
ಸAಜೆವಾಣಿ ವಾರ್ತೆ
ಕೆಂಭಾವಿ:ಫೆ.೧೫:ಒAದು ಸಾವಿರ ವರ್ಷಗಳ ನಂತರ ಸೌರಾಷ್ಟç ಸೋಮನಾಥನ ದಿವ್ಯ ಜ್ಯೋತಿರ್ಲಿಂಗದ ದರ್ಶನ ಉತ್ತರ ಕರ್ನಾಟಕದಲ್ಲಿ ನಡೆಯಲಿದೆ ಎಂದು ಆರ್ಟ್ ಆಫ್ ಲೀವಿಂಗ್‌ನ ಗುರುಜಿ ಎಸ್.ಎಚ್.ರೆಡ್ಡಿ ಹೇಳಿದರು.
ಪಟ್ಟಣದ ಭೂಕೈಲಾಸ ಶ್ರೀ ಭೋಗೇಶ್ವರ ದೇವಸ್ಥಾನದಲ್ಲಿ ಶ್ರೀ ಸೋಮನಾಥ ಜೋತಿರ್ಲಿಂಗ ಕೆಂಭಾವಿ ಪಟ್ಟಣಕ್ಕೆ ಆಗಮನದ ಕುರಿತು ಕರೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮಾ.೫ ರಿಂದ ೭ ರವರೆಗೆ ಶ್ರೀ ಸೋಮನಾಥ ಜೋತಿರ್ಲಿಂಗ ಯಾದಗಿರಿ ಜಿಲ್ಲೆಯಲ್ಲಿ ಭಕ್ತರ ದರ್ಶನಕ್ಕೆ ಸಿಗಲಿದೆ. ಮಾ.೫ ರಂದು ಯಾದಗಿರಿ ನಗರದಲ್ಲಿ. ಮಾ.೬ ರಂದು ಶಹಾಪುರ ಹಾಗೂ ಸುರಪುರದಲ್ಲಿ ಹಾಗೂ ಮಾ.೭ ರಂದು ಕೆಂಭಾವಿಗೆ ಆಗಮಿಸಿ ಇಲ್ಲಿಂದ ಹುಣಸಗಿ ಪಟ್ಟಣಕ್ಕೆ ಪ್ರಯಾಣಿಸಲಿದೆ ಎಂದು ಹೇಳಿದರು.
ಆರ್ಟ್ ಆಫ್ ಲೀವಿಂಗ್ ಶಿಕ್ಷಕಿ ಶಿಲ್ಪಾ ಅವಂಟಿ ಮಾತನಾಡಿ, ಮಾ.೭ ರಂದು ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಕೆಂಭಾವಿ ಪಟ್ಟಣದಲ್ಲಿ ಜ್ಯೋತಿರ್ಲಿಂಗ್‌ದ ದರ್ಶನವಿರಲಿದೆ. ಜ್ಯೋತಿರ್ಲಿಂಗಕ್ಕೆ ಸತಿ-ಪತಿಗಳು ರುದ್ರಾಭಿಷೇಕ ಮಾಡುವ ಅವಕಾಶವಿರಲಿದೆ. ಶ್ರೀ ಭೋಗೇಶ್ವರ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳು ಜರುಗಲಿದೆ. ಈ ಭಾಗದ ಎಲ್ಲ ಭಕ್ತಾಧಿಗಳು ಆಗಮಿಸಿ ಜ್ಯೋತಿರ್ಲಿಂಗ್‌ದ ದರ್ಶನ ಪಡೆದು ಪುನೀತರಾಗಬೇಕು ಎಂದು ತಿಳಿಸಿದರು.
ವೇದಮೂರ್ತಿ ಚೆನ್ನಯ್ಯ ಚಿಕ್ಕಮಠ, ಪ್ರಮುಖರಾದ ಲಿಂಗನಗೌಡ ಮಾಲಿಪಾಟೀಲ, ಬಸವರಾಜ ಬೂದಿಹಾಳ, ಸುಮಿತ್ರಪ್ಪ ಸಾಹು ಅಂಗಡಿ, ಮೋಹನರೆಡ್ಡಿ ಡಿಗ್ಗಾವಿ, ಸಂಗಣ್ಣ ತುಂಬಗಿ, ಗುಡದಯ್ಯ ದಾವಣಗೇರಿ, ಎಸ್.ಬಿ.ಅಂಗಡಿ, ಮಲ್ಲು ಅಂಗಡಿ, ಚಂದ್ರಮೌಳಿ ಮಾಲಿಪಾಟೀಲ, ಪರಶುರಾಮ ನಾರಾಯಣಕರ್, ವೀರಣ್ಣ ಕಲಕೇರಿ, ಹಣಮಂತ ಪಡಸಾಲಿ, ಸುಗುರಯ್ಯ ಇಂಡಿ, ದೇವು ಹಡಪದ, ಮಹಾಂತೇಶ ಅಂಗಡಿ, ಡಿ.ಸಿ.ಪಾಟೀಲ ಸೇರಿದಂತೆ ಇತರರಿದ್ದರು.






















