ಅಫಜಲಪುರ ;ಸೆ.28: ಸುಮಾರು ದಿನಗಳಿಂದ ನೆರೆಯ ಮಹಾರಾಷ್ಟ್ರ ಉಜನಿ, ಸೀನಾ, ಜಲಾಶಯದಿಂದ ಅಪಾರ ಪ್ರಮಾಣದ ನೀರು ಹರಿಬಿಡುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಸೊನ್ನ ಬ್ಯಾರೇಜ್ ನಿಂದ 3.50 ಲಕ್ಷ ಕ್ಯೂಸೆಕ್ ಹೆಚ್ಚು ನೀರು ಇಲ್ಲಿಯವರೆಗೂ ಹರಿಬಿಟ್ಟಿದ್ದರು.
ನಿನ್ನೆ ಸಾಯಂಕಾಲದಿಂದ ನೀರಿನ ಮಟ್ಟ ಇಳಿಯಾಗುತ್ತಿದೆ. ಸರಿಸುಮಾರು ಒಂದುವರೆ ಮೀಟರ್ ಅಂದರೆ, 5 ಫೀಟ್ ಒಳ ಮತ್ತು ಹೊರ ಹರಿವು ಕಡಿಮೆಯಾಗುತ್ತಿದೆ. ಬೆಳಿಗ್ಗೆಯಿಂದ 2.90 ಲಕ್ಷ ಕ್ಯೂಸೆಕ್ ನೀರಿನ ಮಟ್ಟ ಇಳಿಕೆಯಾಗಿದೆ ಎಂದು ಕೆಎನ್ ಎಲ್ ಇಇ ಶಿವಕುಮಾರ್ ಸ್ವಾಮಿ ಸಂಜೆವಾಣಿ ಪ್ರತಿನಿಧಿಗೆ ಮಾಹಿತಿ ನೀಡಿದರು.

























