ದಕ್ಷಿಣವಲಯ ರೋಲ್‍ಬಾಲ್‍ಚಾಂಪಿಯನ್‍ಶಿಪ್ಎಸ್‍ಆರ್‍ಎನ್ ಮೆಹತಾ ಶಾಲೆಗೆ ಕಂಚಿನ ಪದಕ

ಕಲಬುರಗಿ,ಸೆ.20: ರೋಲ್‍ಬಾಲ್ ಫೆಡರೆಶನ್‍ಆಫ್‍ಇಂಡಿಯಾ ಸಂಸ್ಥೆ ಸೆ.13 ಮತ್ತು 14 ರಂದು ಕೇರಳದ ಕೋಲಂನಲ್ಲಿ ಆಯೋಜಿಸಿದ್ದ 6ನೇ ಸೌಥ್‍ಝೋನ್ ರೋಲ್‍ಬಾಲ್‍ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ನಗರದ ಎಸ್. ಆರ್. ಎನ್. ಮೆಹತಾ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿಕಂಚಿನ ಪದಕವನ್ನು ಪಡೆದುಶಾಲೆಗೆ ಮತ್ತು ಕಲಬುರಗಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
17ವರ್ಷದ ಒಳಗಿನಬಾಲಕರ ಸ್ಪರ್ಧೆಯಲ್ಲಿ ಶ್ರೇಯಸ್ಸ ಸಕ್‍ಪಾಲ, ಶಷೇಂದ್ರಆರ್ ಮತ್ತು ಸೃಜನ ಡಿ ತೃತಿಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಆಡಳಿತ ಮಂಡಳಿಯ ಟ್ರಸ್ಟಿಗಳಾದ ಚಕೋರ ಮೆಹತಾ, ಪ್ರಾಚಾರ್ಯರಾದ ಪ್ರೀತಿ ಮೆಹತಾ, ದೈಹಿಕ ಶಿಕ್ಷಣದ ವಿಭಾಗ ಮುಖ್ಯಸ್ಥರಾದ ಬಸವರಾಜ ತಳಕೇರಿ, ಸ್ಕೇಟಿಂಗ್ ತರಬೇತಿತಿದಾರ ಗಣೆಶಕಾಂದೆಹಾಗೂ ಶಿಕ್ಷಕ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.