
ಕಲಬುರಗಿ,ಫೆ.28:ಕಲಬುರಗಿ ಅಂಚೆ ವಿಭಾಗದಿಂದ ಕಲಬುರಗಿ ಅಂಚೆ ವಿಭಾಗಗಳಲ್ಲಿ ಗುರುವಾರ ವಿಶೇಷ ಅಂಚೆ ಜೀವ ವಿಮಾ ಮೇಳವನ್ನು ಆಯೋಜಿಸಲಾಗಿತ್ತು.
ಈ ಮೇಳದಲ್ಲಿ ಕಲಬುರಗಿ ಜಿಲ್ಲೆಯಾದ್ಯಂತ ರಾಜ್ಯ ಸರ್ಕಾರಿ ನೌಕರರು, ಗ್ರಾಮೀಣ ಭಾಗದ ಅರೆ ಸರ್ಕಾರಿ ನೌಕರರು, ಆಟೋ ಚಾಲಕರು, ಸಣ್ಣ ಉದ್ಯಮಿಗಳು, ವ್ಯಾಪಾರಸ್ಥರು ಸೇರಿದಂತೆ ವಿವಿಧ ವರ್ಗದ 356 ಜನರು ಭಾಗವಹಿಸಿ ಒಟ್ಟು 1.53 ಕೋಟಿ ರೂ. ಪ್ರೀಮಿಯಂ ಸಂಗ್ರಹಿಸುವ ಮೂಲಕ ಕೇಂದ್ರ ಸರ್ಕಾರದ ಯೋಜನೆಯ ಲಾಭ ಪಡೆದಿದ್ದಾರೆ.
ಅಂಚೆ ಜೀವ ವಿಮೆ ಯೋಜನೆಯು ಜನರ ಆರ್ಥಿಕ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಕಡಿಮೆ ಪ್ರೀಮಿಯಂನಲ್ಲಿ ಹೆಚ್ಚಿನ ಬೋನಸ್ ನೀಡುವ ಸರಳ ಹಾಗೂ ವಿಶ್ವಾಸಾರ್ಹ ಯೋಜನೆಯಾಗಿದೆ. ಕಲಬುರಗಿ ಜಿಲ್ಲೆಯ ಇನ್ನಷ್ಟು ಜನರಿಗೆ ಈ ಯೋಜನೆಯ ಲಾಭವನ್ನು ತಲುಪಿಸುವ ಉದ್ದೇಶದಿಂದ, ಕಲಬುರಗಿ ಅಂಚೆ ವಿಭಾಗದ ಅಂಚೆ ಅಧೀಕ್ಷಕರಾದ ರವೀಂದ್ರ ಬಿ.ಎಲ್. ಅವರ ಮಾರ್ಗದರ್ಶನದಲ್ಲಿ ದಿನಾಂಕ: 11-03-2026 ರಂದು ಮತ್ತೊಮ್ಮೆ ಕಲಬುರಗಿ ಅಂಚೆ ವಿಭಾಗಗಳಲ್ಲಿ ಅಂಚೆ ಜೀವ ವಿಮಾ ಮೇಳವನ್ನು ಆಯೋಜಿಸಲಾಗಿದೆ.
ಸಾರ್ವಜನಿಕರು ಕೇಂದ್ರ ಸರ್ಕಾರದಿಂದ ಅನುಮೋದಿತ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಯೋಜನೆ ಕುರಿತು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಂಚೆ ಕಚೇರಿಯನ್ನು ಅಥವಾ ಡಿ.ಓ. ಪಿ.ಎಲ್.ಐ. (ಆಔ PಐI) ಇವರ ಮೊಬೈಲ್ ಸಂಖ್ಯೆ: 7353351111 ಗೆ ಸಂಪರ್ಕಿಸಲು ಕೋರಲಾಗಿದೆ.

























