ಶಿವಶರಣ ಹರಳಯ್ಯ ಮತ್ತು ಕಲ್ಯಾಣಮ್ಮ ಕುರಿತು ವಿಶೇಷ ಉಪನ್ಯಾಸ

ಬೀದರ:ಅ.೨೩:ನಗರದ ಅತಿವಾಳೆ ಸಾಂಸ್ಕೃತಿಕ ಭವನದಲ್ಲಿ ಕರ್ನಾಟಕ ವಚನ ಸಾಹಿತ್ಯ ಪರಿಷತ್ ಬೀದರ್ ಜಿಲ್ಲಾ ಘಟಕದ ವತಿಯಿಂದ “ಶಿವಶರಣ ಹರಳಯ್ಯ ಹಾಗೂ ಕಲ್ಯಾಣಮ್ಮ” ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶರಣ ಸಾಹಿತ್ಯ ಚಿಂತಕರಾದ ಸುಮಂತ ಕಟ್ಟಿಮಣಿ ಬಸವಗುರುವಿನ ಪೂಜೆ ಹಾಗೂ ಬಸವಜ್ಯೋತಿ ಪ್ರಜ್ವಲನೆ ಮೂಲಕ ನೆರವೇರಿಸಿದರು. ಅವರು ಮಾತನಾಡುತ್ತಾ, ಬಸವಣ್ಣನವರು ಸಮಾನತೆ, ಸಹೋದರತ್ವ ಹಾಗೂ ಮಾನವೀಯ ಪ್ರೇಮದ ಆಧಾರದ ಮೇಲೆ ಲಿಂಗಾಯತ ಧರ್ಮವನ್ನು ಸ್ಥಾಪಿಸಿದರು. ಹರಳಯ್ಯ ಮತ್ತು ಕಲ್ಯಾಣಮ್ಮರ ತ್ಯಾಗವು ಕಲ್ಯಾಣ ಕ್ರಾಂತಿಯ ಪ್ರಮುಖ ಪ್ರೇರಕ ಘಟನೆಯಾಗಿದ್ದು, ಬಸವಾದಿ ಶರಣರ ವಚನಗಳು ಸಂವಿಧಾನದ ತಾತ್ತ್ವಿಕ ಆಧಾರವಾಗಿವೆ ಎಂದು ಹೇಳಿದರು.
ಡಾ. ಬಸವರಾಜ ಬಲ್ಲೂರ, ಕರ್ನಾಟಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸ ಮಂಡಿಸಿ “೧೨ನೇ ಶತಮಾನದಲ್ಲಿ ಬಸವಾದಿ ಶರಣರ ವೈಚಾರಿಕ ಕ್ರಾಂತಿಯು ಪ್ರಜಾಪ್ರಭುತ್ವದ ಬೀಜ ಬಿತ್ತಿದ ಕ್ರಾಂತಿಯಾಗಿತ್ತು” ಎಂದರು. ಅವರು ಹರಳಯ್ಯ ಮತ್ತು ಕಲ್ಯಾಣಮ್ಮರ ಚಮ್ಮಾವುಗೆ ಘಟನೆಯು ಮಾನವೀಯತೆ ಮತ್ತು ಸಮಾನತೆಯ ಶಾಶ್ವತ ಸಂಕೇತವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಚನ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷೆ ಸುನಿತಾ ದಾಡಗೆ ವಹಿಸಿ ಮಾತನಾಡುತ್ತಾ, “ವಚನ ಚಿಂತನೆ ಮನೆಮನೆಗೂ ತಲುಪಬೇಕು; ಮಕ್ಕಳಲ್ಲಿ ಶರಣ ಸಂಸ್ಕೃತಿ, ಪ್ರೀತಿ, ಗೌರವ ಮತ್ತು ಮಾನವೀಯ ಮೌಲ್ಯ ಬೆಳೆಸುವ ಪ್ರಯತ್ನ ನಾವು ಮಾಡಬೇಕು” ಎಂದು ಹೇಳಿದರು.
ಶೈಲಜಾ ಕಲ್ಯಾಣ ರಾವ ಚಳ್ಕಾಪುರೆ ಯವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಬಸವ ತತ್ವ ನಿಷ್ಠರು ತಮ್ಮ ಮನೆಯಲ್ಲಿ ಬಸವಣ್ಣನವರ ಭಾವಚಿತ್ರ ಕಡ್ಡಾಯ ಇರಬೇಕು, ಗುರುಬಸವ ಪ್ರಾರ್ಥನೆ ಮಾಡುವಂತಿರಬೇಕು, ತಂದೆ ತಾಯಿ ಮತ್ತು ಸಾಮೂಹಿಕ ಪ್ರಸಾದ ಸೇವನೆ ಮಾಡಬೇಕು, ಮನೆಯ ಕಾರ್ಯಕ್ರಮಗಳಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಬೇಕು, ತಂದೆ ತಾಯಿಯವರು ಮಕ್ಕಳಲ್ಲಿ ಬಸವ ಸಂಸ್ಕೃತಿ ಮತ್ತು ಉತ್ತಮ ಸಂಸ್ಕಾರ ಕೊಡುವುದರಿಂದ ಕುಟುಂಬ ಮತ್ತು ಸಮಾಜದ ವ್ಯವಸ್ಥೆ ಚೆನ್ನಾಗಿರುತ್ತದೆ, ಈ ಹಿನ್ನೆಲೆಯಲ್ಲಿ ವಚನ ಸಾಹಿತ್ಯ ಪರಿಷತ್ತು ಮನೆ ಮನೆಗೆ ಚಿಂತನಾಗೋಷ್ಠಿ ಆಯೋಜನೆ ಮಾಡುವ ಉದ್ದೇಶ ಹೊಂದಿದೆ, ಎಂದು ತಿಳಿಸಿದರು.

ಅಕ್ಕಮಹಾದೇವಿ ಮಹಿಳಾ ಸಾಂಸ್ಕೃತಿಕ ಸಂಘದ ಸದಸ್ಯೆಯರಾದ ಕಸ್ತೂರಿಬಾಯಿ ಬಿರಾದಾರ, ಶಕುಂತಲಾ ಮಲ್ಕಪ್ಪನೋರ್, ಮೀನಾಕ್ಷಿ ಪಾಟೀಲ್, ಸವಿತಾ ಗಂಧಿಗುಡೆ, ರುಕ್ಮಿಣಿ ಕೋಟೆ ಹಾಗೂ ಲಕ್ಷ್ಮೀ ಸಿರ್ಸಿ ವಚನಗಾನ ನಡೆಸಿದರು.
ಕಾರ್ಯಕ್ರಮವನ್ನು ಉಮಾಕಾಂತ ಮೀಸೆ ನಿರೂಪಿಸಿದ್ದು, ಬಸವರಾಜ ಮೂಲಗೆ ಸ್ವಾಗತ ಕೋರಿದರು. ಶರಣ-ಶರಣಿಯರು ಹಾಗೂ ಸಾಹಿತ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.