್ದರು.


ಪೂಜೆಯಲ್ಲಿ ಸುಗುಣಾ ಶ್ರೀನಿವಾಸಮೂರ್ತಿ,ಸುಧಾ ವರದರಾಜ್,ಮೀನಾಕುಮಾರಿ ನಾಗರಾಜ್,ಲಕ್ಷ್ಮೀ ಶ್ರೀನಿವಾಸಲು, ಕಾಂತ ಸುರೇಂದ್ರನಾಥ್,ಲಲಿತಾ ಸತ್ಯನಾರಾಯಣಬಾಬು, ಕಲ್ಕೆರೆ ಮುರಳಿ,ಚಂದ್ರು ಕುಟುಂಬದವರು, ಮುದುವಾಡಿಯ ರಮೇಶ್,ಹರೀಶ್ ಕುಟುಂಬದವರು, ಪುರುಷೋತ್ತಮ್,ಯಶ್ವಂತ್ ಕುಟುಂಬದವರು, ಸತ್ಯಲಕ್ಷ್ಮೀ ಕಿರಣ್, ರವಿ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.