
ಕಲಬುರಗಿ,ಜ 19: ನಗರದ ಶಾಹಬಜಾರ್‍ನ ಶ್ರೀ ಜಗದಂಬಾ ಮಂದಿರದಲ್ಲಿ ಶ್ರೀ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದ 2024 25ನೇ ಸಾಲಿನ ಸರ್ವ ಸಾಮಾನ್ಯ ಸಭೆ ಸಮಾಜದ ಅಧ್ಯಕ್ಷ ಶ್ರೀರಾಮ್ ಪವಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯನ್ನು ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಸಚಿವರಾದ ದಯಾನಂದ ಅಗಸರ ಉದ್ಘಾಟಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಶೇ.75 ಮತ್ತು ಅದಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಹಾಗೂ ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳಲ್ಲಿ ಶೇ.60ಕ್ಕಿಂತ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಮೊಮೆಂಟೊ ನೀಡಿ ಗೌರವಿಸಲಾಯಿತು. ಒಟ್ಟು ಸುಮಾರು 60 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಯಾಗಿ ಮಾತನಾಡಿದ ದಯಾನಂದ ಅಗಸರ ಅವರು, ಸಮಾಜದ ಮಕ್ಕಳ ಶಿಕ್ಷಣ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ, “ತಂದೆ-ತಾಯಿಗೆ ಗೌರವ ನೀಡುವ ಜೊತೆಗೆ ಉತ್ತಮ ಶಿಕ್ಷಣ ಪಡೆದು ಕುಟುಂಬ ಮತ್ತು ದೇಶದ ಅಭಿವೃದ್ಧಿಗೆ ಶ್ರಮಿಸಬೇಕು” ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ಸಭೆಯಲ್ಲಿ ಸಮಾಜದ 2024-25ನೇ ಸಾಲಿನ ಲೆಕ್ಕಪತ್ರವನ್ನು ಮಂಡಿಸಿ ಸಾಮಾನ್ಯ ಸಭೆಯಿಂದ ಅನುಮೋದನೆ ಪಡೆಯಲಾಯಿತು.
ಈ ಸಭೆಯಲ್ಲಿ ಡಾ. ಯಶವಂತ ರಾವ್ ಮೇಗಂಜಿ ಉಪಾಧ್ಯಕ್ಷ, ಕಾರ್ಯದರ್ಶಿ ವಿಷ್ಣುಸಾ ಲಿಂಗೂಸ ಬಾರಡ, ಜಂಟಿ ಕಾರ್ಯದರ್ಶಿ ರಮಾಕಾಂತ್ ಸುಭಾಷ್ ಚವ್ಹಾಣ, ಖಜಾಂಚಿ ನಾಗೇಶ್ ವೆಂಕಟಸಾ ಚೂಡಾಮಣಿ ಸೇರಿದಂತೆ ಕಾರ್ಯಕಾರಿ ಸಮಿತಿ ಸದಸ್ಯರಾದರಾಧೆ ಶಾಮ್ ಅಶೋಕ್ ಚವಾಣ್.ರಾಜೇಂದ್ರ ಕೃಷ್ಣಾತ್ಸಾ ಹಬೀಬ್, ಕಿಶೋರ್ ಅಂಬುಸಾ ಚವಾಣ್, ರಾಜೇಂದ್ರ ಬನ್ಸಿಲಾಲ್ಸ, ಅಂಬಾದಾಸ್ ಬುಡ್ಡಪ್ಪ ಮಿಸ್ಕಿನ್, ಡಾ. ಮುಕುಂದರಾವ್ ನಸಿರ್ಂಗ್ ರಾವ್, ರವೀಂದ್ರ ಕುಮಾರ್ ವಿಠ್ಠಲ್ ರಾವ್ ಮೆಂಗಜಿ, ನಾಗೇಂದ್ರ ಚಂದ್ರಕಾಂತ್ ಚವಾಣ್, ಶ್ರೀರಾಮ್ ಗೋಪಾಲ್ ಸಾ, ದಿನೇಶ್ ವೇದ್ ಪ್ರಕಾಶ್, ನಸಿರ್ಂಗ್ ಚಿಂತಾಮಣಿಸಾ, ಅನಿಲ್ ಪ್ರಕಾಶ್ಸಾ , ಕಿರಣ್ಸ ತುಳಜನ್ಸಾ, ಸುಭಾಷ್ ಚಂದ್ರುಲಾಸ್ ಸೇರಿದಂತೆ ಸಮಾಜದ ಗಣ್ಯರು ಉಪಸ್ಥಿತರಿದ್ದರು. ಸಮಾಜದ ಮುಂದಿನ ಕಾರ್ಯಯೋಜನೆಗಳ ಕುರಿತು ಚರ್ಚಿಸಲಾಯಿತು ಎಂದು ರವೀಂದ್ರ ಕುಮಾರ್ ಮೆಂಗಜಿ ಅವರು ತಿಳಿಸಿದ್ದಾರೆ.

























