
ಬೀದರ್:ಜ.22:ಶೇರ್ ಕನ್ನಡ ಚಲನಚಿತ್ರದ ಹಾಡುಗಳು, ಟೀಜರ್ ಹಾಗೂ ಮೆಕಿಂಗ್ ವಿಡಿಯೋ ಬಿಡುಗಡೆ ಸಮಾರಂಭವನ್ನು ನಗರದ ನೆಹರು ಮೈದಾನದ ಸಮೀಪದಲ್ಲಿರುವ ಸಾಯಿ ಶಾಲೆ ಆವರಣದಲ್ಲಿ ಶನಿವಾರ ಸಂಜೆ 6 ಗಂಟೆಗೆ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಗ್ರೇಸ್ ಪದ್ಮಿನಿ ಸುಂದರರಾಜ ಅವರು ದೇವರ ಪ್ರಾರ್ಥನೆಯೊಂದಿಗೆ ಆರಂಭಿಸಿದರು. ನಂತರ ಹವಾ ಮಲ್ಲಿನಾಥ ಸ್ವಾಮಿಜಿ ಅವರು ದೀಪ ಬೆಳಗಿಸುವ ಮೂಲಕ ಸಮಾರಂಭಕ್ಕೆ ಅಧಿಕೃತ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶೇರ್ ಚಿತ್ರದ “ಗಿಲ್ಲಿ ಗೌರವ ಹಾಡುಗಳ ಬಿಡುಗಡೆಯನ್ನು ಪೂಜ್ಯ ಹವಾ ಮಲ್ಲಿನಾಥ ಸ್ವಾಮಿಜಿ ನೆರವೇರಿಸಿದರು. ಚಿತ್ರದ ಆಕರ್ಷಕ ನೃತ್ಯಗೀತೆಯನ್ನು ಖ್ಯಾತ ನಟಿ ನಮ್ರತಾ ಮಲ್ನಾ ಅವರು ಬಿಡುಗಡೆಗೊಳಿಸಿದರು. ಚಿತ್ರದ ಮೆಕಿಂಗ್ ವಿಡಿಯೋವನ್ನು ಮಾಜಿ ಸಚಿವ ಬಂಡೆಪ್ಪಾ ಖಾಶೆಂಪೂರ ಅವರು ಬಿಡುಗಡೆ ಮಾಡಿದರು. ಚಿತ್ರದ ಟೀಜರ್ ಅನ್ನು ಖ್ಯಾತ ನಟಿಯರಾದ ತನಿಶಾ ಕುಪ್ಪಂಡ ಹಾಗೂ ನಮ್ರತಾ ಮಲ್ನಾಡ ಬಿಡುಗಡೆಗೊಳಿಸಿದರು. ಚಿತ್ರದ ಟೈಟಲ್ ಸಾಂಗ್ ಅನ್ನು ಬೀದರ್ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಹಾಗೂ ಅವರ ಧರ್ಮಪತ್ನಿ ಗುಂಟಿ ಅವರು ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಚಿತ್ರದ ನಾಯಕ ನಟ ಕಿರಣರಾಜ್ ಹಾಗೂ ನಾಯಕ ನಟಿ ಸುರೇಖಾ, ಪೂಜ್ಯ ಮಲ್ಲಿಕಾರ್ಜುನ ಸ್ವಾಮಿಜಿ (ಶಹಾಪುರ), ಕ್ರೈಸ್ತ ಧರ್ಮಗುರುಗಳು ಹಾಗೂ ಶೇರ್ ಚಿತ್ರದ ಸಂಪೂರ್ಣ ತಂಡ,
ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ್ ಪಾಟೀಲ ಸೋಲಪುರ, ಪಕ್ಷದ ಜಿಲ್ಲಾ ಯುವ ಘಟಕದ ಅಧ್ಯಕ್ಷ ಬಸವರಾಜ ಪಾಟೀಲ ಹಾರೂರಗೇರಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆನಂದ ದೇವಪ್ಪ, ಬಸವರಾಜ ಹಾರೂರಗೇರಿ, ಅನಿಲ ಬೆಲ್ದಾರ, ಶಾಂತಲಿಂಗ ಸಾವಳಗಿ, ರಾಜು ಕಡ್ಯಾಳ, ಹೆಚ್.ಎಸ್. ಮಾರ್ಟಿನ್, ಖಳನಾಯಕ ಕ್ರಿಸ್, ಗುಂಡು ರೆಡ್ಡಿ ಸೇರಿದಂತೆ ಗಣ್ಯ ವ್ಯಕ್ತಿಗಳು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಸಾವಿರಾರು ಪ್ರೇಕ್ಷಕರು, ಚಲನಚಿತ್ರ ಪ್ರೇಮಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಚಿತ್ರ ನಟಿ ಅನೂಪಮಾ ಭಟ್ಟ ಅವರು ನಡೆಸಿಕೊಟ್ಟರು. ಶೇರ್ ಚಲನಚಿತ್ರದ ನಿರ್ಮಾಪಕ ಡಾ. ಸುದರ್ಶನ ಸುಂದರರಾಜ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಈ ಮಾಹಿತಿಯನ್ನು ನೀಡಿ ಚಿತ್ರವು ಶೀಘ್ರದಲ್ಲೇ ತೆರೆಕಾಣಲಿದೆ ಎಂದು ತಿಳಿಸಿದರು.
























