ಕೈಗಾರಿಕೆ ಸ್ಥಾಪನೆಗೆ ಜಾಗ: ಕರವೇ ಸ್ವಾಗತ

ಕೋಲಾರ,ಜೂ. ೧- ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಯದರೂರು ಗ್ರಾಮದ ಸಮೀಪ ಕೈಗಾರಿಕೆಗಳ ಸ್ಥಾಪನೆಗೆ ಜಾಗ ಗುರುತಿಸಿರುವುದು ಸ್ವಾಗತರ್ಹ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಮೇಡಿಹಾಳ ರಾಘವೇಂದ್ರ ಹೇಳಿದ್ದಾರೆ.


ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಕೈಗಾರಿಕೆಗಳು ಈಗಾಗಲೇ ಜಿಲ್ಲೆಯಲ್ಲಿ ಸಾಕಷ್ಟು ಸ್ಥಾಪನೆಯಾಗಿದ್ದು, ಲಕ್ಷಾಂತರ ಮಂದಿಗೆ ಉದ್ಯೋಗ ಕಲ್ಪಿಸಿದ್ದಾರೆ. ಇದೇ ರೀತಿ ಯದರೂರು ಬಳಿ ಕೈಗಾರಿಕೆಗಳಿಗೆ ೧೨೦೦ ಕೆರೆಯನ್ನು ಕೆಐಡಿಬಿ ಅಧಿಕಾರಿಗಳು ಗುರಿತಿಸಿದ್ದು, ರೈತರು ಜಾಗ ಕಲ್ಪಿಸಬೇಕು ಎಂದು ಮನವಿ ಮಾಡಿದರು.


ಕೈಗಾರಿಕೆಗಳಿಗಾಗಿ ಭೂಸ್ವಾಧಿನ ಪಡಿಸಿಕೊಳ್ಳಲು ಒಂದು ಎಕರೆಗೆ ಸುಮಾರು ೨ ಕೋಟಿ ರೂ. ದರ ನಿಗಧಿ ಮಾಡಬೇಕು. ಜತೆಗೆ ಜಮೀನುಗಳಲ್ಲಿ ಬೆಳೆದಿರುವ ಬೆಳೆಗಳಿಗೂ ಪರಿಹಾರ ನೀಡಬೇಕು. ಭೂಮಿ ನೀಡುವ ರೈತರ ಮಕ್ಕಳಿಗೆ ಉನ್ನತ ಹುದ್ದೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.


ನರಾಸಪುರ, ವೇಮಗಲ್, ಮಾಲೂರು ಭಾಗದಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಿರುವುದರಿಂದ ಸ್ಥಳಿಯ ಅಭಿವದ್ಧಿಗೆ ಬಹಷ್ಟು ಸಹಕಾರಿಯಾಗಿದೆ. ಅದೇ ರೀತಿ ಈ ಭಾಗದಲ್ಲೂ ಆಗುತ್ತದೆ. ಸ್ಥಳಿಯರು ರಾಜಕೀಯ ಬಿಟ್ಟು ಕೈಗಾರಿಕೆಗಳನ್ನು ಸ್ವಾಗತಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು. ಕಾಲ ಬದಲಾದಂತೆ ನಿರ್ವಹಣಾ ವೆಚ್ಚಗಳು ಹೆಚ್ಚಾಗುತ್ತಿವೆ. ಇದಕ್ಕೆ ತಕ್ಕಂತೆ ಪರಿಹಾರವನ್ನು ತಡ ಮಾಡದೆ ರೈತರಿಗೆ ಹಂಚಿಕೆ ಮಾಡಬೇಕು. ಭೂ ದಾಖಲೆಗಳಲ್ಲಿ ಏನಾದರು ವ್ಯತ್ಯಾಸಗಳು ಇದ್ದರೆ ತಾಲೂಕಿನ ಕಂದಾಯ ಅಧಿಕಾರಿಗಳು ಅದನ್ನು ಸರಿಪಡಿಸಿಕೊಡುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಕೋರಿದರು.