
ಕಲಬುರಗಿ,ಅ.29: ನಗರದ ಶಾರದಾ ಶಿಕ್ಷಣ ಸಂಸ್ಥೆಯ ಆರಾಧನಾ ಸ್ವತಂತ್ರ ಪದವಿ ಪೂರ್ವ ಕಾಲೇಜು, ಕಲಾ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾರದಾ ಶಿಕ್ಷಣ ಸಂಸ್ಥೆ ನಿರ್ದೇಶಕ ರಾಜಕುಮಾರ ಗಾಂಗಜಿ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜೇವರಗಿ ಕಾಲೋನಿ ಸರ್ಕಾರಿ ಮಹಿಳಾ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಪ್ರಕಾಶ್ ಮೋರ್ಗೆ ಅವರು ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆಗಳಲ್ಲಿ ಭಾಗಿಯಾದರೆ, ವಿದ್ಯಾರ್ಥಿಗಳ ಜೀವನದ ಸಾಧನೆಗೆ ಸರಳವಾಗುತ್ತದೆ. ಮೊಬೈಲ್ ಉಪಯೋಗ ದುರುಪಯೋಗ ಎರಡು ಇದೆ ಇದರ ಆಯ್ಕೆ ನಿಮ್ಮದು, ಜೀವನದಲ್ಲಿ ಶಾರ್ಟಕಟ್ ಮೆಥೆಡ್ ಇಲ್ಲ.ಅಂಕಗಳ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ಮಾಡಿಕೊಳ್ಳಿ ಒಳ್ಳೆಯ ಉನ್ನತ ಸ್ಥಾನದ ಉದ್ಯೋಗ ಪಡೆಯಿರಿ. ಧೈರ್ಯ ಆತ್ಮವಿಶ್ವಾಸ ಒಳ್ಳೆಯ ನಡತೆ ಕಲಿಯಲು ಎನ್ ಎಸ್ ಎಸ್ ಸಹಾಯಕವಾಗಿದೆ ಎಂದರು.
ಜೇವರಗಿ ಕಾಲೋನಿ ಸರ್ಕಾರಿ ಮಹಿಳಾ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಶಶಿಕಾಂತ್ ಪಾಟೀಲ್ ಮತ್ತು ವ್ಯವಹಾರ ಆಡಳಿತ ವಿಭಾಗದ ಡಾ. ಪದ್ಮಾವತಿ ಅವರು ಮಾತನಾಡಿ
ಇಂದಿನ ಯುಗದಲ್ಲಿ ಖಾಸಗಿ ಸರಕಾರಿ ವಲಯಗಳಲ್ಲಿ ಉದ್ಯೋಗ ಪಡೆಯಲು ಉತ್ತಮ ಇಂಗ್ಲಿಷ್ ಭಾಷೆ ಮಾತನಾಡಲು ಬರಬೇಕು ನಮ್ಮ ಈ ಉತ್ತರ ಕರ್ನಾಟಕ ಭಾಗದಲ್ಲಿ ಜ್ಞಾನದ ಕೊರತೆ ಇಲ್ಲ ಆದರೆ ಸಂವಹನದ ಕೊರತೆ ಇದೆ ಅದಕ್ಕೆ ನಾವು ಇಂಗ್ಲೀಷ್ ನಲ್ಲಿ ಮಾತನಾಡುವ ಕಲೆಯನ್ನು ಕಲಿಯಬೇಕು. ಜೊತೆಗೆ ಗಳಿಕೆ ಇರಬೇಕು ಬಡವರಾಗಿ ಹುಟ್ಟಿದ್ದೀರಿ ಆದರೆ ಬಡವರಾಗಿ ಸಾಯಬಾರದು. ಮೊಬೈಲ್ ಬಳಕೆ ಹೇಗಿರಬೇಕೆಂದರೆ ಅದು ಒಂದು ರೀತಿಯ ಸಂಪನ್ಮೂಲ ಅದರ ಬಳಕೆ ಸದ್ಬಳಕೆ ಆಗಬೇಕು ಹೊರತು ದುರ್ಬಳಕೆಯಾಗಬಾರದು. ನಮ್ಮ ಶರೀರದ ಆಂತರಿಕ ಮತ್ತು ಬಾಹ್ಯ ಸೌಂದರ್ಯ ಎರಡು ಮುಖ್ಯ ಆರೋಗ್ಯವಂತರಾಗಿರಲು ದಿನಾಲು ಬೆಳಗ್ಗೆ ಸಮಯದಲ್ಲಿ ಉತ್ತಮ ಆಹಾರವನ್ನು ಸೇವಿಸಬೇಕು. ದೇಹ ಮನಸ್ಸು ಒಂದಕ್ಕೊಂದು ಸಂಬಂಧ ಹೊಂದಿವೆ. ಕನಸು ದೊಡ್ಡದಿರಲಿ ಅದನ್ನು ಸಾಕಾರಗೊಳಿಸಲು ನಿರಂತರ ಪ್ರಯತ್ನ ವಿರಲಿ ಎಂದು ಹೇಳಿದರು.
ವ್ಯವಹಾರ ಅಧ್ಯಯನ ವಿಭಾಗದ ಉಪನ್ಯಾಸಕ ಅಮರೇಶ್ ಕರಬಸ್ಟಿ,ಕನ್ನಡ ಉಪನ್ಯಾಸಕರಾದ ರೋಹಿಣಿ ಸುಗೂರು ಅವರು ಅತಿಥಿಗಳ ಪರಿಚಯವನ್ನು ಮಾಡಿಕೊಟ್ಟರು. ಎನ್ ಎಸ್ ಎಸ್ ಅಧಿಕಾರಿ ಡಾ. ಅಂಬಾರಾಯ ಹಾಗರಗಿ,ಆಡಳಿತ ಅಧಿಕಾರಿ ಭೀಮರಾವ್ ಪಾಟೀಲ್ , ವಾಣಿಜ್ಯ ವಿಭಾಗದ ಸಂಯೋಜಕರಾದ ಗಾಯತ್ರಿ ಪಾಟೀಲ ,ಕಲಾವಿಭಾಗದ ಸಂಯೋಕಜರಾದ ಕಾಶಿನಾಥ್ ಪಾಟೀಲ್ , ಗಣಕ ವಿಜ್ಞಾನ ಉಪನ್ಯಾಸಕರಾದ ಸಿದ್ದರಾಮ್ ಬಾಳಿ, ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಚಾಲನೆಯನ್ನು ಕಂಪ್ಯೂಟರ್ ವಿಜ್ಞಾನ ಉಪನ್ಯಾಸಕರಾದ ಐಶ್ವರ್ಯ ನಡೆಸಿಕೊಟ್ಟರು. ಸ್ವಾಗತವನ್ನು ಅರ್ಥಶಾಸ್ತ್ರದ ಉಪನ್ಯಾಸಕಿಯವರಾದ ಕೃತಿಕಾ ಚಾರಿ ನಡೆಸಿಕೊಟ್ಟರು. ವ್ಯವಹಾರ ಅಧ್ಯಯನದ ಉಪನ್ಯಾಸಕಿಯವರಾದ ಅಶ್ವಿನಿ ಪಾಟೀಲ್ ವಂದಿಸಿದರು.
























