
ಮಾಲೂರು, ಫ.೨೦- ತಾಲ್ಲೂಕಿನ ಮಡಿವಾಳ ಗ್ರಾ.ಪಂ.ನ ಎಂ.ಸಿ.ಹಳ್ಳಿ ಸರ್ಕಾರಿ ಶಾಲೆಯಲ್ಲಿ ವಿಶೇಷ ದಾಖಲಾತಿ ಆಂದೋಲವನ್ನು ಹಮ್ಮಿಕೊಳ್ಳಲಾಗಿತ್ತು.
ಮುಖ್ಯಶಿಕ್ಷಕಿ ಜಲಜಾಕ್ಷಿ ಮಾತನಾಡಿ ೫ ವರ್ಷ ಮೇಲ್ಪಟ್ಟ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು, ೬-೧೪ ವರ್ಷದೊಳಗಿನ ಮಕ್ಕಳು ಶಾಲೆ ಬಿಟ್ಟಿದ್ದರೆ ಅಂತಹ ಮಕ್ಕಳನ್ನು ಶಾಲೆಗೆ ಸೇರಿಸುವಂತೆ, ಹಾಗೂ ವಿಶೇಷ ದಾಖಲಾತಿಯನ್ನು ಹಮ್ಮಿಕೊಂಡಿದ್ದು, ನಮ್ಮ ಶಾಲೆ ನಮ್ಮೂರ ಶಾಲೆ ನಮ್ಮೂರ ಮಕ್ಕಳು ಎಂಬ ವಿಶೇಷ ದಾಖಲಾತಿ ಆಂದೋಲನವನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಾಮಸ್ಥರು ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವಂತೆ ಚೊಕ್ಕಂಡಹಳ್ಳಿ ಮಡಿವಾಳ ಗ್ರಾಮಗಳಲ್ಲಿ ಜಾತಾ ನಡೆಸಿದರು. ಸರ್ಕಾರಿ ಶಾಲೆಯಲ್ಲಿ ಆಂಗ್ಲಭಾಷೆ ಮಾಧ್ಯಮ ಶಿಕ್ಷಣದ ೬ ತರಗತಿಗೆ ದಾಖಲಾತಿ ಮಾಡಿಕೊಳ್ಳಬಹುದು ಎಂದರು.
ಮುಖ್ಯಶಿಕ್ಷಕಿ ಜಲಜಾಕ್ಷಿ, ಶಿಕ್ಷಕರಾದ ಭಾಗ್ಯಲಕ್ಷ್ಮೀ, ಕೃಷ್ಣವೇಣಿ, ಗೀತಾ, ಸುಜಾತ, ಭಾರತಿ, ಮುಸಿನ ಬಾನು, ಶೋಭ, ಹಾಜರಿದ್ದರು.



























